ಉಡುಗೊರೆಗಳನ್ನು ಎಸೆದು ಹೋದ ಗ್ರಾಮಸ್ಥರು 
ರಾಜಕೀಯ

'ನಿಮ್ಮ ಭಿಕ್ಷೆ ಯಾರಿಗೆ ಬೇಕು, ನಾವು ಬಿಜೆಪಿಗೆ ಓಟು ಹಾಕೋದಿಲ್ಲ': ಉಡುಗೊರೆಯನ್ನು ಸಿಟ್ಟಿನಿಂದ ಎಸೆದು ಹೋದ ಕೆ ಆರ್ ಪೇಟೆ ಗ್ರಾಮಸ್ಥರು!

ಸೀರೆ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಮತದಾರರಿಗೆ ಆಮಿಷವೊಡ್ಡಲು ಯತ್ನಿಸಿದ್ದಕ್ಕೆ ಗ್ರಾಮಸ್ಥರು ಅದನ್ನು ಹಿಂತಿರುಗಿಸಿ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ನಡೆದಿದೆ. 

ಕೆ ಆರ್ ಪೇಟೆ(ಮಂಡ್ಯ): ಸೀರೆ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಮತದಾರರಿಗೆ ಆಮಿಷವೊಡ್ಡಲು ಯತ್ನಿಸಿದ್ದಕ್ಕೆ ಗ್ರಾಮಸ್ಥರು ಅದನ್ನು ಹಿಂತಿರುಗಿಸಿ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ನಡೆದಿದೆ. 

ಕೆ ಆರ್ ಪೇಟೆಯ ಶಾಸಕ ಹಾಗೂ ಸಚಿವ ನಾರಾಯಣ ಗೌಡ ಮತ್ತು ಬಿಜೆಪಿ ನಾಯಕರು ಕ್ಷೇತ್ರದ ಮತದಾರರನ್ನು ಓಲೈಸಲು ಇತ್ತೀಚೆಗೆ ಸೀರೆ ಮತ್ತು ಇತರ ಕೆಲವು ವಸ್ತುಗಳನ್ನು ನೀಡಿದ್ದರಂತೆ. ಆದರೆ ಇದನ್ನು ಸ್ವೀಕರಿಸದ ಗ್ರಾಮಸ್ಥರು ನಮಗೆ ನಿಮ್ಮ ಭಿಕ್ಷೆ ಬೇಡ ನಾವು ಬಿಜೆಪಿಗೆ ಓಟು ಹಾಕುವುದಿಲ್ಲ ಎಂದು ವಸ್ತುಗಳನ್ನು ಎಸೆದ ಪ್ರಸಂಗ ನಡೆಯಿತು.

ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಕೇಳಿಬರುತ್ತಿದೆ. ಬಿಜೆಪಿ ಸರ್ಕಾರ ವಿರುದ್ಧ 40% ಕಮಿಷನ್ ಆರೋಪ ಭಾರೀ ಸದ್ದು ಮಾಡುತ್ತಿದ್ದು ಬಡವರು ಮತ್ತು ಮಧ್ಯಮ ವರ್ಗದವರನ್ನು ಆಕ್ರೋಶಕ್ಕೀಡುಮಾಡಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಪಚುನಾವಣೆ: ಯುಗಾದಿ ಹಬ್ಬದ ದಿನವೇ ಬಾಗಲಕೋಟೆ, ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ನಮ್ಮ ರಾಜ್ಯಕ್ಕೆ 44 ಸಾವಿರ ವಾಣಿಜ್ಯ ಸಿಲಿಂಡರ್ ಅವಶ್ಯಕತೆಯಿದೆ, ಪೂರೈಕೆಯಾಗುತ್ತಿರುವುದು ಕೇವಲ 9 ಸಾವಿರ: ಸಚಿವ ಕೆ ಹೆಚ್ ಮುನಿಯಪ್ಪ

ಯುಗಾದಿ, ರಂಜಾನ್ ರಜೆ: ಬೆಂಗಳೂರಿನಿಂದ ವಿವಿಧೆಡೆ ಸಂಚಾರಕ್ಕೆ ವಿಶೇಷ ರೈಲು ಸೇವೆ, ವೇಳಾಪಟ್ಟಿ ಹೀಗಿದೆ...

ನಾಡಿನೆಲ್ಲೆಡೆ ಯುಗಾದಿ ಸಂಭ್ರಮ-ಪೂಜೆ, ಹಬ್ಬದೂಟ ತಯಾರಿಯಲ್ಲಿ ಜನತೆ, ವ್ಯಾಪಾರ ಭರಾಟೆ ಜೋರು

ಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!

SCROLL FOR NEXT