ರಾಜಕೀಯ

ವಿಡಿಯೋ ವೈರಲ್ ಆಗುತ್ತಿದ್ದಂತೆ ಉಲ್ಟಾ ಹೊಡೆದ ಸಚಿವ: ಬಿಜೆಪಿ ವಿರುದ್ಧ ಚಲುವರಾಯಸ್ವಾಮಿ ಕಿಡಿ, ಮಾಧ್ಯಮದವರ ಮೇಲೆ ಸಿಟ್ಟು!

Shilpa D

ಮಂಡ್ಯ:  ಕಾಂಗ್ರೆಸ್​ ಸರ್ಕಾರದ ಉಚಿತ ಗ್ಯಾರಂಟಿ ವಿಚಾರವಾಗಿ ತಮ್ಮ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದ್ದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿಂದು ಮಾತನಾಡಿದ ಅವರು, ನಾನು ಗಿಮಿಕ್ ಅಂತ ಹೇಳಿಲ್ಲ. ಅದ್ಯಾಕೆ ಸುಮ್ನೆ ಏನೇನೋ ಮಾತನಾಡುತ್ತೀರಿ. ಬಿಜೆಪಿಯವರಿಗೆ ವೈರಲ್ ಅಲ್ದೇ ಇನ್ನೊಂದು ಮಾಡೋಕೆ ಹೇಳಿ? ಎಂದು ತಮ್ಮ ಹೇಳಿಕೆ ವೈರಲ್​ ಆದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಎಲ್ಲರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ಕೊಡುತ್ತಾರೆ. ಅದೇ ರೀತಿ ನಾವು ಚುನಾವಣೆಯಲ್ಲಿ ಭರವಸೆ ಕೊಟ್ಟಿದ್ದೇವೆ. ಇದೀಗ ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಿದ್ದೇವೆ. ಆದರೆ ತಮಿಳುನಾಡು  ತರಹ ಉಚಿತ ಯೋಜನೆ  ಜಾಸ್ತಿ ಆಯ್ತು ಅಂತ ಜನ ಹೇಳುತ್ತಾರೆ ಎಂದು ಹೇಳಿದರು.

ಬಿಜೆಪಿ ಯಾವುದಾದರೂ ಬಿಟ್ಟಿಗಳನ್ನು ಜಾರಿಗೆ ತಂದಿದೆಯೇ. ಅವರು ವೀಡಿಯೊ ಕ್ಲಿಪ್ ಅನ್ನು ವೈರಲ್ ಮಾಡಲಿ ಅಥವಾ ಬೇರೆ ಇನ್ನೇನ್ನನಾದರೂ  ಮಾಡಲಿ ಎಂದು ಅವರು ಸುದ್ದಿಗಾರರ ವಿರುದ್ಧ ಕಿಡಿಕಾರಿದರು.  ತಾಳ್ಮೆ ಕಳೆದುಕೊಂಡ ಅವರು ವರದಿಗಾರರಿಗೆ ಏಕವಚನದಲ್ಲಿ ಮಾತನಾಡಿದರು.

"ಗಾಂಧೀಜಿಯವರು "ಅಂತ್ಯಕ್ಕಿಂತ ಅರ್ಥ ಮುಖ್ಯ" ಎಂದು ಹೇಳಿದ್ದರು.. ಈಗ ರಾಜಕಾರಣಿಗಳು ಬೇರೆಯದ್ದನ್ನೇ ಮಾಡುತ್ತಿದ್ದಾರೆ.. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯ, ಕಾಪಿ ಮಾಡುವುದು ಅಥವಾ ಮೋಸ ಮಾಡುವುದು ಮುಖ್ಯ ಎಂದಿದ್ದಾರೆ.  ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸ್ವಲ್ಪ ಸದ್ಬುದ್ಧಿಯನ್ನು ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿಶ್ಲೇಷಿಸಿದ್ದಾರೆ.

SCROLL FOR NEXT