ರಾಜಕೀಯ

'1999ರ ನಂತರ ಲಿಂಗಾಯತರು ನಮ್ಮೊಂದಿಗಿಲ್ಲ: ಮುಸ್ಲಿಮರು ನಿತೀಶ್ ಕುಮಾರ್ ಬೆಂಬಲಿಸುತ್ತಿರುವುದು ಅಚ್ಚರಿ!'

Shilpa D

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿರುವ ಜೆಡಿಎಸ್ ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಸಂಸತ್ ಚುನಾವಣೆಗೆ ಇನ್ನೂ 11 ತಿಂಗಳು ಬಾಕಿಯಿದೆ, ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 37 ಸ್ಥಾನಗಳಿಸಿದ್ದ ಜೆಡಿಎಸ್ ಈ ಬಾರಿ 19 ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಹೀಗಾಗಿ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಮತ್ತೆ ಗತ ವೈಭವಕ್ಕೆ ತರಲು ಹಿಂದಿಗಿಂತಲೂ ಮತ್ತಷ್ಟು ಶ್ರಮ ವಹಿಸುತ್ತಿದ್ದಾರೆ. ಸೋಲನ್ನು ಮರೆತು ಮುಂದಿನ ದಿನಗಳಲ್ಲಿ ಎದುರಾಗುವ ಸಾರ್ವತ್ರಿಕ ಚುನಾವಣೆ ಕಡೆ ಗಮನ ಹರಿಸುತ್ತಿದ್ದಾರೆ. 'ಜೆಡಿಎಸ್‌ ಕತೆ ಮುಗಿದಿದೆ ಎಂದು ಯಾರಾದರೂ ಭಾವಿಸಿದರೆ ಅವರು ತಪ್ಪು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ನಾವು ಎರಡು ಕ್ಷೇತ್ರಗಳಲ್ಲಿ ಪ್ರಬಲರಾಗಿದ್ದೇವೆ, ಇನ್ನೂ ಮೂರು ಕ್ಷೇತ್ರಗಳಲ್ಲಿ ನಾವು ದೊಡ್ಡ ಫೈಟ್ ನೀಡಬಹುದು, ನಮ್ಮ ಅಭ್ಯರ್ಥಿಗಳ ಆಯ್ಕೆ ಮತ್ತು ಕಾರ್ಯತಂತ್ರಗಳೊಂದಿಗೆ ನಾವು ಐದಾರು ಸ್ಥಾನಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.

ಕಳೆದುಹೋದ ಜನರ ಬೆಂಬಲವನ್ನು ಮರಳಿ ಪಡೆಯುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕಳೆದುಕೊಂಡಿರುವ ಶೇ, ನಾಲ್ಕುರಷ್ಟು ಬೆಂಬಲವನ್ನು ನಾಪಸ್ ಪಡೆಯುವುದು 200 ಪರ್ಸೆಂಟ್ ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಂಸತ್ತಿನ ಚುನಾವಣೆಯ ಸಮಯದಲ್ಲಿ ನಾವು ಕಳೆದು ಕೊಂಡಿರುವ ಬೆಂಬಲವನ್ನು ಮರಳಿ ಪಡೆಯುತ್ತೇವೆ. ಕಾಂಗ್ರೆಸ್ ನಾಯಕ ಮತ್ತು ಸಿಎಂ ಸಿದ್ದರಾಮಯ್ಯ ಈಗಾಗಲೇ 20 ಲೋಕಸಭಾ ಕ್ಷೇತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಕೂಡ ಈ ಚುನಾವಣೆಗಳನ್ನು ಚೆನ್ನಾಗಿ ಎದುರಿಸುತ್ತೇವೆ ಎಂದಿದ್ದಾರೆ.

ಕಳಪೆ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಪಕ್ಷವು ಈಗಾಗಲೇ ರಾಜ್ಯಾದ್ಯಂತ ಸಭೆ ನಡೆಸಿದೆ. ಜಿಲ್ಲಾ ಮಟ್ಟದ ಸಭೆಗಳಿಗೆ ನಾವು ಸಿದ್ಧತೆ ನಡೆಸುತ್ತಿದ್ದು, ವಿಧಾನಸಭೆ ಚುನಾವಣೆ ಫಲಿತಾಂಶ ಮಾತ್ರವಲ್ಲದೆ ಭವಿಷ್ಯದ ಬಗ್ಗೆಯೂ ಯೋಜನೆ ರೂಪಿಸುತ್ತೇವೆ ಎಂದರು. ಮುಂಬರುವ ಜಿಪಂ-ತಾಪಂ ಚುನಾವಣೆ, ಬಿಬಿಎಂಪಿ ಚುನಾವಣೆ ಹಾಗೂ ಸಂಸತ್ ಚುನಾವಣೆಗೆ ಪಕ್ಷವು ಶ್ರದ್ಧೆಯಿಂದ ತಯಾರಿ ನಡೆಸುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

2018 ರಲ್ಲಿ ಜೆಡಿಎಸ್-ಬಿಎಸ್ಪಿ ಮೈತ್ರಿ ಪಕ್ಷಕ್ಕೆ ಉತ್ತಮ ಸಂಖ್ಯಾಬಲ ಪಡೆಯಲು ಸಹಾಯ ಮಾಡಿತು, ಆದರೆ ಈ ಬಾರಿ ಅದು ಮುಸ್ಲಿಂ ಸಮುದಾಯದ ಬೆಂಬಲ ಕಳೆದುಕೊಂಡಿತು. ಇದನ್ನು ವಿಶ್ಲೇಷಿಸಿದ ಅವರು, ‘ಮುಸ್ಲಿಂ ಸಮುದಾಯಕ್ಕೆ ಯಾರೂ ಕೂಡ ಶೇ.4ರಷ್ಟು ಮೀಸಲಾತಿ ನೀಡಿಲ್ಲ, ಜೆಡಿಎಸ್ ನಾಯಕ ದೇವೇಗೌಡರು ಅದನ್ನು ಮಾಡಿದ್ದರು, ಆದರೆ  ನಮಗೆ ಅವರ ಬೆಂಬಲ ಸಿಗಲಿಲ್ಲ.

ಅನೇಕ ಸಂದರ್ಭಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ಅವರನ್ನು ಮುಸ್ಲಿಮರು ಬೆಂಬಲಿಸುತ್ತಿರುವುದು ಆಶ್ಚರ್ಯಕರವಾಗಿದೆ, ಆದರೆ ನಮ್ಮನ್ನು ಬೆಂಬಲಿಸುತ್ತಿಲ್ಲ. ನಮ್ಮ ಉಳಿವಿಗಾಗಿ ನಾವು ನೋಡಬೇಕು, ಕೆಲವು ಜಾತಿಗಳು ಮತ್ತು ಸಮುದಾಯಗಳು ನಮಗೆ ಪಾಠ ಕಲಿಸಿವೆ. ಲಿಂಗಾಯತ ಸಮುದಾಯವು 1999ರ ನಂತರ ಜನತಾ ದಳವನ್ನು ಬೆಂಬಲಿಸುವುದನ್ನು ನಿಲ್ಲಿಸಿದೆ, ಕುಮಾರಸ್ವಾಮಿ ಅವರು ಈಗ ಅವರ ಬೆಂಬಲ ಪಡೆಯಲು ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಕಾಂಗ್ರೆಸ್ ಹಲವು ಉಚಿತ ಭರವಸೆಗಳನ್ನು ನೀಡಿದ್ದು, ಅದು ಹೇಗೆ ಜಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

SCROLL FOR NEXT