ರಾಜಕೀಯ

ಕರ್ನಾಟಕ ಚುನಾವಣೆ: ಪ್ರಚಾರದ ಸಮಯದಲ್ಲಿ ಸಂಯಮ ಇರಲಿ, ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ

Nagaraja AB

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಚಾರದ ಅಖಾಡ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅದರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪ, ವಾಗ್ಯುದ್ದಗಳು ಹೆಚ್ಚಾಗಿದ್ದು, ಪ್ರಚೋದನಾಕಾರಿ, ದ್ವೇಷಕಾರಿ ಹೇಳಿಕೆಗಳ ಆರ್ಭಟವೂ ಜೋರಾಗಿ ನಡೆಯುತ್ತಿದೆ. 

ಚುನಾವಣಾ ಆಯೋಗ ಮಂಗಳವಾರ ರಾಜಕೀಯ ಪಕ್ಷಗಳು ಮತ್ತು ಅವರ ಸ್ಟಾರ್ ಪ್ರಚಾರಕರಿಗೆ ಸಲಹೆಯನ್ನು ನೀಡಿದ್ದು, ಕರ್ನಾಟಕದಲ್ಲಿ ಪ್ರಚಾರದ ಸಮಯದಲ್ಲಿ ತಮ್ಮ ಮಾತುಗಳಲ್ಲಿ ಎಚ್ಚರಿಕೆ ಮತ್ತು ಸಂಯಮ ವಹಿಸುವಂತೆ, ಚುನಾವಣಾ ವಾತಾವರಣವನ್ನು ಹಾಳು ಮಾಡದಂತೆ ಸೂಚಿಸಿದೆ.

ಇದನ್ನೂ ಓದಿ: ದ್ವೇಷಕಾರಿ ಭಾಷಣ: ಶಾ, ನಡ್ಡಾ, ಯೋಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಕಾಂಗ್ರೆಸ್ ಒತ್ತಾಯ
  
ಚುನಾವಣಾ ಪ್ರಚಾರದ ಸಮಯದಲ್ಲಿ ನೀಡುತ್ತಿರುವ ಹೇಳಿಕೆಗಳು ಎಲ್ಲೆ ಮೀರುತ್ತಿರುವುದನ್ನು ಗಮಿಸಿರುವ ಚುನಾವಣಾ ಆಯೋಗ, ಸ್ಟಾರ್ ಪ್ರಚಾರಕರು ತಮ್ಮ ಮಾತುಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ. ಪ್ರಚೋದನಾಕಾರಿ ಹೇಳಿಕೆ ನೀಡಬಾರದು ಎಂದಿರುವ ಆಯೋಗ, ವಿಷಯಾಧಾರಿತ ಚರ್ಚೆ ನಡೆಸುವಂತೆ ಸಲಹೆ ನೀಡಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ತಿಳಿಸಿದೆ.

ಮೇ 10 ರಂದು ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದೆ. 

SCROLL FOR NEXT