ರಾಜಕೀಯ

ಬೆಂಗಳೂರು: ಎಎಪಿಯ ವಿಕಲಚೇತನ ಬೆಂಬಲಿಗರನ್ನು ತಡೆದ ಚುನಾವಣಾ ಅಧಿಕಾರಿಗಳು

Lingaraj Badiger

ಬೆಂಗಳೂರು: ಚಿಕ್ಕಪೇಟೆಯ ಸಜ್ಜನ್ ರಾವ್ ವೃತ್ತದಲ್ಲಿ ಬುಧವಾರ ಸಂಜೆ 4 ಗಂಟೆಗೆ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ಸುಮಾರು 50 ಮಂದಿ ವಿಕಲಚೇತನ ಆಪ್ ಬೆಂಬಲಿಗರನ್ನು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕೇಶವ ವಿಸಿ ಅವರು ತಡೆದು ನಿಲ್ಲಿಸಿದ್ದಾರೆ.

ವಿಕಲಚೇತನ ವ್ಯಕ್ತಿಗಳು ಗಾಲಿಕುರ್ಚಿಗಳನ್ನು ಬಳಸುತ್ತಿದ್ದರು. ಹೀಗಾಗಿ ಎಎಪಿ ಈ ಪ್ರಚಾರಕ್ಕೆ ಅನುಮತಿ ಪಡೆಯಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಪಿ ಕಾರ್ಯಕರ್ತರು ತಮಗೆ ಅಗತ್ಯವಿರುವ ಅನುಮತಿಗಳನ್ನು ಹೊಂದಿದ್ದಾರೆ ಎಂದು ಪರಿಶೀಲಿಸಿದಾಗ, ಅವರು ಯಾವುದೇ ಅನುಮತಿ ಪಡೆದಿರಲಿಲ್ಲ. ಗಾಲಿಕುರ್ಚಿಗಳನ್ನು ಸಹ ವಾಹನಗಳು ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎಎಪಿಗೆ ವಾಹನಗಳ ಬಳಕೆಗೆ ಅನುಮತಿ ಪಡೆದಿದೆ. ಆದರೆ ವೀಲ್‌ಚೇರ್ ಒಂದು `ವಾಹನವಾಗಿದ್ದು,  ಅಂಗವಿಕಲರಾಗಿದ್ದರೆ ಅವರ ವಾಹನಕ್ಕೆ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯ ಇದೆ ಎಂದು ಅಧಿಕಾರಿಗಳು ಸ್ಥಳದಲ್ಲೇ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಈ ವೇಳೆ ಚುನಾವಣಾ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಎಪಿ ಕಾರ್ಯಕರ್ತರು, ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು "ಭಾರತ್ ಮಾತಾ ಕಿ ಜೈ," ಎಂದು ಹೇಳಿದರು.

ವಿಕಲಚೇತನ ಒಬ್ಬರಾದ ಮುನಿಸ್ವಾಮಿ ಶ್ರೀನಿವಾಸ್ ಅವರು ಮಾತನಾಡಿ, "ಇದು ವಾಸ್ತವಿಕವಾಗಿ ನಮ್ಮ ದೇಹದ ಒಂದು ಭಾಗವಾಗಿದೆ. ನಮಗೆ ಕಾಲುಗಳಿಲ್ಲ, ಆದ್ದರಿಂದ ಇದನ್ನು ಬಳಸುತ್ತೇವೆ. ಇದನ್ನು ವಾಹನವೆಂದು ನೀವು ಹೇಗೆ ಪರಿಗಣಿಸುತ್ತೀರಿ?" ಎಂದು ಪ್ರಶ್ನಿಸಿದರು.

SCROLL FOR NEXT