ವಿಜಯಪುರ: ಯಾವನ್ರೀ ಅವನು ಸ್ಟಾಲಿನ್? ಉದಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಬಂಧ? ಅವನೊಬ್ಬ ಅಯೋಗ್ಯ, ಹುಚ್ಚ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ವಿಜಯಪುರದಲ್ಲಿ ಮಾತನಾಡಿದ ಅವರು, ಈ ಧರ್ಮದ ಬಗ್ಗೆ ಯಾರಾರು ಮಾತಾಡಿದಾರೋ? ಈ ಧರ್ಮವನ್ನು ಮುಟ್ಟಿದವನು ಯಾರಾದ್ರೂ ಉದ್ಧಾರ ಆಗಿದ್ದಾರಾ? ಉದಯನಿಧಿ ಸ್ಟಾಲಿನ್ ಹೇಳ್ತಾನೆ ಸನಾತನ ಧರ್ಮವನ್ನು ನಾಶ ಮಾಡ್ತಿನಿ ಅಂತಾ. ಅವರಪ್ಪ, ಅವರ ತಾತನ ಕಡೆಯಿಂದಲೇ ಆಗಿಲ್ಲ. ಧರ್ಮವನ್ನು ನಾಶ ಮಾಡಲು ಹೋದವರು ಯಾರೂ ಉಳಿದಿಲ್ಲ, ಇವನ್ಯಾವನು ಬಚ್ಚಾ ಎಂದು ಕಿಡಿಕಾರಿದ್ದಾರೆ.
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ತಂದೆ - ತಾಯಿಗೆ ಹುಟ್ಟಿದ್ದೇನೆ ಎಂಬ ನಟ ಪ್ರಕಾಶ್ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ರಾಜ್ ಅಯೋಗ್ಯ, ಅಪ್ಪ-ಅಮ್ಮಂಗೆ ಹುಟ್ಟಿದೀನಿ ಅಂತಾನೆ. ಅಪ್ಪ-ಅಮ್ಮಂಗೆ ಹುಟ್ಟಿದಾನೇ ಅನ್ನೋಕೆ ಗ್ಯಾರೆಂಟಿ ಏನು? ನನಗೆ ಅವರ ಅಮ್ಮನ ಬಗ್ಗೆ ಗೌರವ ಇದೆ. ಅವರ ಅಪ್ಪ ಯಾರು ಎಂದು ಕೇಳಿದ್ದಾನಾ? ಆದ್ರೆ, ಇವರೇ ಅಪ್ಪ ಎಂದು ಅವರ ತಾಯಿ ಹೇಳಿದಾಗ ಈತನಿಗೆ ಅಪ್ಪ ಅನ್ನೋದು ಗೊತ್ತಾಗಿದೆ ತಾನೇ ಎಂದು ಹೇಳಿದರು.
ಇದನ್ನೂ ಓದಿ: ಹಿಂದೂ ಧರ್ಮ ಯಾವಾಗ ಹುಟ್ಟಿತು? ಯಾರು ಹುಟ್ಟು ಹಾಕಿದರು? ಹೇಳಿಕೆ ಸಮರ್ಥಿಸಿಕೊಂಡ ಸಚಿವ ಡಾ. ಜಿ. ಪರಮೇಶ್ವರ್!
ಪ್ರಪಂಚಕ್ಕೆ ಶಾಂತಿ, ಧರ್ಮವನ್ನು ಹೇಳಿದ್ದು ಭಾರತ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅಂತಾ ಹೇಳಿದ್ದಾರೆ. ಮಾಡ್ತಾ ಇರೋದೆಲ್ಲಾ ಹಲಕಟ್ ಗಿರಿ. ಶಾಂತಿ ಕದಡಿಸೋದೆ ಅವರ ಕೆಲಸ. ಮುಸ್ಲಿಂರಿಗೆ ನೋವು ಮಾಡಿ ಅಂತಾ ಹೇಳಲ್ಲ. ಕುರಾನ್ ಬಗ್ಗೆ, ಮುಸ್ಲಿಮರು ಎಲ್ಲಿ, ಯಾವಾಗ ಹುಟ್ಟಿದ್ದು ಅಂತಾ ಪ್ರಶ್ನೆ ಕೇಳಲಿ ನೋಡೋಣ, ಅವರನ್ನು ಕೆಣಕಿ ನೋಡಲಿ ಇವರು. ಮಾತನಾಡಬೇಕಾದ್ರೆ ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಕಿಡಿಕಾರಿದರು.