ಜಗದೀಶ್ ಶೆಟ್ಟರ್ 
ರಾಜಕೀಯ

ಸಿದ್ದು ಸಂಪುಟದಲ್ಲಿ ಲಿಂಗಾಯತರಿಗೆ ಬಂಪರ್: 7 ಮಂದಿ ಮಿನಿಸ್ಟರ್; ಯೋಜನಾ ಆಯೋಗದ ಮುಖ್ಯಸ್ಥರಾಗಿ ಶೆಟ್ಟರ್?

ಸಚಿವ ಸಂಪುಟ ರಚನೆಗೂ ಮುನ್ನ ತಮ್ಮ ಸಮುದಾಯಕ್ಕೆ ಐದಾರು ಸಚಿವ ಸ್ಖಾನ ಸಿಗುತ್ತದೆ ಎಂದು  ವೀರಶೈವ ಲಿಂಗಾಯತರು ನಿರೀಕ್ಷೆಯಲ್ಲಿದ್ದರು, ಆದರೆ ಸಮುದಾಯಕ್ಕೆ ಏಳು ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಸಚಿವ ಸಂಪುಟ ರಚನೆಗೂ ಮುನ್ನ ತಮ್ಮ ಸಮುದಾಯಕ್ಕೆ ಐದಾರು ಸಚಿವ ಸ್ಖಾನ ಸಿಗುತ್ತದೆ ಎಂದು  ವೀರಶೈವ ಲಿಂಗಾಯತರು ನಿರೀಕ್ಷೆಯಲ್ಲಿದ್ದರು, ಆದರೆ ಸಮುದಾಯಕ್ಕೆ ಏಳು ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕತ್ವವು ಲಿಂಗಾಯತ ಸಮುದಾಯದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಎಂದು ತೋರುತ್ತದೆ.

ಶಾಮನೂರು ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ), ಈಶ್ವರ ಖಂಡ್ರೆ (ಬಾಲ್ಕಿ-ಬೀದರ್), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ), ಶರಣಪ್ರಕಾಶ ಪಾಟೀಲ್ (ಸೇಡಂ-ಗುಲ್ಬರ್ಗ), ಶರಣ ಬಸಪ್ಪ ದರ್ಶನಾಪುರ (ಶಹಾಪುರ-ಯಾದಗಿರಿ) ಮತ್ತು ಶಿವಾನಂದ್ ಪಾಟೀಲ (ಬಸವನಾಬ್ ಪಾಟೀಲ್) 24 ಸಚಿವರ ಪಟ್ಟಿಯಲ್ಲಿದ್ದಾರೆ. ಈಗಾಗಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಬಲೇಶ್ವರದ ಎಂ.ಬಿ.ಪಾಟೀಲ್ ಅವರೂ ಸಹ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಗದಗದ ಎಚ್‌ಕೆ ಪಾಟೀಲ್ ಸ್ಥಳೀಯವಾಗಿ ಲಿಂಗಾಯತರೇ ಎಂದು ಪರಿಗಣಿತರಾಗಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಸುಲಭವಾಗಿ ಪ್ರಭಾವ ಬೀರುವ ಕಾರಣ,  ಕ್ಯಾಬಿನೆಟ್ ಸ್ಥಾನಮಾನದೊಂದಿಗೆ ಯೋಜನಾ ಆಯೋಗದ ಮುಖ್ಯಸ್ಥರಾಗಿ ಜಗದೀಶ್ ಶೆಟ್ಟರ್ ಅವರನ್ನು ಪ್ರಮುಖ ಹುದ್ದೆಯಲ್ಲಿ ಇರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಈಶ್ವರ್ ಖಂಡ್ರೆ ಅವರಿಗೆ ಪ್ರಮುಖ ಖಾತೆಗಳು ಸಿಗುವ ನಿರೀಕ್ಷೆ ಇದೆ. ಸಂಖ್ಯೆಗಳ ಪ್ರಕಾರ, ಇದು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರ ಅತಿದೊಡ್ಡ ಪ್ರಾತಿನಿಧ್ಯವಾಗಿದೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆರು ಲಿಂಗಾಯತ ಸಚಿವರಿದ್ದರು, 2013-18ರ ಕಾಂಗ್ರೆಸ್ ಸರ್ಕಾರ ಏಳು ಲಿಂಗಾಯತ ಸಚಿವರನ್ನು ಹೊಂದಿತ್ತು.

ಆಗಿನ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಎಂಟು ಲಿಂಗಾಯತರನ್ನು ಹೊಂದಿದ್ದ ಬಿಜೆಪಿಗೆ ಇದು ಸರಿಸಾಟಿಯಲ್ಲ. ಆದರೆ ಈ ಬಾರಿ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವು ಸಂಖ್ಯಾತ್ಮಕವಾಗಿ ಅತ್ಯಂತ ಪ್ರಬಲವಾಗಿದೆ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅದು ಶೇ. 17-20 ರಷ್ಟಿದೆ.

ಲಿಂಗಾಯತ ಸಮುದಾಯದ 7 ಶಾಸಕರಲ್ಲಿ ಎಲ್ಲಾ ಉಪಜಾತಿಗಳು ಮತ್ತು ಪ್ರದೇಶಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ.

ಲಿಂಗಾಯತರು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಮತ್ತು ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನು ಅಗಾಧವಾಗಿ ಬೆಂಬಲಿಸಿದ್ದಾರೆ. ಹೀಗಾಗಿ 1989 ರ ಸಮೀಕರಣವನ್ನು ಪುನಃಸ್ಥಾಪಿಸಲು ಪಕ್ಷವು ಶ್ರಮಿಸುತ್ತಿದೆ ಎಂದು ಚುನಾವಣಾ ಫಲಿತಾಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

“ಚುನಾವಣೆಯಲ್ಲಿ 34 ಸಮುದಾಯದ ಮುಖಂಡರು ಗೆದ್ದಿದ್ದಾರೆ. ಪಕ್ಷವನ್ನು ಮುನ್ನಡೆಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರುವ ಖಂಡ್ರೆ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT