ರಾಜಕೀಯ

ಅಗತ್ಯ ಹುದ್ದೆಗಳ ಇಂದಿನ ದರ: ಎಟಿಎಂ ಸರ್ಕಾರದಲ್ಲಿ ವರುಣಾದ ನಿರುದ್ಯೋಗಿ 'ಶ್ಯಾಡೋ ಸಿಎಂ' ಹಸ್ತಕ್ಷೇಪ!

Shilpa D

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ  ಹರಿ ಹಾಯ್ದಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಎಟಿಎಂ ಸರ್ಕಾರದಲ್ಲಿ ಶ್ಯಾಟೋ ಸಿಎಂ ಯತೀಂದ್ರ ಹಸ್ತಕ್ಷೇಪ ಮಿತಿ ಮೀರಿದೆ ಎಂದು ಲೇವಡಿ ಮಾಡಿದೆ.

ನಾಮಕಾವಸ್ಥೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನ ಶ್ಯಾಡೋ ಸಿಎಂ ಮಾಡಿ, ಅಧಿಕಾರವನ್ನು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರಿಗೆ ಕೊಟ್ಟಿದ್ದಾರೆ. ಪರಿಣಾಮ, ರಾಜ್ಯದಲ್ಲಿ ಸಚಿವರು, ಶಾಸಕರ ಸಂಬಂಧಿಕರ ದರ್ಬಾರ್ ಜೋರಾಗಿದೆ ಎಂದು ಆರೋಪಿಸಿದೆ. ಇನ್ನೂ ರಾಜ್ಯದಲ್ಲಿ ತರಕಾರಿಗಳ ದರ ಪಟ್ಟಿ ಜೊತೆಗೆ ಯಾವ್ಯಾವ ಹುದ್ದೆ ವರ್ಗಾವಣೆಗೆ ಎಷ್ಟೆಷ್ಟು ಹಣ ನೀಡಬೇಕೆಂಬ ಬಗ್ಗೆಯೂ ಬಿಜೆಪಿ ಟ್ವೀಟ್ ಮಾಡಿದೆ.

ತರಕಾರಿ:
ಟೊಮೆಟೊ -120-130,  ಬೀನ್ಸ್‌ - 120, ಕ್ಯಾರೆಟ್‌ - 110,  ಹಸಿಮೆಣಸಿನಕಾಯಿ - 170

ವರ್ಗಾವಣೆ ತರಹೇವಾರಿ:
ಮುಖ್ಯ ಎಂಜಿನಿಯರ್: 5‌ ಕೋಟಿ
ಜಿಲ್ಲಾ ಆರೋಗ್ಯಾಧಿಕಾರಿ: 2 ಕೋಟಿ
ಲೆಕ್ಕಾಧಿಕಾರಿ:  2.25 ಕೋಟಿ
ತಹಶೀಲ್ದಾರ್‌: 1.25 ಕೋಟಿ

ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌:
ಬೆಂಗಳೂರು ನಗರ - 1.5 ಕೋಟಿ
ಜಿಲ್ಲಾ ಕೇಂದ್ರ - 80 ಲಕ್ಷ
ತಾಲ್ಲೂಕು ಕೇಂದ್ರ: 40 ಲಕ್ಷ

ಕೇಂದ್ರದ ಸುರ್ಜೇವಾಲಾ ಕಮಿಷನ್‌ ಪ್ರತ್ಯೇಕ. ಪ್ರಕಟನೆ : #ATMsarkara ದ ಪರವಾಗಿ #ShadowCM Yatindra. ಎಂದು ಬಿಜೆಪಿ ಟಾಂಗ್ ನೀಡಿದೆ.

ರಾಜ್ಯದ ಎಟಿಎಂ ಸರ್ಕಾರದಲ್ಲಿ ವರುಣಾದ ನಿರುದ್ಯೋಗಿ #ShadowCM ಯತೀಂದ್ರ ಸಿದ್ದರಾಮಯ್ಯರ ಹಸ್ತಕ್ಷೇಪ ಮಿತಿ ಮೀರಿದೆ. ಒಂದೇ ಹುದ್ದೆಗೆ ಹಲವು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರ ನೀಡುವುದು, ಕಾರ್ಯವಾದ ಬಳಿಕ ವ್ಯವಹಾರ ಕುದುರದಿದ್ದಲ್ಲಿ,  ಆದೇಶವನ್ನು ಹಿಂಪಡೆಯುವುದು! ಹೀಗೆ ಹಲವಾರು ಅಕ್ರಮಗಳನ್ನು ಮುಖ್ಯಮಂತ್ರಿ ಕಚೇರಿ ಮೂಲಕ ರಾಜಾರೋಷವಾಗಿ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇಷ್ಟು ಸಾಲದ್ದಕ್ಕೆ, ತನಗೊಂದು ಸಾಂವಿಧಾನಿಕ ಹುದ್ದೆ ಕಬಳಿಸಿಕೊಂಡು, ತನ್ನ ಅಕ್ರಮ ದಂಧೆಗಳಿಗೆ ಸಕ್ರಮದ ಲೇಬಲ್ ಅಂಟಿಸುವ ಬಗ್ಗೆ ಗಾಢವಾಗಿ ಸ್ಕೆಚ್ ಹಾಕಿದ್ದಾರೆ! ಎಂದು ಬಿಜೆಪಿ ಟೀಕಿಸಿದೆ.

SCROLL FOR NEXT