ಬಿ.ವೈ. ವಿಜಯೇಂದ್ರ, ಬಿಎಸ್ ವೈ 
ರಾಜಕೀಯ

'ಯಡಿಯೂರಪ್ಪ ಮಗ' ಎಂಬ ಅರ್ಹತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ: ಕಾಂಗ್ರೆಸ್

ರಾಜ್ಯದ ನೂತನ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಕುರಿತು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಬೆಂಗಳೂರು: ರಾಜ್ಯದ ನೂತನ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಕುರಿತು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಕಾಂಗ್ರೆಸ್, "ಯಡಿಯೂರಪ್ಪ ಮಗ" ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಟೀಕಿಸಿದೆ. ಅಲ್ಲದೇ, "ಯಡಿಯೂರಪ್ಪನವರ ಮಗ"ನಿಗೆ ಅಭಿನಂದನೆಗಳು ಎಂದು ಹೇಳಿದೆ. 

"ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ" ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುವುದಾಗಿ ಕಾಂಗ್ರೆಸ್ ತಿಳಿಸಿದೆ.

ವಿಧಾನಸಭಾ ಚುನಾವಣೆ ಸೋಲಿನ ಹೊಣೆ ಹೊತ್ತು ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಬಿದ್ದಿತ್ತು. ಈ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಮತ್ತಿತರ ಹೆಸರುಗಳು ಕೇಳಿಬರುತಿತ್ತು. ಇದೀಗ ಬಿಜೆಪಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪ ಅವರಿಗೆ ಮಣೆ ಹಾಕುವ ಮೂಲಕ ವಿಜಯೇಂದ್ರ ಅವರನ್ನು ರಾಜ್ಯದ ನೂತನ ಸಾರಥಿಯನ್ನಾಗಿ ನೇಮಕ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಹಾರ್ಮುಜ್ ಬಿಕ್ಕಟ್ಟು ತೀವ್ರ; ನಾವಿಕರನ್ನು ಕಳೆದುಕೊಂಡ ಏಕೈಕ ದೇಶ ಭಾರತ, ನಿರ್ಬಂಧ ರಹಿತ ಸಂಚಾರಕ್ಕೆ ಒತ್ತಾಯ..!

ಇರಾನ್‌ ಯುದ್ಧದ ನಡುವೆ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆ: ಸೇನಾ ಮುಖ್ಯಸ್ಥರನ್ನು ಕಿತ್ತೆಸೆದ ಟ್ರಂಪ್ ಆಡಳಿತ!

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

'ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್' ಮಾಡ್ತಿದೆ- ಲಲಿತ್ ಮೋದಿ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

SCROLL FOR NEXT