ಎಸ್ಎಸ್ ಮಲ್ಲಿಕಾರ್ಜುನ್ 
ರಾಜಕೀಯ

ಕಾಂಗ್ರೆಸ್ ಶಾಸಕರ ವಿರುದ್ಧ ಸಚಿವರ ಅಸಮಾಧಾನ: ಸಿಎಂ, ಡಿಸಿಎಂ ಗೆ ಎಸ್ಎಸ್ ಮಲ್ಲಿಕಾರ್ಜುನ್ ಪತ್ರ

ಕಾಂಗ್ರೆಸ್ ನಲ್ಲಿ ಸಚಿವರ ವಿರುದ್ಧ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ನಂತರ, ಈಗ ಸಚಿವರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಚಿವರ ವಿರುದ್ಧ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ನಂತರ, ಈಗ ಸಚಿವರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗಣಿ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಕೆಲವು ಶಾಸಕರು ಪಕ್ಷದ ಶಿಸ್ತನ್ನು ಮೀರಿ ಬಹಿರಂಗವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ ಅವರಿಗೆ ಲಗಾಮು ಹಾಕಿ ಎಂದು ಮನವಿ ಮಾಡಿದ್ದಾರೆ.  

ಶಾಸಕ ಬಸವರಾಜುರವರು ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ. ಇಂತಹವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇವರನ್ನು ಕರೆದು ಬುದ್ಧಿ ಹೇಳಿ ಹದ್ದುಬಸ್ತಿನಲ್ಲಿರುವಂತೆ ತಿಳಿ ಹೇಳಿ ಎಂದು ಸಚಿವರು ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಶಾಸಕರುಗಳು ತಮ್ಮ ಕೆಲಸ ಆಗುತ್ತಿಲ್ಲ. ಸಚಿವರು ತಮ್ಮ ಮಾತು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು ಸಚಿವರಿಗೆ ತಿಳಿ ಹೇಳಿದ್ದರು. ಹಾಗೆಯೇ, ಯಾವುದೇ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದಂತೆಯೂ ತಾಕೀತು ಮಾಡಿದ್ದರು. ಇಷ್ಟೆಲ್ಲ ಆದರೂ ಶಾಸಕರು ಹಾಗೂ ಸಚಿವರುಗಳ ನಡುವಿನ ಮಾತಿನ ಚಕಮಕಿಗಳು, ಪತ್ರ ಸಮರ ಮುಂದುವರೆದೇ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಸಂಪುಟ ವಿಸ್ತರಣೆ: 21 ಟಿವಿಕೆ, ಇಬ್ಬರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ; AIADMK ಹೊರಗಿಟ್ಟ ದಳಪತಿ

ಪ್ರಮಾಣ ವಚನ ಸ್ವೀಕಾರದ ವೇಳೆ ಕಾಂಗ್ರೆಸ್ ನಾಯಕನಿಗೆ ತಿದ್ದಿ, ಬುದ್ಧಿ ಹೇಳಿದ ಗವರ್ನರ್; ನೂತನ ಸಚಿವ ಮಾಡಿದ ತಪ್ಪೇನು?

Cockroach Janta Partyಯ 'x' ಖಾತೆಗೆ ನಿರ್ಬಂಧ; ಇನ್‌ಸ್ಟಾಗ್ರಾಂಗೂ ಬ್ರೇಕ್?

ಹಾರ್ಮುಜ್ ಜಲಸಂಧಿ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಗಡಿಗಳನ್ನು ಹೊಸದಾಗಿ ಗುರುತಿಸಿದ ಇರಾನ್!

ಪಶ್ಚಿಮ ಏಷ್ಯಾ ಸಂಘರ್ಷ: ಆನ್‌ಲೈನ್ ವಿಚಾರಣೆ ನಡೆಸುವಂತೆ 'ಎಲ್ಲಾ ಹೈಕೋರ್ಟ್‌ಗಳಿಗೆ ಕೇಳಿಕೊಂಡಿದ್ದೇವೆ' - ಸಿಜೆಐ ಸೂರ್ಯ ಕಾಂತ್

SCROLL FOR NEXT