ರಾಜಕೀಯ

ಗದಗ: ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ 'ಒಂದು ರೂಪಾಯಿ-ಒಂದು ರೊಟ್ಟಿ' ಅಭಿಯಾನ ಆರಂಭ

Manjula VN

ಗದಗ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಗದಗದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ‘ಒಂದು ರೂಪಾಯಿ-ಒಂದು ರೊಟ್ಟಿ’ ಪ್ರಚಾರವನ್ನು ಆರಂಭಿಸಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಮೆಣಸಿನಕಾಯಿ ಅವರು,  ಮದಲ್ಲಿರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ, ಕುಟುಂಬಸ್ಥರಿಂದ ಒಂದು ರೊಟ್ಟಿ-ಒಂದು ರೂಪಾಯಿ ನಾಣ್ಯವನ್ನು ಭಿಕ್ಷೆ ಹಾಕಿಸಿಕೊಳ್ಳುವ ಮೂಲಕ ಜನರಿಂದ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

ಗದಗದಿಂದ 14 ಕಿ.ಮೀ ದೂರದಲ್ಲಿರುವ ಸೊರಟೂರು ಗ್ರಾಮದಲ್ಲಿ ಭಾನುವಾರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅನಿಲ್ ಮೆಣಸಿನ ಕಾಯಿಯವರು, ‘ಜನರು, ಜನರಿಂದ, ಜನರಿಗಾಗಿ ನಾಯಕರು ಎಂಬುದನ್ನು ಎಲ್ಲರಿಗೂ ತಿಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.

ಗ್ರಾಮಸ್ಥರು ಅನಿಲ್‌ ಅವರನ್ನು ಸಂತೋಷದಿಂದ ಆಹ್ವಾನಿಸಿ ಚಟ್ನಿ ಮತ್ತು ಮೊಸರಿನೊಂದಿಗೆ ರೊಟ್ಟಿ ನೀಡಿದರು.

ಇದನ್ನೂ ಓದಿ: ದೊರಕದ ಭೂಪತ್ರ: ಲಕ್ಕುಂಡಿ ಗ್ರಾಮಸ್ಥರ ಧರಣಿ; ಬೇಡಿಕೆ ಈಡೇರಿಸದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕಾರ!
 
ಈ ವೇಳೆ ಮಾತನಾಡಿದ ಅನಿಲ್ ಅವರು, ಜನರಿಂದ ಸಂಗ್ರಹಿಸಿದ ಹಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. "ನಾನು ಬದಲಾವಣೆಯನ್ನು ತರಲು ಬಯಸುತ್ತಿದ್ದೇನೆ. ನಾವು ನಾಯಕರಲ್ಲ, ಜನರ ಸೇವಕರು ಎಂದು ಜನರಿಗೆ ತಿಳಿಸಲು ಬಯಸುತ್ತೇನೆ. ಈ ಅಭಿಯಾನದ ಮೂಲಕ ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದ ಆಶೀರ್ವಾದ ಪಡೆಯುತ್ತೇನೆ ಎಂದು ತಿಳಿಸಿದರು.

ಸೊರ್ತೂರು ಗ್ರಾಮಸ್ಥ ನೀಲಪ್ಪ ಸೀತಾರಳ್ಳಿ ಮಾತನಾಡಿ, ಇದೊಂದು ಸ್ವಾಗತಾರ್ಹ ಹೆಜ್ಜೆಯಾಗಿದ್ದು, ಅನಿಲ್‌ಗೆ ರೊಟ್ಟಿ ಹಾಗೂ ಒಂದು ರೂಪಾಯಿ ನೀಡಿದ್ದೇವೆ. ಗದಗದಲ್ಲಿ ಇಂದಿಗೂ ಹಲವಾರು ಸಮಸ್ಯೆಗಳಿವೆ. ನಮಗೆ ಮೊದಲು ಮೂಲ ಸೌಕರ್ಯ ಬೇಕು. ನಮ್ಮ ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳು ಸಿಗಬೇಕು ತಿಳಿಸಿದ್ದೇವೆ. ಮಾದರಿ ಗ್ರಾಮವನ್ನು ನಾವು ಕೇಳುತ್ತಿಲ್ಲ ಎಂದು ಹೇಳಿದ್ದಾರೆ.

SCROLL FOR NEXT