ಸಂಯುಕ್ತಾ ಪಾಟೀಲ್ 
ರಾಜಕೀಯ

Samyuktha Patil: ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್, ಸೋದರ ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆ; ತಣಿಯದ ವೀಣಾ ಮುನಿಸು!

ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾದಲ್ಲಿಂದಲೂ ಅಸಮಾಧಾನ, ಬಂಡಾಯ,ಮುನಿಸು ಶಮನವಾಗಿಲ್ಲ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದು. ಈ ಹೊತ್ತಿನಲ್ಲಿ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ಗೆ ಎರಡು ಬಿಗ್ ಶಾಕ್ ಎದುರಾಗಿದೆ.

ಬಾಗಲಕೋಟೆ: ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾದಲ್ಲಿಂದಲೂ ಅಸಮಾಧಾನ, ಬಂಡಾಯ,ಮುನಿಸು ಶಮನವಾಗಿಲ್ಲ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದು. ಈ ಹೊತ್ತಿನಲ್ಲಿ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ಗೆ ಎರಡು ಬಿಗ್ ಶಾಕ್ ಎದುರಾಗಿದೆ.

ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಬಾಗಲಕೋಟೆ ಕ್ಷೇತ್ರದ ಜನರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಸಂದೇಶ ಕಳುಹಿಸುವ ಮೂಲಕ ಶಾಕ್ ನೀಡಿದ್ದರೆ, ಮತ್ತೊಂದೆಡೆ ಅವರ ಸೋದರ ಹರ್ಷಗೌಡ ಪಾಟೀಲ್ ಕೈ ತೊರೆದು ಕಮಲ ಹಿಡಿಯುವ ಮೂಲಕ ಸೋದರಿಯ ವಿರುದ್ಧವೇ ಪ್ರಚಾರ ನಡೆಸುವ ಸುಳಿವು ನೀಡಿದ್ದಾರೆ.

ಬಿಜೆಪಿ ಸೇರಿದ ಹರ್ಷಗೌಡ ಪಾಟೀಲ್: ಸಚಿವ ಶಿವಾನಂದ್ ಪಾಟೀಲ್ ಸಹೋದರ ಪುತ್ರ ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅಭ್ಯರ್ಥಿಯ ಸೋದರನನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಬಿಜೆಪಿ ಸೇರಿದ ಬಳಿಕ ಮಾತನಾಡಿದ ಹರ್ಷಗೌಡ ಪಾಟೀಲ್, ಮೋದಿ ಅವರ ಕೆಲಸ ಮೆಚ್ಚಿಕೊಂಡು ರಾಷ್ಟ್ರ ಕಟ್ಟುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ನಾನು ಟಿಕೆಟ್ ಬಯಸಿರಲಿಲ್ಲ. ಬಿಜೆಪಿ ಸೇರುವುದಕ್ಕೆ ಬಹಳ ವರ್ಷದ ಕನಸಿತ್ತು ಎಂದು ಹೇಳಿದರು.

ಬಿಜೆಪಿ ಸೇರ್ಪಡೆ ಬಗ್ಗೆ ಶಿವಾನಂದ್ ಪಾಟೀಲ್ ಕುಟುಂಬ ಒಪ್ಪುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ಷಗೌಡ ಪಾಟೀಲ್, ಅವರ ಮನೆಯೇ ಬೇರೆ, ನಮ್ಮ ಮನೆಯೇ ಬೇರೆ. ಸ್ಥಳೀಯರು ಗೌರವಯುತವಾಗಿ ಬಿಜೆಪಿ ಸೇರಬೇಕು ಅಂತ ಬಯಸಿದ್ದರು. ಕಾರ್ಯಕರ್ತನಾಗಿ ಪಕ್ಷಕ್ಕೆ ಬಂದಿದ್ದೇನೆ. ಕಾರ್ಯಕರ್ತ ಎಂದೂ ಮಾಜಿ ಆಗಲ್ಲ ಎಂದು ಹೇಳಿದರು. ಸಂಯುಕ್ತ ವಿರುದ್ಧ ಕೆಲಸ ಮಾಡುತ್ತೀರಾ ಎಂದು ಕೇಳಿದಾಗು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ ಎಂದರು.

ವೀಣಾ ಕಾಶಪ್ಪನವರ್ ಮುನಿಸು?: ಬಾಗಲಕೋಟೆಯಲ್ಲಿ ಮೊನ್ನೆ ನಡೆದ ಸಭೆಯಲ್ಲಿ ವೀಣಾ ಅವರ ಪತಿ, ಶಾಸಕ ವಿಜಯಾನಂದ್ ಕಾಶಪ್ಪನವರ್ ಭಾಗಿಯಾಗಿ ಸಂಧಾನಕ್ಕೆ ಒಪ್ಪಿಕೊಂಡಿದ್ದರು. ಮುಂದಿನ ದಿನಗಳಲ್ಲಿ ವೀಣಾ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದರು. ಇದೀಗ ಕ್ಷೇತ್ರದ ಜನರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಸಂದೇಶ ಕಳುಹಿಸಿರುವ ವೀಣಾ ಕಾಶಪ್ಪನವರ್, ಪ್ರಚಾರದಲ್ಲಿ ಭಾಗಿಯಾಗಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನನ್ನ ಪತಿ ವಿಜಯಾನಂದ ಕಾಶಪ್ಪನವರ ಹಾಗೂ ಎಲ್ಲ ನಾಯಕರು ನಾನು ಸಂಯುಕ್ತಾ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸುತ್ತೇನೆ ಅನ್ನೋ ಹೇಳಿಕೆ ನೀಡಿದ್ದರು. ಆದರೆ ಇದು ಸತ್ಯಕ್ಕೆ ದೂರವಾದದ್ದು, ಸಚಿವ ಶಿವಾನಂದ್​ ಪಾಟೀಲ್ ಅವರು ನಮ್ಮ ಇಳಕಲ್ ನಿವಾಸಕ್ಕೆ ಭೇಟಿ ನೀಡಿದ್ದರು.ಭೇಟಿ ವೇಳೆ ಸಂಧಾನ ಸಭೆ ನಡೆದಿದೆ ಸಂಧಾನ ಆಗಿದೆ ಅಂತ ಹೇಳಿದ್ದರು. ಅದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ನನ್ನ ನಿಲುವು ಬದಲಾಗಿಲ್ಲ: ನಾನು ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿದ್ದೇನೆ. ಎಲ್ಲವೂ ಸತ್ಯಕ್ಕೆ ದೂರವಾದದ್ದು ಅಂತ ಹೇಳುತ್ತೇನೆ. ಇವತ್ತಿಗೂ ನನ್ನ ಸ್ವಾಭಿಮಾನದ ನಿಲುವು ಸ್ಪಷ್ಟವಾಗಿದೆ. ತಟಸ್ತಳಾಗಿ ಇರೋದು ಅಂತ ನನ್ನ ನಿಲುವು ಇತ್ತು ಇವತ್ತಿಗೂ ಕೂಡ ಅದೇ ನನ್ನ ನಿಲುವು ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನಾಳೆ ಬೆಂಬಲಿಗರ ಸಭೆ ಕರೆದಿದ್ದೇನೆ ಅಲ್ಲಿ ಅವರ ನಿಲುವುಗಳನ್ನು ಕೇಳುತ್ತೇನೆ. ಈಗಾಗಲೇ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಸಂಯುಕ್ತ ಪಾಟೀಲ್ ಹಾಗೂ ವೀಣಾ ಕಾಶಪ್ಪನವರ್ ಜೊತೆಗೆ ಪ್ರಚಾರಕ್ಕೆ ಬರ್ತಾರೆ ಅಂತ ಶಿವಾನಂದ್ ಪಾಟೀಲ್ ಹೇಳಿದ್ದು ಅದು ಸತ್ಯಕ್ಕೆ ದೂರವಾದದ್ದು. ಇನ್ನೂ ಕೂಡ ನನ್ನ ಅಸಮಾಧಾನ ಹಾಗೆ ಇದೆ ಎಂದಿದ್ದಾರೆ.

ಸ್ಪಷ್ಟವಾದ ನನ್ನ ಸ್ವಾಭಿಮಾನದ ನಿಲುವು ತಟಸ್ಥಳಾಗಿ ಉಳಿಯುವುದು ಅದು ಅಚಲವಾಗಿದೆ. ನನ್ನ ಮುಂದಿನ ನಿರ್ಧಾರ ತಿಳಿಸುವವರಿಗೆ ಈ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸುತ್ತೇನೆ. ಎಂದು ವಿಡಿಯೋ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT