ಸುಮಲತಾ ಅಂಬರೀಷ್ 
ರಾಜಕೀಯ

ಸುಮಲತಾ ನಿರ್ಧಾರಕ್ಕೆ ಕೌಂಟ್ ಡೌನ್: ಸಂಸದೆಯ ಮುಂದೇನಿದೆ ಆಫ್ಷನ್? ಬಂಡಾಯವೋ, ಋಣ ಸಂದಾಯವೋ?

ದಿವಂಗತ ಜನ ಅಂಬರೀಷ್ ಜನಪ್ರಿಯತೆಯಿಂದಾಗಿ ಮಂಡ್ಯ ರಾಜಕೀಯದಲ್ಲಿ ಅವರ ಹೆಸರು ಅಜರಾಮರ, ಹೀಗಾಗಿ ಎಲ್ಲಾ ಪಕ್ಷಗಳು ಅಂಬರೀಷ್ ಅವರ ಹೆಸರು ಎಳೆದು ತರುತ್ತಿವೆ.

ಬೆಂಗಳೂರು: ಸಕ್ಕರೆ ನಾಡಿನ ಸವಿಪಾಕ ಸವಿಯಲು ಸಮರ ನಡೆಯುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಸ್ವಾಭಿಮಾನದ ಹೆಸರಲ್ಲಿ ಗೆದ್ದು ಬೀಗಿದ ಸುಮಲತಾ ಈ ಬಾರಿ ನಿರ್ಧಾರವೇ ಅತಂತ್ರದಲ್ಲಿ ಸಿಲುಕಿದೆ. ನಾಳೆ ರೆಬಲ್ ಲೇಡಿ ನಿರ್ಧಾರ ಪ್ರಕಟಿಸಲಿದ್ದು, ಕೌಂಡ್ ಡೌನ್ ಶುರುವಾಗಿದೆ.

ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯಗಳು ಚುರುಕುಗೊಂಡಿದ್ದು, ಮಂಡ್ಯ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ದಿವಂಗತ ನಟ ಅಂಬರೀಶ್ ಅವರ ಹೆಸರನ್ನು ಎಳೆದು ತರುತ್ತಿವೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ತಮಗೆ ಬೆಂಬಲ ಕೋರಿ ಸುಮಲತಾ ಅವರನ್ನು ಭೇಟಿ ಮಾಡಿದ್ದನ್ನು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದರು.

2019 ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದ ತಮ್ಮ ವೈರಿ ಸುಮಲತಾ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ, ಮಂಡ್ಯ ರಾಜಕೀಯದ ಘಟನಾವಳಿಗಳ ನೋಡಿ ನನಗೆ ಅಸಹ್ಯವಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಸುಮಲತಾ ಕುಮಾರಸ್ವಾಮಿ ನನ್ನನ್ನು ಭೇಟಿ ಮಾಡಿದರೆ ತಪ್ಪೇನು? ನನ್ನ ಪತಿ ಅಂಬರೀಶ್ ಅವರು ಎರಡು ದಶಕಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಅಂಬರೀಷ್ ಏನಾದರೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆಯೇ ಎಂದು ಸುಮಲತಾ ಪ್ರಶ್ನಿಸಿದ್ದಾರೆ.

ಈ ವಿಚಾರ ಭಾವನಾತ್ಮಕ ತಿರುವು ಪಡೆದುಕೊಳ್ಳಬಹುದು ಎಂಬುದನ್ನು ಮನಗಂಡ ಶಿವಕುಮಾರ್, ಸುಮಲತಾ ಅವರ ರಾಜಕೀಯದಲ್ಲಿ ತಾನು ಎಂದಿಗೂ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂಬರೀಶ್ ಅವರಿಗೆ ಕಾಂಗ್ರೆಸ್ ಏನು ಕೊಟ್ಟಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದರು.

ಸುಮಲತಾ ಮಂಡ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವರೇ ಅಥವಾ ಬಿಜೆಪಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಬಗ್ಗೆ ಬುಧವಾರ ತಮ್ಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿರುವುದರಿಂದ ಎಲ್ಲರ ಚಿತ್ತ ಬುಧವಾರದ ನಿರ್ಧಾರದತ್ತ ಹೊರಳಿದೆ. ಬೆಂಗಳೂರಿನ ಸುಮಲತಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಸುಮಲತಾ ಅವರನ್ನು ಅಕ್ಕ ಎಂದು ಕರೆದ ಕುಮಾರಸ್ವಾಮಿ, ಅಂಬರೀಶ್ ತಮಗೆ ಆತ್ಮೀಯರು ಎಂದು ಹೇಳಿಕೊಂಡರು.

2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರನ್ನು ಬೆಂಬಲಿಸಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮುಂಬರುವ ಚುನಾವಣೆಯಲ್ಲಿ ತಟಸ್ಥವಾಗಿರುವಂತೆ ಸೂಚಿಸಿದ್ದರು. ಹೀಗಾಗಿ ತಟಸ್ಥವಾಗುವ ಮೂಲಕ ಕಾಂಗ್ರೆಸ್ ಗೆ ಋಣಸಂದಾಯ ಮಾಡಲಿದ್ದಾರಾ ಎಂಬುದು ಸದ್ಯದ ಕುತೂಹಲ. ಹಿಂದಿನ ಚುನಾವಣೆಯಲ್ಲಿ, ಅವರು 2018 ರಲ್ಲಿ ಅಂಬರೀಶ್ ನಿಧನದ ನಂತರ ಅನುಕಂಪದ ಅಲೆಯಲ್ಲಿ ಸುಮಲತಾ ಅಭೂತ ಪೂರ್ವ ಗೆಲುವು ಕಂಡಿದ್ದರು. ಈ ಬಾರಿ ಅವರು ರಾಜಕೀಯವಾಗಿ ದೂರ ಉಳಿಯುವ ಅಥವಾ ಸಕ್ರಿಯವಾಗಿ ಭಾಗವಹಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಮಂಡ್ಯದ ಗಂಡು (ಮಂಡ್ಯದ ಮಗ) ಎಂದು ಕರೆಯಲ್ಪಡುವ ಅಂಬರೀಶ್ ಮೂರು ಬಾರಿ ಸಂಸದರಾಗಿದ್ದರು. ಅವರ ಜನಪ್ರಿಯತೆಯಿಂದಾಗಿ ಮಂಡ್ಯ ರಾಜಕೀಯದಲ್ಲಿ ಅವರ ಹೆಸರು ಅಜರಾಮರ, ಹೀಗಾಗಿ ಎಲ್ಲಾ ಪಕ್ಷಗಳು ಅಂಬರೀಷ್ ಅವರ ಹೆಸರು ಎಳೆದು ತರುತ್ತಿವೆ.1998 ರಿಂದ 1999 ರವರೆಗೆ ಜೆಡಿಎಸ್ ಮತ್ತು 1999-2004 ಮತ್ತು 2004-2009 ರಿಂದ ಕಾಂಗ್ರೆಸ್ ಪ್ರತಿನಿಧಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರಲ್ಲಿ ಕಾವೇರಿ ನದಿ ವಿವಾದ ನ್ಯಾಯಾಧಿಕರಣದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಮುಂದಿನ ರಾಜಕೀಯ ನಡೆಯನ್ನು ಏಪ್ರಿಲ್ 3 ರಂದು ಘೋಷಿಸಲಿದ್ದು, ಸ್ವಾಭಿಮಾನದ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೆಚ್ಚುತ್ತಿದೆ. ಸುಮಲತಾ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಬೇಕು ಅಥವಾ ಮುಂಬರುವ ಚುನಾವಣೆಯಲ್ಲಿ ತಟಸ್ಥ ನಿಲುವು ತೆಗೆದುಕೊಳ್ಳಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಇದೇ ವೇಳೆ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ ವೈ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಸಂಸದರು ತಮ್ಮ ಅನುಯಾಯಿಗಳು ಮತ್ತು ಹಿರಿಯ ನಟ ದಿವಂಗತ ಅಮಬರೀಷ್ ಅವರ ಅಭಿಮಾನಿಗಳ ಸಭೆ ಕರೆದಿದ್ದು, ಚರ್ಚಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT