ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಕಾಂಗ್ರೆಸ್ ಸೇರಲು ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ನಿರ್ಧಾರ

ಅರಸಿಕೆರೆಯ ಹಾಲಿ ಶಾಸಕ ಜೆಡಿಎಸ್ ನ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ಗುರುವಾರ ಘೋಷಿಸಿದ್ದಾರೆ.

ಕೆಎಂ ಶಿವಲಿಂಗೇಗೌಡ
Srinivas Rao BV
Updated On : 3 Mar 2023, 1:58 pm

ಹಾಸನ: ಅರಸಿಕೆರೆಯ ಹಾಲಿ ಶಾಸಕ ಜೆಡಿಎಸ್ ನ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ಗುರುವಾರ ಘೋಷಿಸಿದ್ದಾರೆ.
 
ತಮ್ಮ ಬೆಂಬಲಿಗರು, ಅನುಯಾಯಿಗಳ ಆಶಯದಂತೆ ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ಶಿವಲಿಂಗೇಗೌಡ ಹೇಳಿದ್ದಾರೆ. ಸ್ಥಳೀಯ ನಾಯಕರು ಹಾಗೂ ಅನುಯಾಯಿಗಳೊಂದಿಗಿನ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಶಿವಲಿಂಗೇಗೌಡ ಪತ್ರಕರ್ತರಿಗೆ ತಿಳಿಸಿದ್ದಾರೆ.

ಶಿವಲಿಂಗೇಗೌಡ ಕಾಂಗ್ರೆಸ್ ಗೆ ಸೆರ್ಪಡೆಯಾದರೆ, 2023 ರ ಚುನಾವಣೆಯಲ್ಲಿ ಸಾಮೂಹಿಕವಾಗಿ ಬೆಂಬಲಿಸುವುದಾಗಿ ಬೆಂಬಲಿಗರು ಘೋಷಿಸಿದ್ದಾರೆ. ವಿಪಕ್ಷ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶಿವಲಿಂಗೇ ಗೌಡ ಕಾಂಗ್ರೆಸ್ ಸೇರಲಿದ್ದಾರೆ. 

ಇದನ್ನೂ ಓದಿ: 'ರಾಜಕೀಯವಾಗಿ ಬೆಳೆಯುವ ದಿನಗಳಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಅವಶ್ಯಕತೆ ಇತ್ತು, ಈಗ ಬೇಡವಾಗಿದೆ'

Advertisement

Advertisement

ಮಾರ್ಚ್ 05 ರಂದು ಸಿದ್ದರಾಮಯ್ಯ ಅರಸಿಕೆರೆಗೆ ಭೇಟಿ ನೀಡುತ್ತಿದ್ದು, ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಉದ್ಘಾಟಿಸಲಿದ್ದಾರೆ. ಅಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement