ರಾಜಕೀಯ

'ನೂರು ವೀರಶೈವ ಸ್ವಾಮಿಗಳು ನನಗೆ ಕರೆಮಾಡಿ ಈ ಸರ್ತಿ ಕಾಂಗ್ರೆಸ್ ಗೆ ಸಹಾಯ ಮಾಡ್ತೀವಿ ಅಂತಿದ್ದಾರೆ': ಸಿದ್ದು-ಡಿಕೆಶಿ ಆತ್ಮೀಯ ಸಂಭಾಷಣೆ

Sumana Upadhyaya

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ರಾಜ್ಯದ ಇಬ್ಬರು ಅಗ್ರ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಸಂಭಾಷಣೆಯ ವಿಡಿಯೊವನ್ನು ಪ್ರಸಾರ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಮತ್ತು ಇತರ ಕಡೆಗಳಲ್ಲಿ ಇಬ್ಬರ ನಡುವಿನ ಮಾತುಕತೆಯ ಭಾಗ -1 ವೈರಲ್ ಆಗಿತ್ತು.

ಇಂದು ಭಾಗ -2 ಬಿಡುಗಡೆಯಾಗಿದ್ದು ಅದರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡುವ ಕೆಲಸಗಳು, ಪ್ರಸ್ತುತದ ರಾಜಕೀಯ ಸ್ಥಿತಿಗತಿ, ಬಿಜೆಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬಿತ್ಯಾದಿ ಟೀಕೆಗಳನ್ನು ಇಬ್ಬರೂ ಮಾಡಿದ್ದಾರೆ. ಇವರಿಬ್ಬರ ಸಂಭಾಷಣೆಯ ಝಲಕ್ ಹೀಗಿದೆ. 

ಲಿಂಗಾಯತರ ಕಡೆಗಣನೆ: ಭಾಗ-2 ವಿಡಿಯೊದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಈ ಬಾರಿ ಬಿಜೆಪಿಯಲ್ಲಿ ಲಿಂಗಾಯತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಇವರಿಗೆಲ್ಲಾ ಅನ್ಯಾಯವಾಗಿದೆ ಎಂದು ಮಾತನಾಡಿಕೊಂಡಿದ್ದಾರೆ. 

SCROLL FOR NEXT