ಡಿ ಕೆ ಶಿವಕುಮಾರ್ 
ರಾಜಕೀಯ

ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಅನುಕೂಲ, ಐ ವಿಶ್ ದೆಮ್ ಆಲ್ ದಿ ಬೆಸ್ಟ್: ಡಿ ಕೆ ಶಿವಕುಮಾರ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಮೈತ್ರಿಯಾದರೆ ಬಹಳ ಸಂತೋಷ; ಈ ಹಿಂದೆ ಕುಮಾರಣ್ಣ, ಅಶೋಕಣ್ಣ ಮೈತ್ರಿ ಮಾಡಿಕೊಂಡಿದ್ದರು. ಈಗ ಮೈತ್ರಿಯಾದರೆ ಸಿದ್ಧಾಂತ ಹೇಗೆ ಉಳಿಸಿಕೊಳ್ತಾರೋ ಗೊತ್ತಿಲ್ಲ ಎಂದರು.

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಮೈತ್ರಿಯಾದರೆ ಬಹಳ ಸಂತೋಷ; ಈ ಹಿಂದೆ ಕುಮಾರಣ್ಣ, ಅಶೋಕಣ್ಣ ಮೈತ್ರಿ ಮಾಡಿಕೊಂಡಿದ್ದರು. ಈಗ ಮೈತ್ರಿಯಾದರೆ ಸಿದ್ಧಾಂತ ಹೇಗೆ ಉಳಿಸಿಕೊಳ್ತಾರೋ ಗೊತ್ತಿಲ್ಲ. ಜೆಡಿಎಸ್ ಉಳಿದುಕೊಳ್ಳುತ್ತೋ ಇಲ್ವೋ ಗೊತ್ತಿಲ್ಲ. ಮೈತ್ರಿ ಮಾತುಕತೆಗೆ ನಮ್ಮ ವಿರೋಧವಿಲ್ಲ, ಐ ವಿಶ್ ದೆಮ್ ಆಲ್ ದಿ ಬೆಸ್ಟ್’, ಕಾಂಗ್ರೆಸ್ ಗೆ ಅನುಕೂಲವೇ ಎಂದರು.

ಆಪರೇಷನ್ ಹಸ್ತದ ಬಗ್ಗೆ ಮಾತನಾಡಿ, ‘ನಾನು ಆಪರೇಷನ್ ಹಸ್ತಕ್ಕೆ ವಿರೋಧ; ನಮ್ಮದು ಸ್ನೇಹದ ಹಸ್ತ. ನಮ್ಮ ಸಿದ್ಧಾಂತ, ಭಾರತ್ ಜೋಡೋ ಯಾತ್ರೆಗೆ ಯಾರು ಮೆಚ್ಚುಗೆ ಕೊಡುತ್ತಾರೋ ಅವರನ್ನು ಅಪ್ಪಿಕೊಂಡು ಬರಮಾಡಿಕೊಳ್ಳುತ್ತೇವೆ ಎಂದರು.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನಗರ ಬಂದ್ ರಾಜಕೀಯ ಪ್ರೇರಿತ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜಿನ ಟೆಂಡರ್ ನಡೆದಿತ್ತು. ಭೂಮಿ ಪೂಜೆ ಆಗುವ ಹೊತ್ತಿಗೆ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದರು. ಯೂನಿವರ್ಸಿಟಿ ಒಂದು ಕಡೆ ಮೆಡಿಕಲ್ ಕಾಲೇಜು ಇನ್ನೊಂದು ಕಡೆ ಆಗುತ್ತೆ. ಮೆಡಿಕಲ್ ಕಾಲೇಜು ಕನಕಪುರಕ್ಕೆ ಕೊಡುವುದಕ್ಕೆ ಕುಮಾರಸ್ವಾಮಿ ದಡ್ಡರಲ್ಲ. ಪ್ರತಿಭಟನೆ ಮಾಡುವವರು ಹಾಗೂ ಜನರ ಮಧ್ಯೆ ಜಗಳ ಮಾಡುವವರು ಮಾಡಿಕೊಳ್ಳಲಿ ಎಂದು ಬಿಜೆಪಿಯ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

ನಗರದ ಫ್ರೀಡಂಪಾರ್ಕಿನಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಕೇಂದ್ರ ಸರ್ಕಾರದಿಂದ ಮೊದಲು ಮೇಕೆದಾಟು, ಮಹಾದಾಯಿಗೆ ಅನುಮತಿ ಕೊಡಿಸಲಿ. ಜನ ಅವರನ್ನು ವೀರೋಧಿಸಿದ್ದಕ್ಕೆ ಪ್ರತಿಪಕ್ಷ ನಾಯಕನ್ನು ಆಯ್ಕೆ ಮಾಡಲಿಕ್ಕೆ ಆಗಲಿಲ್ಲ. ಗ್ಯಾರಂಟಿ ಯೋಜನೆಗಳು ಜಾರಿ ಆಗಿದೆ; ಅದಕ್ಕೆ ಅವರಿಗೆ ಸಹಿಸಲಿಕ್ಕೆ ಆಗಲಿಲ್ಲ. ನೂರು ದಿನಗಳಲ್ಲಿ ಅಭಿವೃದ್ಧಿ ಮಾಡಿದ್ವಿ, ದೇಶದಲ್ಲಿ ಇಂತಹ ಪಕ್ಷ ಇದೆಯಾ ಪ್ರತಿಭಟನೆ ಮಾಡುವುದಾದ್ರೆ ಮಾಡಲಿ ಬಿಡಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು