ಎಚ್.ಡಿ ಕುಮಾರಸ್ವಾಮಿ 
ರಾಜಕೀಯ

'ಬಲ'ಕ್ಕೆ ವಾಲುತ್ತಿದ್ದಾರಾ ಕುಮಾರಸ್ವಾಮಿ?; ಸಮಯ ಬಂದ್ರೆ ದತ್ತಮಾಲೆ ಧಾರಣೆ: ಎಚ್‌ಡಿಕೆಗೆ ಹಿಂದೂಪರ ಸಂಘಟನೆಗಳ ಬೆಂಬಲ

ಮೇ 10ರ ವಿಧಾನಸಭಾ ಚುನಾವಣೆಯವರೆಗೂ ಹಿಂದೂಪರ ಸಂಘಟನೆಗಳಿಂದ ದೂರವಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಹೇಳಿಕೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರು: ಮೇ 10ರ ವಿಧಾನಸಭಾ ಚುನಾವಣೆಯವರೆಗೂ ಹಿಂದೂಪರ ಸಂಘಟನೆಗಳಿಂದ ದೂರವಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಹೇಳಿಕೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಅವಶ್ಯಕತೆ ಇದ್ದರೆ ದತ್ತಮಾಲೆ ಧರಿಸುವುದಾಗಿ ತಿಳಿಸಿದ್ದರು. ಕಾನೂನು ಬಾಹಿರವಾದ ಯಾವ ಕೆಲಸವನನೂ ನಾನು ಮಾಡಲಾರೆ. ದತ್ತಮಾಲೆ ಧರಿಸುವುದು ಕಾನೂನು ಬಾಹಿರವಲ್ಲ. ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು.

ಕುಮಾರಸ್ವಾಮಿ ಹೇಳಿಕೆಯಿಂದ ಹೇಳಿಕೆಯಿಂದ ಏಕಾಏಕಿ ಹಲವಾರು ಬೆಂಬಲಿಗರನ್ನು ಪಡೆದಿದ್ದಾರೆ. ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಭೇಟಿ ನೀಡುವ ಭಕ್ತರು ಅನುಸರಿಸುವ ವಾರ್ಷಿಕ ಹಿಂದೂ ಆಚರಣೆಯಾಗಿದೆ.

ದತ್ತಮಾಲೆಯನ್ನು ನಾವೇಕೆ ಧರಿಸಬಾರದು, ಸಮಯ ಬಂದಾಗ ನಾನೂ ಸಹ ಧರಿಸುತ್ತೇನೆ ಕಾನೂನು ಬಾಹಿರವಲ್ಲ, ಸಂಸ್ಕೃತಿಯನ್ನು ಕಾಪಾಡಲು ಕಾನೂನಿನ ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.

ದತ್ತಮಾಲಾ ಧಾರಣೆಯನ್ನು ಯಾಕೆ ಮಾಡಬಾರದು ಎಂಬ ಹೆಚ್‌ಡಿಕೆ ಹೇಳಿಕೆಗೆ ಹರ್ಷ ವ್ಯಕ್ತಪಡಿಸಿರುವ ಹಿಂದು ಮುಖಂಡರು. ಬಜರಂಗದಳ, ವಿಶ್ವಹಿಂದು ಪರಿಷತ್‌ನಿಂದ ಹೆಚ್.ಡಿ.ಕೆಗೆ ಆಹ್ವಾನ ನೀಡುವ ಸಾಧ್ಯತೆಯಿದೆ.

ವಿಹೆಚ್​ಪಿ ಕಾರ್ಯಕರಣಿ ಸದಸ್ಯ ರಘು ಸಕಲೇಶಪುರ ಅವರು ಕುಮಾರಸ್ವಾಮಿಯವರು ದತ್ತಮಾಲಾಧಾರಣೆ ಮಾಡಲು ನಿರ್ಧರಿಸುವುದು ಸ್ವಾಗತಾರ್ಹ, ನಿಮ್ಮ ರಾಜಕೀಯ ಭವಿಷ್ಯ ಬದಲಾಗಲಿದ್ದು, ಇನ್ನಷ್ಟು ಶಕ್ತಿ ನೀಡಲಿ ಎಂದು ದತ್ತಾತ್ರೇಯ ಸ್ವಾಮಿಯಲ್ಲಿ ಬೇಡುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಡಿಸೆಂಬರ್ 17 ರಿಂದ 26ರವರೆಗೆ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನ ನಡೆಯಲಿದ್ದು, ಇದರಲ್ಲಿ ಪಾಲ್ಗೊಳುವಂತೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳು ಹೆಚ್​​ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ಹೊಸ ಅವತಾರದಲ್ಲಿ ದತ್ತಮಾಲಾಧಾರಿಯಾಗಿ ಪಾಲ್ಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಬಜರಂಗದಳದ ಮೇಲೆ ವಿವಿಧ ವಿಷಯಗಳ ಮೇಲೆ ವಾಗ್ದಾಳಿ ನಡೆಸಿದ್ದು, ಅವರ ಕಾರ್ಯಕರ್ತರು ರಾಮ ಮಂದಿರದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳಲು ಅದಕ್ಕೆ ಕೊಡುಗೆ ನೀಡದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದಾಗಿದೆ. ಏಪ್ರಿಲ್ 2023 ರಲ್ಲಿ, 'ಹಲಾಲ್ ಕಟ್' ವಿಷಯದ ಕುರಿತು, ಈ ಸಂಘಟನೆಗಳು ಸಮಾಜವನ್ನು ವಿಭಜಿಸುತ್ತಿವೆ ಎಂದು ಆರೋಪಿಸಿದ್ದರು.

ಸಮಾಜವನ್ನು ವಿಭಜಿಸುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದ್ದಾರೆ. ಜನರನ್ನು ವಿಭಜಿಸುವ ಇಂತಹ ಸಂಘಟನೆಗಳ ವಿರುದ್ಧ ನನ್ನ ನಿಲುವು ಅಚಲವಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT