ಆರ್.ಅಶೋಕ್ 
ರಾಜಕೀಯ

ರಾಜ್ಯದ ಐಟಿ ದಾಳಿಗೆ ಬೆಚ್ಚಿದ ಕಾಂಗ್ರೆಸ್; ವಸೂಲಿ ಕಡಿಮೆ ಮಾಡಲು ಹೈಕಮಾಂಡ್ ಸೂಚನೆ: ಆರ್. ಅಶೋಕ್‌

ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಸೂಲಿ ಜಾಸ್ತಿ ಆಯ್ತು, ಕಡಿಮೆ ಮಾಡಿ ಎಂದು ಒಬ್ಬೊಬ್ಬರನ್ನು ಕರೆದು ಹೇಳ್ತಿದ್ದಾರೆ. ಹುಷಾರಾಗಿ ವಸೂಲಿ ಮಾಡಿ ಎಂದು ಹೇಳ್ತಿದ್ದಾರೆ ಎಂದರು.

ಬೆಂಗಳೂರು: ರಾಜ್ಯದಲ್ಲಿ ಐಟಿ ದಾಳಿಯಿಂದ ಕಾಂಗ್ರೆಸ್ ಹೈಕಮಾಂಡ್ ನಡುಗಿದೆ.‌ ಈ ಕಾರಣಕ್ಕಾಗಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟು, ವಸೂಲಿ ಕಡಿಮೆ ಮಾಡಿ ಎಂದು ಒಬ್ಬೊಬ್ಬರನ್ನು ಕರೆದು‌ ಸೂಚನೆ ‌ನೀಡುತ್ತಿದ್ದಾರೆ ಎಂದು ಮಾಜಿ‌ ಸಚಿವ ಆರ್. ಅಶೋಕ್‌ ವ್ಯಂಗ್ಯವಾಡಿದ್ದಾರೆ.

ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಸೂಲಿ ಜಾಸ್ತಿ ಆಯ್ತು, ಕಡಿಮೆ ಮಾಡಿ ಎಂದು ಒಬ್ಬೊಬ್ಬರನ್ನು ಕರೆದು ಹೇಳ್ತಿದ್ದಾರೆ. ಹುಷಾರಾಗಿ ವಸೂಲಿ ಮಾಡಿ ಎಂದು ಹೇಳ್ತಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಕೋಟಿ ‌ಕೋಟಿ ಲೂಟಿ ಮಾಡ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳ ಕಾಲ ಯಾವುದೇ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗಿರಲಿಲ್ಲ. ಕಾಮಗಾರಿ ತನಿಖೆಯ ಬಳಿಕ ಹಣ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆದರೆ ಅಸಲಿ ವಿಚಾರ ಕಮಿಷನ್ ಆಗಿದೆ ಎಂದು‌ ಆರೋಪಿಸಿದರು.

ಕರ್ನಾಟಕದ ಹಣ ಬೆಂಗಳೂರಿಗೆ ಬಂದು‌ ಶೇಖರಣೆ ಆಗಿ, ನಂತರ ತೆಲಂಗಾಣ ಹಾಗೂ ಮಧ್ಯ ಪ್ರದೇಶಕ್ಕೆ ಹಣ ರವಾನೆ ಆಗುತ್ತಿದೆ. ಎರಡು ರಾಜ್ಯಗಳನ್ನು ಕಾಂಗ್ರೆಸ್ ದತ್ತು ಪಡೆದುಕೊಂಡಿದೆ. ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶಕ್ಕೆ ಟ್ರಕ್ ಗಳ ಮೂಲಕ ಹಣ ರವಾನೆ ಮಾಡುವ ಪ್ಲ್ಯಾನ್  ಇತ್ತು, ಇದಕ್ಕಾಗಿ‌ ಹಣ ಶೇಖರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಬರಗೆಟ್ಟು ಹೋಗಿದೆ. ಕರ್ನಾಟಕ ಅವರ ಪಾಲಿಗೆ ಎಟಿಎಂ ಆಗಿದೆ. ಕಮಿಷನ್ ಮೂಲಕ ಹಣ ಹೊಡೆಯುತ್ತಿದ್ದಾರೆ. ಅವರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್