ಹೆಚ್ ಡಿ ಕುಮಾರಸ್ವಾಮಿ(ಸಂಗ್ರಹ ಚಿತ್ರ) 
ರಾಜಕೀಯ

ನಿಮಗೆ ನಾನೇ ರಾಜಕೀಯ ವಿಲನ್: ಡಿಕೆಶಿ ಬಹಿರಂಗ ಚರ್ಚೆಯ ಸವಾಲು ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ

ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಬಹಿರಂಗ ಚರ್ಚೆಗೆ ಡಿಕೆ ಶಿವಕುಮಾರ್ ಹಾಕಿರುವ ಸವಾಲನ್ನು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ. 

ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಬಹಿರಂಗ ಚರ್ಚೆಗೆ ಡಿಕೆ ಶಿವಕುಮಾರ್ ಹಾಕಿರುವ ಸವಾಲನ್ನು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ. 

ನಾನು ಪಲಾಯನ ಮಾಡಲ್ಲ, ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದರೊಂದಿಗೆ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಮತ್ತೊಂದು ರಾಜಕೀಯ ಕದನ ಶುರುವಾಗಿದೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ವಿಜಯದಶಮಿಯ ಆಸುಪಾಸಿನಲ್ಲಿ ಹಬ್ಬದ ಆಚರಣೆ ಜೊತೆಗೆ ಸಿಎಂ ಹಾಗೂ ಡಿಸಿಎಂ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಅದಕ್ಕೆ ಸಂಬಂಧಪಟ್ಟ ಎರಡು ಮೂರು ವಿಚಾರಗಳಿಗೆ ಡಿಸಿಎಂ ನನಗೆ ಸವಾಲು ಹಾಕಿದ್ದಾರೆ. ಅದಕ್ಕೆ ನಾನು ಚರ್ಚೆಗೆ ಸಿದ್ದನಿದ್ದೇನೆ. ನಾನು ಸ್ವೀಕಾರ ಮಾಡುತ್ತೇನೆ. ಪಲಾಯನ ಮಾಡಲ್ಲ. ನನ್ನ ಹತ್ತಿರ ಸಹ ಸರಕು ಇದೆ. ಇವತ್ತಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಕಾರಣ ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಶ್ವೇತ ಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ ಇದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ನಾನೇ ವಿಲನ್: ರಾಜಕೀಯವಾಗಿ ವಿಲನ್ ನಾನೇ, ವಿಪಕ್ಷದವನಾಗಿ ನಾನು ಅವರಿಗೆ ಸ್ನೇಹಿತನಾಗಲು ಆಗುತ್ತಾ, ನೀವು ಮಾಡುವ ತಪ್ಪು ಕೆಲಸಕ್ಕೆ ನಾನು ವಿಲನ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಸರ್ಕಾರ ರಚನೆಯಾದ ಹದಿನೈದೇ ದಿನದಲ್ಲಿ ರಮೇಶ್ ಜಾರಕಿಹೊಳಿ ಅಜ್ಮೀರ್‌ಗೆ ಹೋದ್ರಲ್ಲ ನನ್ನಿಂದ ಹೋದರಾ ಎಂದರು. ಬೆಳಗಾವಿ ಬಂಡಾಯ ಯಾರು ಸರಿಪಡಿಸಬೇಕಿತ್ತು. ನಾನು ಜಾರಕಿಹೊಳಿ ಮನೆಗೆ ಎಷ್ಟು ಬಾರಿ ಹೋದೆ ನೀವು ಕೈ ಜೋಡಿಸದಿದ್ರೆ ಅವರು ಯಾಕೆ ಸರ್ಕಾರ ತೆಗೆಯುತ್ತಿದ್ರು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು.

ಅಪ್ಪ ನಮಸ್ಕಾರ ಕಣ್ರಪ್ಪ, 14 ತಿಂಗಳಲ್ಲಿ ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಕಣ್ರಪ್ಪ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಪ್ಪ ಶಿವಕುಮಾರ್ ಸಾಹಬ್ರೇ ಕನಕಪುರದಲ್ಲಿ ಬಮೂಲ್ ಮಿಲ್ಕ್ ಪೌಡರ್ ಕಾರ್ಖಾನೆಗೆ ಭೂಮಿ ಕೊಟ್ಟ ರೈತರ ಹೆಸರಲ್ಲಿ ಪರಿಹಾರವನ್ನು ನಿಮ್ಮ ಪಟಾಲಂ‌ ಲೂಟಿ ಹೊಡೆದ್ರು. ಒಟ್ಟು ಐವತ್ತು ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆ ರೈತರ ಬಳಿ ಇವರ ಪಟಾಲಂ ಜಿಪಿಎ ಮಾಡಿಕೊಂಡು ಹೆಚ್ಚಿನ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಆಣೆ ಪ್ರಮಾಣಕ್ಕೆ ಸವಾಲು ಹಾಕಿದ ಕುಮಾರಸ್ವಾಮಿ: ವರ್ಗಾವಣೆಯಲ್ಲಿ ಯಾವುದೇ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿ. ಸಿಎಂ, ಡಿಸಿಎಂ ಹಾಗೂ ಎಲ್ಲಾ ಮಂತ್ರಿಗಳು ಬಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಕಳೆದ ಐದು ತಿಂಗಳಲ್ಲಿ ಯಾವುದೇ ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿ. ನಾನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಹಳೇ ವಿಚಾರ ಬೇಡ ಈ 5 ತಿಂಗಳಲ್ಲಿ ಲಂಚ ಪಡೆದಿಲ್ಲವೆಂದು ಪ್ರಮಾಣ ಮಾಡಿ. ಧರ್ಮಸ್ಥಳ ಬೇಡ ಅಂದ್ರೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗೋಣ ಬನ್ನಿ. ನೀವು ದೊಡ್ಡ ಆಲಹಳ್ಳಿಯಲ್ಲಿ ಏನೇನು ಮಾಡಿದ್ದೀರಾ ಅಂತಾ ಗೊತ್ತಿದೆ. ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ಒಪ್ಪಿಕೊಂಡಿದ್ದೇನೆ. ನಾನು ನಿಮ್ಮ ರೀತಿ ಕೆಲಸ ಮಾಡಿಲ್ಲ ಎಂದರು.

ವಸತಿ ಇಲಾಖೆಯಲ್ಲಿ ಅಕ್ರಮ: ನಾನು ಮೈತ್ರಿ ಸರ್ಕಾರ ಮಾಡಿದಾಗ ವಸತಿ ಇಲಾಖೆಗೆ ಸಂಬಂಧಪಟ್ಟ ವಿಚಾರ ಹೇಳುತ್ತೇನೆ. ಚುನಾವಣೆಗೆ ಮುಂಚೆ 15 ಲಕ್ಷ ಮನೆ ಕಟ್ಟುವುದಕ್ಕೆ ಆದೇಶ ಪ್ರತಿ ಹೊರಡಿಸಿದ್ದರು. 2018 ಫೆಬ್ರುವರಿಯಲ್ಲಿ ಬಜೆಟ್ ಮಂಡನೆ ಮಾಡಿದ್ದು, 2,700 ಕೋಟಿ ರೂಪಾಯಿ ಬಜೆಟ್ ನಲ್ಲಿ ಇಟ್ಟಿದ್ದರು. ನಾನು ಅಧಿಕಾರ ಸ್ವೀಕಾರ ಮಾಡಿದಾಗ 29 ಸಾವಿರ ಕೋಟಿ ರೂಪಾಯಿ ಕಮಿಟ್​ಮೆಂಟ್ ಇತ್ತು. ಆದರೆ, ಅದಕ್ಕೆ ಫೈನಾನ್ಸ್ ಅಪ್ರುವಲ್ ಅಗಿರಲಿಲ್ಲ. 1,500 ಕೋಟಿ ದುಡ್ಡು ಯಾರು ಕೊಡುತ್ತಿದ್ದರು. ಫೈನಾನ್ಸ್ ಅಪ್ರುವಲ್ ಇಲ್ಲ. 1,500 ಕೊಟಿಯಲ್ಲಿ ಎಷ್ಟು ವಸೂಲಿ ಮಾಡಿದ್ದಿರಾ? ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. 80 ಶಾಸಕರು ಯಾವುದೇ ಷರತ್ತಿಲ್ಲದೆ ಸಿಎಂ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಮೊದಲ ದಿನದಿಂದ ಷರತ್ತುಗಳನ್ನ ಹಾಕುತ್ತಿದ್ದರು. ನಾವೇನು ನಿಮ್ಮ ಹೈಕಮಾಂಡ್ ಮುಂದೆ ಹೋಗಿದ್ನಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT