ರಾಜಕೀಯ

ರಾಜ್ಯದ ಜನರನ್ನು ಕಾಡುತ್ತಿರುವ 5 ಸಮಸ್ಯೆ ಮುಂದಿಟ್ಟು, ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

Nagaraja AB

ಬೆಂಗಳೂರು: ರಾಜ್ಯದ ಜನರನ್ನು ಕಾಡುತ್ತಿರುವ ಐದು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ರಾಜ್ಯದ ಜನರಿಗೆ ಬರಗಾಲ ಸಮಸ್ಯೆ ಕಾಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿ.ಕೆ. ಹರಿಪ್ರಸಾದ್ ಕಾಡುತ್ತಿರುವ ಸಮಸ್ಯೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ. 

ರಾಜ್ಯದ ಜನರು ಬರಗಾಲ, ಬರಿದಾದ ಜಲಾಶಯಗಳು, ಬೆಲೆ ಏರಿಕೆ, ಕಲುಷಿತ ನೀರು ಪೂರೈಕೆ ಮತ್ತು ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ಕಾಡುತ್ತಿವೆ. ಆದರೆ, ಸಿದ್ದರಾಮಯ್ಯ ಅವರಿಗೆ ಬಿ.ಕೆ ಹರಿಪ್ರಸಾದ್ ಮತ್ತು ಡಿ.ಕೆ. ಶಿವಕುಮಾರ್ ಅವರು ಸಮಸ್ಯೆಗಳಾಗಿ ಕಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಿಜೆಪಿ ವ್ಯಂಗ್ಯವಾಡಿದೆ.

ಕರ್ನಾಟಕಕ್ಕೆ ಸಂಬಂಧವಿಲ್ಲದ ಪ್ರತಿಮೆಗಳ ನಿರ್ಮಾಣಕ್ಕೆ, ಮಂತ್ರಿಗಳ ಹೊಸ ಕಾರುಗಳಿಗೆ, ಓಲೈಕೆ ರಾಜಕಾರಣ ಸೇರಿದಂತೆ ಅನವಶ್ಯಕ ಖರ್ಚುಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಣವಿದೆ. ಆದರೆ, ಬರ ನಿರ್ವಹಣೆಗೆ ಮಾತ್ರ ಹಣವಿಲ್ಲ, ಸ್ವಾಮಿ ಸಿದ್ದರಾಮಯ್ಯ ಅವರೇ, ಕೇವಲ 900 ಕೋಟಿ ರೂ. ಹೊಂದಿಸಲಾಗದಷ್ಟು ರಾಜ್ಯ ಸರ್ಕಾರ ದಿವಾಳಿಯಾಗಿದಿಯೇ? ವಾರ್ಷಿಕ 3.27 ಲಕ್ಷ ಕೋಟಿ ಬಜೆಟ್ ಮಂಡಿಸುವ ಕರ್ನಾಟಕ ಸರ್ಕಾರದಲ್ಲಿ ಬರ ನಿರ್ವಹಣೆಗೆ 900 ಕೋಟಿ ರೂ. ಸಹ ಇಲ್ಲವೆಂದರೆ ಏನರ್ಥ ಎಂದು ಬಿಜೆಪಿ ಪ್ರಶ್ನಿಸಿದೆ.
 

SCROLL FOR NEXT