ರಾಜಕೀಯ

'ಗೃಹಲಕ್ಷ್ಮಿ' ಯೋಜನೆ ಉದ್ಯೋಗ ಸೃಷ್ಟಿ ಪರಿಕಲ್ಪನೆಗೆ ವಿರುದ್ಧವಾಗಿದೆ, ಕಾಂಗ್ರೆಸ್ ನಿಂದ ಬರೀ ಸುಳ್ಳು ಭರವಸೆ: ಬಿಜೆಪಿ ಟೀಕೆ

Sumana Upadhyaya

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆ ವಿವಿಧ ಪಕ್ಷಗಳ ಘೋಷಣೆಗಳು, ಭರವಸೆಗಳು ಒಂದೊಂದೇ ಹೊರಬರುತ್ತಿವೆ. ನಿನ್ನೆ 'ನಾ ನಾಯಕಿ' ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಿದ್ದ ಕಾಂಗ್ರೆಸ್ ಪಕ್ಷ ಚುನಾವಣಾ ಆಶ್ವಾಸನೆಯಾಗಿ ‘ಗೃಹಲಕ್ಷ್ಮಿ’ ಯೋಜನೆ ಘೋಷಿಸಿದೆ. 

ಪ್ರತಿ ಮನೆಯ ಒಬ್ಬ ಗೃಹಿಣಿಗೆ ಮಾಸಿಕ 2,000 ರೂಪಾಯಿ ನೀಡುವ ಯೋಜನೆ ಇದಾಗಿದೆ. ಇದಕ್ಕೆ ಟೀಕೆ ವ್ಯಕ್ತಪಡಿಸಿರುವ ಬಿಜೆಪಿ, ಇದು ಉದ್ಯೋಗ ಸೃಷ್ಟಿಯ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. 

ಪಕ್ಷವು ಅಧಿಕಾರಕ್ಕೆ ಬಂದರೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಘೋಷಣೆಯನ್ನು ಅದು "ಹುಸಿ ಭರವಸೆ" ಎಂದು ಲೇವಡಿ ಮಾಡಿದೆ. PriyankaKeFakePromises ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ಗಳಲ್ಲಿ, ಬಿಜೆಪಿಯು ಹಳೆಯ ಪಕ್ಷದ ಮೇಲೆ ದಾಳಿ ಮಾಡಿದೆ, ಇಂತಹ ಅಪ್ರಾಯೋಗಿಕ ಭರವಸೆಗಳನ್ನು ನೀಡುವ ಬಿಜೆಪಿ ಪಕ್ಷ ಅಸ್ತಿತ್ವದ ಬಿಕ್ಕಟ್ಟಿನಲ್ಲಿದೆ ಎಂದು ವ್ಯಂಗ್ಯ ಮಾಡಿದೆ. 

"ಕರ್ನಾಟಕದಲ್ಲಿ ಗೃಹಲಕ್ಷ್ಮಿ ಪರಿಕಲ್ಪನೆಯನ್ನು ಬಿಜೆಪಿ ತೇಲಿಬಿಟ್ಟಿದೆ. ರಾಜ್ಯವು ಉದ್ಯೋಗ ಸೃಷ್ಟಿಯತ್ತ ದಾಪುಗಾಲು ಹಾಕುತ್ತಿರುವಾಗ ಕಾಂಗ್ರೆಸ್ ನಿರುದ್ಯೋಗವನ್ನು ಹುಡುಕುತ್ತಿದೆ" ಎಂದು ಟ್ವೀಟ್ ಮಾಡಿದೆ.

ಛತ್ತೀಸ್‌ಗಢದಲ್ಲಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 2,500 ರೂಪಾಯಿ, ರಾಜಸ್ಥಾನದಲ್ಲಿ ನಿರುದ್ಯೋಗಿ ಮಹಿಳೆಯರಿಗೆ 3,500 ರೂಪಾಯಿ, ಹಿಮಾಚಲ ಪ್ರದೇಶದಲ್ಲಿ ಎಲ್ಲಾ ಮಹಿಳೆಯರಿಗೆ 1,500 ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಅಲ್ಲಿ ತನ್ನ ಭರವಸೆಯನ್ನು ಇನ್ನೂ ಈಡೇರಿಸಿಲ್ಲ, ಅದನ್ನು ನೆನಪಿಟ್ಟುಕೊಳ್ಳಲಿ ಎಂದು ಹೇಳಿದೆ. 

ಕಾಂಗ್ರೆಸ್ ಇನ್ನಷ್ಟು ಯೋಜನೆಗಳನ್ನು ಪ್ರಕಟಿಸಲಿ. ಪ್ರತಿಯೊಬ್ಬರೂ ದೇಶದಲ್ಲಿ ಇಂದು ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಯಾವ ರೀತಿ ಹೋರಾಡುತ್ತಿದೆ ಎಂದು ನೋಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯವರಿಗೆ ಈಗ ನೀಡಿರುವ ಭರವಸೆ ಮುಂದಿನ ಕ್ಷಣ ನೆನಪಿರುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

SCROLL FOR NEXT