ರಾಜಕೀಯ

ಮೌಲ್ವಿ ತನ್ವೀರ್ ಹಶ್ಮಿಯೊಂದಿಗೆ ಯಾವುದೇ ವ್ಯವಹಾರಿಕ ಪಾಲುದಾರಿಕೆ ಹೊಂದಿಲ್ಲ: ಯತ್ನಾಳ್

Lingaraj Badiger

ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಜಮಾತ್ ಎ ಅಹಲೆ ಸುನ್ನತ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮೌಲ್ವಿ ತನ್ವೀರ್ ಹಶ್ಮಿ ನಡುವಿನ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಮೌಲ್ವಿ ತನ್ವೀರ್ ಹಶ್ಮಿ ಅವರಿಗೆ ಉಗ್ರ ಸಂಘಟನೆ ಐಸಿಸ್ ನಂಟು ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದು, ಇದು ಬೇರೆ ಬೇರೆ ಆಯಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಾಸಕ ಯತ್ನಾಳ್ ಹಾಗೂ ಮೌಲ್ವಿ ತನ್ವೀರ್ ಹಶ್ಮಿ ನಡುವೆ ವೈಯಕ್ತಿಕ ಸಂಘರ್ಷ ಇದೆ. ಯತ್ನಾಳ್ ಹಾಗೂ ಹಶ್ಮಿ ಕುಟುಂಬ ವ್ಯವಹಾರಿಕ ಪಾಲುದಾರಿಕೆ ಹೊಂದಿದ್ದಾರೆ. ವಿಜಯಪುರದವರಾದ ಈ ಇಬ್ಬರೂ ಗಾಂಧಿಚೌಕ್ ಬಳಿಯಿರುವ ‘ಟೂರಿಸ್ಟ್‌ ಹೋಟೆಲ್‌’ನ ಪಾಲುದಾರರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಈ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಬಿಜೆಪಿ ಫೈರ್ ಬ್ರಾಂಡ್ ಶಾಸಕ, ಮೌಲ್ವಿ ತನ್ವೀರ್ ಹಶ್ಮಿ ಕುಟುಂಬದ ಜೊತೆಗೆ ನಾನು ಯಾವುದೇ ವ್ಯವಹಾರಿಕ ಪಾಲುದಾರಿಕೆ ಹೊಂದಿಲ್ಲ. ನನ್ನ ವಿರುದ್ಧದ ಆರೋಪ ಸುಳ್ಳು ಎಂದು ಹೇಳಿದ್ದಾರೆ.

SCROLL FOR NEXT