ಸಂಗ್ರಹ ಚಿತ್ರ 
ರಾಜಕೀಯ

ಚುನಾವಣೆ ಬಂದಾಗ ಮಾತ್ರ ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಸುಳ್ಳಿನ ಭಾಷಣ ಬಿಗಿಯುವ ಪ್ರಧಾನಿಯೇ, ಶೋಭಾ ಅವರೇ?: ಕಾಂಗ್ರೆಸ್ ಪ್ರಶ್ನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆ ಬಂದಾಗ ಮಾತ್ರ ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಸುಳ್ಳಿನ ಭಾಷಣ ಬಿಗಿಯುವ ಪ್ರಧಾನಿಯೇ ಶೋಭಾ ಅವರೇ? ಎಂದು ಪ್ರಶ್ನಿಸಿದೆ.

ಮೋದಿ ಕೇವಲ ಕರ್ನಾಟಕ, ತಮಿಳುನಾಡಿಗೆ ಪ್ರಧಾನಿ ಅಲ್ಲ, ಇತರ ರಾಜ್ಯಗಳ ಜಲ ವಿವಾದಗಳನ್ನೂ ಅವರು ಬಗೆಹರಿಸಬೇಕಿದೆ" ಇದು ಕನ್ನಡಿಗರಿಂದ ಆಯ್ಕೆಯಾದ ಕೇಂದ್ರ ಸಚಿವೆಯೊಬ್ಬರ ಮಾತು. ಕಾವೇರಿ ವಿಚಾರದಲ್ಲಿ ಬಿಜೆಪಿ ಅದೆಷ್ಟು ದುರಹಂಕಾರದ ಧೋರಣೆ ಹೊಂದಿದೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಪ್ರಧಾನಿ ಮೋದಿಗೆ ಫೋಟೋಶೂಟ್ ಮಾಡಿಸುವುದಕ್ಕೆ ಸಮಯ ಸಾಲದು ಸಮಸ್ಯೆ ಬಗೆಹರಿಸಲು ಸಮಯ ಎಲ್ಲಿದೆ ಎನ್ನುವುದು ಈ ಮಾತಿನ ಅರ್ಥವೇ?

ಚುನಾವಣೆ ಬಂದಾಗ ಮಾತ್ರ ಅವರು ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಸುಳ್ಳಿನ ಭಾಷಣ ಬಿಗಿಯುವ ಪ್ರಧಾನಿಯೇ ಶೋಭಾ ಅವರೇ?...ಪ್ರಧಾನಿ ಹುದ್ದೆಯ ಹೊಣೆಗಾರಿಕೆ ರಾಜ್ಯಗಳ ನಡುವಿನ ಸಮಸ್ಯೆ ಬಗೆಹರಿಸುವುದೇ ಹೊರತು ಚುನಾವಣೆ ರೋಡ್ ಶೋಕಿ ಮಾಡುವುದಲ್ಲ ಎಂಬುದರ ಅರಿವು ಮೋದಿಯವರಿಗೂ ಇಲ್ಲ, ಅವರ ಪಕ್ಷದವರಿಗೂ ಇಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!