ರಾಜಕೀಯ

‘ಸಬ್ಕಾ ಸಾತ್, ಸಬ್ಕಾ ವಿಕಾಸ್’ ನನ್ನ ಗೆಲುವಿಗೆ ಸಹಾಯ ಮಾಡುತ್ತದೆ: ಸತೀಶ್ ರೆಡ್ಡಿ

Lingaraj Badiger

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಗಣನೇ ಆರಂಭವಾಗಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಆಕರ್ಷಿಸಲು ಮುಗಿ ಬೀಳುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸತೀಶ್ ರೆಡ್ಡಿ ತಮ್ಮ ಪ್ರಚಾರದ ವೇಳೆ ಮತದಾರರೊಂದಿಗೆ ಸಂವಾದ ನಡೆಸಿ, ‘ಸಬ್ಕಾ ಸಾತ್, ಸಬ್ಕಾ ವಿಕಾಸ್’ದ ಭರವಸೆ ನೀಡಿದರು.

2008ರಿಂದ ಬೊಮ್ಮನಹಳ್ಳಿಯ ಶಾಸಕರಾಗಿ ಸತೀಶ್ ರೆಡ್ಡಿ ಕ್ಷೇತ್ರದ ಪ್ರವಾಹ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ತಮ್ಮ ಪ್ರಚಾರದ ಹಾದಿಯುದ್ದಕ್ಕೂ ನಿವಾಸಿಗಳು, ಕನ್ನಡ ಪರ ಕಾರ್ಯಕರ್ತರು, ಅಲ್ಪಸಂಖ್ಯಾತರು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ಎಚ್‌ಎಸ್‌ಆರ್ ಲೇಔಟ್‌ನ ಅಗರ ಗ್ರಾಮದಲ್ಲಿ ಪ್ರಭಾವಿ ಒಕ್ಕಲಿಗ ಸಮುದಾಯದ ಮುಖಂಡ ಎಎಂ ಮರಿಸ್ವಾಮಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಮತಯಾಚಿಸಿದರು.

ಈ ಕ್ಷೇತ್ರದಲ್ಲಿ 10,000ಕ್ಕೂ ಹೆಚ್ಚು ಕ್ರಿಶ್ಚಿಯನ್ ಮತದಾರರಿದ್ದು, ಶಾಸಕರು ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. 

ಬೊಮ್ಮನಹಳ್ಳಿಯಲ್ಲಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಮಂತ್ರ ಜಪಿಸಿದ ರೆಡ್ಡಿ, ‘ಸಬ್ಕಾ ಸಾತ್, ಸಬ್ಕಾ ವಿಕಾಸ್’ ಬಗ್ಗೆ ಮಾತನಾಡಿದರು. 

ಬಳಿಕ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಯಾವುದೇ ಭಯ ಇಲ್ಲ. ಇಂತಹ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುತ್ತಾರೆ. ಅವರು ‘ಚುನಾವಣಾ ಜೀವಿ’ಗಳಾಗಿದ್ದು, ಚುನಾವಣಾ ಪ್ರವಾಸದಲ್ಲಿದ್ದಾರೆ. ಕಳೆದ 15 ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ನೋಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಯಾವುದೇ ಜಾತಿಯ ಟ್ಯಾಗ್ ಕೆಲಸ ಮಾಡುವುದಿಲ್ಲ ಎಂದರು.

SCROLL FOR NEXT