ರಾಜಕೀಯ

ಬಿಜೆಪಿ 65 ಸೀಟ್ ದಾಟುವುದಿಲ್ಲ, '40 ಪರ್ಸೆಂಟ್ ಸರ್ಕಾರ' 40 ಸ್ಥಾನಕ್ಕೆ ಇಳಿದರೂ ಅಚ್ಚರಿ ಇಲ್ಲ: ಡಿಕೆಶಿ

Lingaraj Badiger

ಬೆಂಗಳೂರು: ನಿನ್ನೆಯಷ್ಟೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿವೆ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಈ ಬಾರಿ ಬಿಜೆಪಿ 65ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ. 40 ಸ್ಥಾನಗಳಿಗೆ ಕುಸಿಯಲಿದೆ ಎಂದು ಬುಧವಾರ ಹೇಳಿದ್ದಾರೆ.

ಈ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಎಲ್ಲ ವರ್ಗದ ಜನರು ಆಕ್ರೋಶಗೊಂಡಿದ್ದಾರೆ. ನಮಗೆ ನಮ್ಮ ಸಂಖ್ಯೆಯ ಬಗ್ಗೆ ಗ್ಯಾರಂಟಿ ಇದೆ ಮತ್ತು ಬಿಜೆಪಿಯ ಸಂಖ್ಯೆ 65 ಮೀರುವುದಿಲ್ಲ ಎಂಬ ಭರವಸೆಯೂ ನಮಗೆ ಇದೆ ಎಂದು ಡಿಕೆಶಿ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, "ಬಿಜೆಪಿಯವರು ಏನು ಬೇಕಾದರೂ ಹೇಳಿಕೊಳ್ಳಲಿ. ಆದರೆ ಅವರ ಸಂಖ್ಯೆ 60-65 ದಾಟುವುದಿಲ್ಲ. ಇದು ಖಚಿತ. ಆದರೆ ನನ್ನ ಪ್ರಕಾರ ಅವರ ಸಂಖ್ಯೆ 40ಕ್ಕೆ ಇಳಿದರೂ ಆಶ್ಚರ್ಯವಿಲ್ಲ ಎಂದರು.

ಬಿಜೆಪಿ ಈ ಹಿಂದೆ 40 ಸ್ಥಾನಗಳನ್ನು ಪಡೆದಿತ್ತು (2013 ರ ವಿಧಾನಸಭಾ ಚುನಾವಣೆಯಲ್ಲಿ), ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೊದಲ ಅವಧಿಯ ನಂತರ(2008-13 ರಿಂದ) ಪ್ರಸ್ತುತ '40 ಪರ್ಸೆಂಟ್ ಕಮಿಷನ್ ಸರ್ಕಾರ' 40 ಸ್ಥಾನಕ್ಕೆ ಇಳಿದರೂ ಆಶ್ಚರ್ಯವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

SCROLL FOR NEXT