ರಾಜಕೀಯ

ರಾಮನಗರ: ಪ್ರೋಟೋಕಾಲ್ ವಿಚಾರದಲ್ಲಿ ಸಚಿವ ಅಶ್ವತ್ಥ ನಾರಾಯಣಗೆ ಡಿ.ಕೆ.ಸುರೇಶ್ ತರಾಟೆ!

Nagaraja AB

ರಾಮನಗರ: ಪ್ರೋಟೋಕಾಲ್ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಸಂಸದ ಡಿ.ಕೆ. ಸುರೇಶ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆಯಿತು.  

ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಡಾ. ಕೆ. ಸುಧಾಕರ್ ಮತ್ತು ಅಶ್ವತ್ಥ ನಾರಾಯಣ ಅವರನ್ನು ತಡೆದ ಡಿ.ಕೆ. ಸುರೇಶ್, ಪ್ರೋಟೋಕಾಲ್ ವಿಚಾರದಲ್ಲಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಗುಡುಗಿದರು.

'ಏಯ್ ನಿಲ್ರಿ ಮಂತ್ರಿಗಳೇ, ನಿಂತುಕೊಳ್ಳಿ, ನಾನು ಈ ಕ್ಷೇತ್ರದ ಪ್ರತಿನಿಧಿ. ನನಗೂ ಪ್ರೋಟೋಕಾಲ್ ಇದೆ. ನಿಮ್ಮ ಒಬ್ಬರಿಗೆ ಅಲ್ಲ, ಯಾವಾನ್ರಿ ಅವನು ಡೆಪ್ಯುಟಿ ಕಮಿಷನರ್, ಸಿಇಒ ಕರೀರಿ ಅಂತಾ' ಏರು ಧ್ವನಿಯಲ್ಲಿ ರೇಗಾಡಿದರು. ಜಿಲ್ಲಾ ಉಸ್ತುವಾರಿ ಸಚಿವರೇ ಪೋಟೋಕಾಲ್ ಗೊತ್ತಿಲ್ಲವಾ? ನಿನ್ನೆ ರಾತ್ರಿ ಆಹ್ವಾನ ಪತ್ರ ನೀಡ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇಷ್ಮೆ ನಗರಿಯಲ್ಲಿ ಸುಮಾರು 99.63 ಕೋಟಿ ರೂ. ವೆಚ್ಚದಲ್ಲಿ 500 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇದರ ಕ್ರೆಡಿಟ್ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

SCROLL FOR NEXT