ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಸಿದ್ದರಾಮಯ್ಯ ಎಮೋಷನ್ ಕಾರ್ಡ್: ತಾಯಿ-ತಂದೆ ಕಳೆದುಕೊಂಡಿರುವ ದರ್ಶನ್ ಬೆಂಬಲಿಸಿ; ಮೋದಿ 'ಹವಾ'ಗೆ ಕಾಂಗ್ರೆಸ್ ಕಸಿವಿಸಿ!

ಪ್ರಧಾನಿ ನರೇಂದ್ರ ಮೋದಿ ನಂತರ ಗುಂಡ್ಲುಪೇಟೆ, ನಂಜನಗೂಡು ಮತ್ತ ಮೈಸೂರಿನ ವಿವಿಧ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು.

ಸಿದ್ದರಾಮಯ್ಯ ಭಾಷಣ
Shilpa D
Updated On : 9 May 2023, 2:25 pm

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನಂತರ ಗುಂಡ್ಲುಪೇಟೆ, ನಂಜನಗೂಡು ಮತ್ತ ಮೈಸೂರಿನ ವಿವಿಧ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಮೈಸೂರು ಭಾಗದಲ್ಲಿ ವಿವಿಧ ರ್ಯಾಲಿ ಸಮಾವೇಶ ನಡೆಸಿದರು.  ಮೋದಿಯವರ ರ್ಯಾಲಿಯಲ್ಲಿನ ದೊಡ್ಡ ಜನಸ್ತೋಮ ಮತ್ತು ಅವರ ಪ್ರಬಲ ಭಾಷಣವು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದು. ಅದರ ಯಶಸ್ಸು ಕಾಂಗ್ರೆಸ್ಸಿಗೆ ಸ್ವಲ್ಪಮಟ್ಟಿನ ಕಸಿವಿಸಿ ಉಂಟು ಮಾಡಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ, ಅವರ ಸರ್ಕಾರದ ಅಡಿಯಲ್ಲಿ ನೇರ ಹಣ ವರ್ಗಾವಣೆ ಯೋಜನೆ ಮತ್ತು ಬಜರಂಗದಳದ ಮೇಲೆ ಕಾಂಗ್ರೆಸ್ ಪ್ರಸ್ತಾಪಿಸಿದ ನಿಷೇಧದ ವಿಷಯಗಳನ್ನು  ಪ್ರಧಾನಿ ಮೋದಿ ಭಾಷಣದ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸಿದರು. ಸಾರ್ವಜನಿಕ ಪ್ರಚಾರದ ಕೊನೆಯ ದಿನದಂದು ಸಿದ್ದರಾಮಯ್ಯ , ತಮ್ಮ ಪಕ್ಷಕ್ಕೆ ಉಂಟಾದ ಹಾನಿಯನ್ನು ತಡೆಯಲು ಮತ್ತು ಮೋದಿ ಎಫೆಕ್ಟ್  ತಗ್ಗಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು.

Advertisement

Advertisement

ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ- ಬಿಜೆಪಿ

ಬೆಲೆ ಏರಿಕೆ, ನಿರುದ್ಯೋಗ ಹಾಗೂ ಸರ್ಕಾರದ ಶೇ.40ರಷ್ಟು ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರಕಾರ ಕಾರ್ಪೊರೇಟ್ ಕಂಪನಿಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಆದರೆ ರೈತರ ಸಮಸ್ಯೆ ನಿವಾರಣೆಗೆ ಏನೂ ಮಾಡಿಲ್ಲ ಎಂದರು. ‘ಬಿಜೆಪಿ ಅಧಿಕಾರಕ್ಕೆ ಬಂದರೆ ಕಮಿಷನ್ ಶೇ.40ರಿಂದ 80ಕ್ಕೆ ಏರಬಹುದು’ ಎಂದು ಮತದಾರರಿಗೆ ಎಚ್ಚರಿಕೆ ನೀಡಿದರು.

ಸರ್ಕಾರದ ಯೋಜನೆಯಡಿ ಮನೆ ಕೊಡಿ ಎಂದು ಕೇಳುತ್ತಿದ್ದ ಮಹಿಳೆಗೆ ಕಪಾಳಮೋಕ್ಷ ಮಾಡಿದ ವಸತಿ ಸಚಿವ ವಿ.ಸೋಮಣ್ಣ ಅವರಿರುವ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು. ನಂತರನಂಜನಗೂಡಿನಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಸೂಕ್ತ ವಿಷಯಗಳನ್ನು ಪ್ರಸ್ತಾಪಿಸಲು ವಿಫಲರಾದ ಕಾರ್ಯನಿರ್ವಹಣೆ ಮಾಡದ ಬಿಜೆಪಿ ಶಾಸಕ ಹರ್ಷವರ್ಧನ್ ಅವರಿಗೆ ಮತ ಹಾಕಬೇಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 'ನೂರು ವೀರಶೈವ ಸ್ವಾಮಿಗಳು ನನಗೆ ಕರೆಮಾಡಿ ಈ ಸರ್ತಿ ಕಾಂಗ್ರೆಸ್ ಗೆ ಸಹಾಯ ಮಾಡ್ತೀವಿ ಅಂತಿದ್ದಾರೆ': ಸಿದ್ದು-ಡಿಕೆಶಿ ಆತ್ಮೀಯ ಸಂಭಾಷಣೆ

ಆರ್. ದ್ರುವನಾರಾಯಣ್ ಅವರಂತಹ ಕಾರ್ಯಪ್ರವೃತ್ತರ ಸೋಲು ಮತ್ತು ನಿಧನ ಕಾಂಗ್ರೆಸ್ ಗೆ ದೊಡ್ಡ ನಷ್ಟವಾಗಿದ್ದು, ಹಣಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆಯುತ್ತಿದೆ ಎಂದರು. ಒಂದೇ ತಿಂಗಳ ಅವಧಿಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ದರ್ಶನ್ ದ್ರುವನಾರಾಯಣ್ ಅವರನ್ನು ಬೆಂಬಲಿಸುವಂತೆ ಅವರು ಜನರಿಗೆ ಕರೆ ನೀಡಿದರು.

ತಮಗೆ ವಿತ್ತ ಸಚಿವರಾಗಿ ಕೆಲಸ ಮಾಡಿರುವ ಅನುಭವವಿದೆ, ಹೀಗಾಗಿ ಕಾಂಗ್ರೆಸ್ ಅಧಿಕಾರ ಸ್ವೀಕರಿಸಿದ ನಂತರ ಚುನಾವಣಾ ಪೂರ್ವ ಭರವಸೆಗಳನ್ನು ಜಾರಿಗೆ ತರಲಿದೆ ಎಂದು ಹೇಳಿದ ಸಿದ್ದರಾಮಯ್ಯ, ಮೋದಿಯವರಿಗೆ ರಾಜ್ಯದ ಹಣಕಾಸಿನ ಬಗ್ಗೆ ಯಾವುದೇ ಅರಿವಿಲ್ಲ ಎಂದು ಆರೋಪಿಸಿದರು. ಚಾಮುಂಡೇಶ್ವರಿಯಲ್ಲಿ 2018ರಲ್ಲಿ ತನ್ನನ್ನು ಸೋಲಿಸಿದ ಬದ್ಧ ವೈರಿ ಜಿಟಿ ದೇವೇಗೌಡರನ್ನು ಸೋಲಿಸುವಂತೆ ಸಿದ್ದರಾಮಯ್ಯ ಕರೆ ನೀಡಿದರು.

ಚಾಮರಾಜ ಮತ್ತು ಕೃಷ್ಣರಾಜ ಕ್ಷೇತ್ರಗಳಲ್ಲಿಯೂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಜೆಪಿ ನಾಯಕರ ದಂಡೇ ಪ್ರಚಾರ ನಡೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement