ಕ್ರೈಪಿಎಂ ಪೋಸ್ಟರ್ ಅಭಿಯಾನ 
ರಾಜಕೀಯ

ಮೋದಿ ಪ್ರಧಾನಿ ಮಾತ್ರವಲ್ಲ, ಜಾಗತಿಕ ನಾಯಕ: ಕಾಂಗ್ರೆಸ್‌ನ 'ಕ್ರೈ ಪಿಎಂ' ಅಭಿಯಾನಕ್ಕೆ ಬಿಜೆಪಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ 'ಕ್ರೈ ಪಿಎಂ' ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 'ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ' ಎಂದಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ 'ಕ್ರೈ ಪಿಎಂ' ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 'ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ' ಎಂದಿದ್ದಾರೆ.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್, 'ಕೋವಿಡ್ ಬಿಕ್ಕಟ್ಟು ಅಥವಾ ಪುಲ್ವಾಮಾ ಸಂಭವಿಸಿದಾಗ ಅವರು ಎಂದಿಗೂ ಕಣ್ಣೀರು ಹಾಕಿಲ್ಲ. ಆದರೆ, ಈಗ ಅವರು ಕಣ್ಣೀರು ಸುರಿಸುತ್ತಾ ಜನರ ಮುಂದೆ ಬಂದಿದ್ದಾರೆ' ಎಂದರು. ಕೆಪಿಸಿಸಿ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮೋದಿ ಅವರು 'ವಿಕ್ಟಿಮ್ ಕಾರ್ಡ್' ಬಳಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವಿಟರ್‌ನಲ್ಲಿ ಬಿಜೆಪಿಯನ್ನು ಲೇವಡಿ ಮಾಡುತ್ತಾ, 'ಪ್ರತಿ ಚುನಾವಣೆಯ ಬಿಜೆಪಿಯ ಪ್ರಚಾರದ ಥೀಮ್ ಏನೆಂದರೆ, 'ಮುಜೆ ಗಲಿಯಾ ದಿಯಾ' (ಅವರು ನನ್ನನ್ನು ನಿಂದಿಸಿದರು) ಎಂಬುದಾಗಿರುತ್ತದೆ' ಎಂದಿದ್ದಾರೆ. 

ಹತ್ತಾರು ಕಾಂಗ್ರೆಸ್‌ ನಾಯಕರು ಟ್ವೀಟ್ ಮಾಡಿದ್ದು, 'PAYCM' ನಂತೆ 'CRYPM' ಎಂದು ಟ್ವೀಟ್ ಮಾಡಿದ್ದಾರೆ. 'ಪ್ರಧಾನಿ ಕಾರ್ಯಾಲಯವು ರೈತರ ಅಥವಾ ಜನರ ಸಮಸ್ಯೆ ಅಥವಾ ದೂರುಗಳನ್ನು ಸಂಗ್ರಹಿಸುವ ಬದಲು ನಿಂದನೆಗಳನ್ನು ಎಣಿಸುತ್ತಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಯ ನಂತರ ಈ ಪೋಸ್ಟರ್‌ಗಳೊಂದಿಗೆ ಕಾಂಗ್ರೆಸ್ ಪ್ರಚಾರ ನಡೆಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT