ರಾಜಕೀಯ

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸಚಿವ ಕೆ ಎಚ್​ ಮುನಿಯಪ್ಪ

Lingaraj Badiger

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಆಹಾರ ಖಾತೆ ಸಚಿವ ಕೆ.ಎಚ್​.ಮುನಿಯಪ್ಪ ಅವರು ಬುಧವಾರ ಹೇಳಿದ್ದಾರೆ. 

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್​.ಮುನಿಯಪ್ಪ ಅವರು, , ರಾಜಕೀಯವಾಗಿ‌ ಪಕ್ಷ ಬಲಪಡಿಸಬೇಕಾದ್ರೆ ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಬೇಕಾದರೆ ಸಚಿವ ಸ್ಥಾನ ಬಿಟ್ಟು ಕೊಡ್ತೀನಿ. ನನಗೇನು ಅಭ್ಯಂತರ ‌ಇಲ್ಲ ಎಂದಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್​​ ತೀರ್ಮಾನ ಮಾಡಿದರೆ ನೋಡೋಣ. ಆದರೆ ಯುವಕರಿಗೆ ಅವಕಾಶ ಸಿಗಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಚಿವ ಮುನಿಯಪ್ಪ ಅವರು ಹೇಳಿದ್ದಾರೆ.

ಆಹಾರ ಇಲಾಖೆಗೆ ಯಾವುದೇ ಅನುದಾನದ ಕೊರತೆ ಇಲ್ಲ. ಬಜೆಟ್​ನಲ್ಲಿ ಇಲಾಖೆಗೆ 10 ಸಾವಿರ ಕೋಟಿ‌ ರೂಪಾಯಿ ಕೊಟ್ಟಿದ್ದಾರೆ. ಅಕ್ಕಿ‌ ನೀಡುವ ಭರವಸೆ ಕೊಟ್ಟು ನಾವು ಅಧಿಕಾರಕ್ಕೆ ಬಂದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಸಾಕಷ್ಟು ಅನುಭವ ಇದೆ ಎಂದರು.

ಅನ್ನ ಭಾಗ್ಯ ವಿಚಾರವಾಗಿ ಆಂಧ್ರಕ್ಕೆ ಹೋಗಿ ಬಂದಿದ್ದೇನೆ. ಒಂದು ವಾರದಲ್ಲಿ ವಿಚಾರ ಮಾಡಿ ಹೇಳುವುದಾಗಿ ಹೇಳಿದ್ದಾರೆ. ತೆಲಂಗಾಣದಲ್ಲೂ ಭೇಟಿಯಾಗಿ ಬಂದಿದ್ದೇನೆ. ಪ್ರತಿ ತಿಂಗಳು ಎರಡುವರೆ ಟನ್ ಅಕ್ಕಿ ಬೇಕಿದೆ. ಆಂಧ್ರದಲ್ಲಿ ಮತ್ತು ತೆಲಂಗಾಣದಲ್ಲಿ ಅಕ್ಕಿ ಲಭ್ಯತೆ ಇದೆ ಎಂದು ಆಹಾರ ಸಚಿವರು ಹೇಳಿದ್ದಾರೆ.

SCROLL FOR NEXT