ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'ರೇವ್ಡಿ ಸಂಸ್ಕೃತಿ'ಯ (‘ಉಚಿತ ಕೊಡುಗೆಗಳ ಸಂಸ್ಕೃತಿ’) ಜನರು ನಾಗರಿಕರಿಗೆ ಉಚಿತ ಕೊಡುಗೆಗಳನ್ನು ವಿತರಿಸುವ ಮೂಲಕ ಅವರನ್ನು ಖರೀದಿಸಬಹುದು ಎಂದು ಭಾವಿಸುತ್ತಾರೆ. ನಾವು ಒಟ್ಟಾಗಿ ಈ ಚಿಂತನೆಯನ್ನು ಸೋಲಿಸಬೇಕಾಗಿದೆ. ದೇಶದ ರಾಜಕೀಯದಿಂದ ರೇವ್ಡಿ ಸಂಸ್ಕೃತಿ ತೊಲಗಬೇಕು ಎಂದು ಹೇಳಿದರು.
ಅಕ್ಟೋಬರ್‌ನಲ್ಲಿ, ಮೋದಿ ಮತ್ತೆ 'ರೇವ್ಡಿ ಸಂಸ್ಕೃತಿ'ಯನ್ನು ಖಂಡಿಸಿದರು. ಏಕೆಂದರೆ, 'ರೇವ್ಡಿ ಸಂಸ್ಕೃತಿ'ಯಿಂದ ದೇಶವನ್ನು ಮುಕ್ತಗೊಳಿಸಲು ಪ್ರಮುಖ ವಿಭಾಗವೊಂದು ಸಜ್ಜಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದರು. ಪ್ರಧಾನಿಯವರು ಕೆಲವು ಸಮಯದಿಂದ ಕಾಂಗ್ರೆಸ್ ಪಕ್ಷದ 'ರೇವ್ಡಿ ಸಂಸ್ಕೃತಿ' ವಿರುದ್ಧ ಮಾತನಾಡುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ಮೂರು ಬಾರಿ ಉಚಿತ ಅಡುಗೆ ಅನಿಲ ಸಿಲಿಂಡರ್, ತಿಂಗಳಿಗೆ 5 ಕೆಜಿ ಅಕ್ಕಿ ಮತ್ತು ದಿನಕ್ಕೆ ಅರ್ಧ ಲೀಟರ್ ಉಚಿತ ನಂದಿನಿ ಹಾಲಿನ ಭರವಸೆ ನೀಡಿದೆ.
ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ತಿಂಗಳುಗಳಲ್ಲಿ ತಲಾ ಒಂದು ಸಿಲಿಂಡರ್‌ನಂತೆ ಮೂರು ಕಂತುಗಳಲ್ಲಿ ಉಚಿತ ಸಿಲಿಂಡರ್‌ಗಳನ್ನು ವಿತರಿಸುವುದಾಗಿ ಪಕ್ಷವು ಭರವಸೆ ನೀಡಿದೆ.
ರೇವ್ಡಿ ಸಂಸ್ಕೃತಿ ಅಲ್ಲ
ಪ್ರಣಾಳಿಕೆಯನ್ನು ಸಮರ್ಥಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ತಾವು ನೀಡಿರುವ ಭರವಸೆಗಳನ್ನು ಬಿಟ್ಟಿಯಿಂದ ಪ್ರತ್ಯೇಕಿಸಲು ಬಯಸಿದರು ಮತ್ತು ಪಕ್ಷವು 'ಕಲ್ಯಾಣ ಯೋಜನೆಯಡಿ ಬಡವರ ಅಗತ್ಯವನ್ನು ನೋಡಿಕೊಳ್ಳುತ್ತಿದೆಯೇ ಹೊರತು ದುರಾಸೆಯಿಂದಲ್ಲ' ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಆದಾಗ್ಯೂ, ಬಿಜೆಪಿ ಪ್ರಣಾಳಿಕೆಯ ಕುರಿತು ಪ್ರತಿಕ್ರಿಯಿಸಿದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಗಳ ಸಂಪಾದಕೀಯಗಳನ್ನು ಉಲ್ಲೇಖಿಸಿರುವ ನ್ಯೂಸ್‌ಲಾಂಡ್ರಿ, 'ವಿರುದ್ಧಗಳ ಮದುವೆ' ಎಂದಿದೆ. ಕಲ್ಯಾಣ ಯೋಜನೆಗಳೊಂದಿಗೆ ಹಿಂದುತ್ವದ ಮಿಶ್ರಣವಾಗಿದೆ. 'ಅದರ ನಡುವೆಯೂ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿಂದುಳಿದಿರುವ ರಾಜ್ಯದ ಅಭಿವೃದ್ಧಿ ಅಗತ್ಯಗಳನ್ನು ಹೇಗೆ ಪೂರೈಸುತ್ತದೆ' ಎಂದು ಪ್ರಶ್ನಿಸಿದೆ.