ಎಚ್.ಡಿ ದೇವೇಗೌಡ ಮತ್ತು ಭವಾನಿ ರೇವಣ್ಣ 
ರಾಜಕೀಯ

ಹಾಸನವೇ ಮಗ್ಗುಲ ಮುಳ್ಳಾಗಿದೆಯಲ್ಲವೇ? ನಿಷ್ಠಾವಂತರ ಕಡೆಗಣಿಸಿ, ಕುಟುಂಬದ 9 ಮಂದಿಗೆ ಮಣೆ ಹಾಕಿರುವುದನ್ನು ಏನನ್ನಬೇಕು?: ಬಿಜೆಪಿ

ಕುಟುಂಬ ರಾಜಕಾರಣದ ತುತ್ತತುದಿಯಲ್ಲಿ ಇರುವ ಕುಮಾರಸ್ವಾಮಿ ಅವರು, ಮತ್ತೊಬ್ಬರತ್ತ ಬೊಟ್ಟು ಮಾಡಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದಿರುವುದು ಹಾಸ್ಯಾಸ್ಪದ. ಸೂಟ್ ಕೇಸ್ ತಲುಪಿಸದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಕುಟುಂಬದ 9 ಮಂದಿಗೆ ಮಣೆ ಹಾಕಿರುವುದನ್ನು ಏನನ್ನಬೇಕು?

ಬೆಂಗಳೂರು: ಕುಟುಂಬ ರಾಜಕಾರಣದ ತುತ್ತತುದಿಯಲ್ಲಿ ಇರುವ ಕುಮಾರಸ್ವಾಮಿ ಅವರು, ಮತ್ತೊಬ್ಬರತ್ತ ಬೊಟ್ಟು ಮಾಡಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದಿರುವುದು ಹಾಸ್ಯಾಸ್ಪದ. ಸೂಟ್ ಕೇಸ್ ತಲುಪಿಸದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಕುಟುಂಬದ 9 ಮಂದಿಗೆ ಮಣೆ ಹಾಕಿರುವುದನ್ನು ಏನನ್ನಬೇಕು? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ,  ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಚಾಳಿ ಜೆಡಿಎಸ್‌ - ಕಾಂಗ್ರೆಸ್‌ ಪಕ್ಷಗಳದ್ದು. ಕುಟುಂಬ ರಾಜಕಾರಣವನ್ನೇ ಆವಾಹಿಸಿಕೊಂಡಿರುವ ಗಾಂಧಿ ಮತ್ತು ಜೆಡಿಎಸ್ ಪರಿವಾರವನ್ನು ಜನ ತಿರಸ್ಕರಿಸಿದರೂ ಬುದ್ಧಿ ಕಲಿಯುತ್ತಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವರೇ, ಹಾಸನವೇ ನಿಮಗೆ ಮಗ್ಗುಲ ಮುಳ್ಳಾಗಿದೆಯಲ್ಲವೇ? ಎಂದು ಬಿಜೆಪಿ ಟೀಕಿಸಿದೆ. 

ಪುತ್ರ ವ್ಯಾಮೋಹಕ್ಕಾಗಿ ತಂದೆಯವರ ಕ್ಷೇತ್ರವನ್ನು ಪಣಕ್ಕಿಟ್ಟು ಸೋಲಿಗೆ ಕಾರಣವಾಗಿದ್ದ ಕುಮಾರಸ್ವಾಮಿ ಅವರಿಗೆ ಪ್ರಾಯಶ್ಚಿತವಾಗಿಲ್ಲವೇ? ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕೊನೆ ಚುನಾವಣೆಯನ್ನು ಕುಟುಂಬ ರಾಜಕಾರಣಕ್ಕಾಗಿ ಬಲಿಕೊಟ್ಟದ್ದು ದುರಂತ ಎಂದು ಬಿಜೆಪಿ ದೂರಿದೆ.

‘ಅಧಿಕಾರದ ಮದದಿಂದ ಮಂಡ್ಯ ಲೋಕಸಭಾ ಚುನಾವಣೆ ಗೆಲ್ಲಲು ಯತ್ನಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜನತೆ ತಕ್ಕ ಉತ್ತರ ಕೊಟ್ಟು, ಕುಟುಂಬ ರಾಜಕಾರಣದ ಚಿಗುರನ್ನು ಚಿವುಟಿದರು. ಆದರೂ, ರಾಮನಗರದಲ್ಲಿ ಮತ್ತೊಮ್ಮೆ ಪುತ್ರನನ್ನು ಅಖಾಡಕ್ಕೆ ಇಳಿಸುತ್ತಿರುವುದು, ತಮ್ಮ ಸೋಲಿಗೂ ಕಾರಣವಾಗಬಹುದೆಂಬ ಆತಂಕ ಕುಮಾರಸ್ವಾಮಿ ಅವರಿಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಜೆಡಿಎಸ್‌ನಲ್ಲಿ ಮಕ್ಕಳು ಮೊಮ್ಮಕ್ಕಳ ಆದಿಯಾಗಿ ಸೊಸೆಯಂದಿರು ರಾಜಕಾರಣದಲ್ಲಿ ಸಕ್ರಿಯ. ಎಚ್‌.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿ  ಮೂರು ಬಾರಿ ಶಾಸಕಿಯಾಗಬಹುದು. ಆದರೆ, ನಿಮ್ಮ ಅತ್ತಿಗೆ ಒಂದು ಬಾರಿಯೂ ಶಾಸಕಿಯಾಗಬಾರದೇ? ನಿಮ್ಮ ಕುಟುಂಬ ಕಲಹದಲ್ಲಿ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಿ ಬಿಟ್ಟರಲ್ಲಾ ಎಂದು ಬಿಜೆಪಿ ಕಾಲೆಳೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT