ವಿ. ಸೋಮಣ್ಣ ಮತ್ತು ಎಸ್.ಪಿ ಮುದ್ದ ಹನುಮೇಗೌಡ
ವಿ. ಸೋಮಣ್ಣ ಮತ್ತು ಎಸ್.ಪಿ ಮುದ್ದ ಹನುಮೇಗೌಡ 
ರಾಜಕೀಯ

ತುಮಕೂರು ಲೋಕಸಭಾ ಕ್ಷೇತ್ರ: ಜಾತಿ ಜಗಳದಲ್ಲಿ ಸೋಮಣ್ಣ ಗೆಲುವು 'ಕನ್ನಡಿಯೊಳಗಿನ ಗಂಟು'!

Shilpa D

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೀರಶೈವ-ಲಿಂಗಾಯತ ಮುಖಂಡ ವಿ.ಸೋಮಣ್ಣ ಕಣಕ್ಕಿಳಿದಿದ್ದಾರೆ, ಇವರ ವಿರುದ್ಧ ಕಾಂಗ್ರೆಸ್ ನಿಂದ ಒಕ್ಕಲಿಗ ಹಾಗೂ ಅಹಿಂದ ನಾಯಕ ಎಸ್‌ಪಿ ಮುದ್ದಹನುಮೇಗೌಡ ಸ್ಪರ್ಧಿಸಿದ್ದಾರೆ.

ಅಹಿಂದ ಎಂಬುದು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಕನ್ನಡದ ಸಂಕ್ಷಿಪ್ತ ರೂಪವಾಗಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಿಂದ ಸೋತ ನಂತರ, ಸೋಮಣ್ಣ ಈಗ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮಾಡು ಇಲ್ಲವೇ ಮಡಿ ಎಂಬ ಹೋರಾಟದಲ್ಲಿದ್ದಾರೆ. ಸೋಮಣ್ಣ ವಿರುದ್ಧ ‘ಹೊರಗಿನವರ’ ಕತೆ ಕಟ್ಟಿದ್ದ ಮಾಧುಸ್ವಾಮಿಯವರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸ್ಥಾನದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಇದೀಗ ಮಾಧುಸ್ವಾಮಿ ನಿಷ್ಠಾವಂತರು ಸೇರಿದಂತೆ ಸ್ಥಳೀಯ ನಾಯಕರನ್ನು ಸೋಮಣ್ಣ ತಮ್ಮ ಪರ ಒಲಿಸಿಕೊಂಡಿದ್ದಾರೆ. ಕುಂಚಿಟಿಗ ಒಕ್ಕಲಿಗ ಸಮುದಾಯ ಸೇರಿದಂತೆ ಸುಮಾರು 250 ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯನ್ನೂ ಕೂಡ ಪಾಲಿಸುತ್ತಿದ್ದಾರೆ.

ಸೋಮಣ್ಣ ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ತಲುಪಿದ್ದರು ಮತ್ತು ಅವರಲ್ಲಿ ಕೆಲವರು ವಿಶೇಷವಾಗಿ ಕಾಡುಗೊಲ್ಲ ಸಮುದಾಯ ಪ್ರಾಬಲ್ಯವಿದೆ. ಲೋಕಸಭೆ ಚುನಾವಣೆ ಮುಗಿದ ಮೂರು ತಿಂಗಳೊಳಗೆ ಇದೇ ಸಮುದಾಯಕ್ಕೆ ಎಸ್‌ಟಿ ಟ್ಯಾಗ್‌ ನೀಡುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಭರವಸೆ ನೀಡಿದ್ದಾರೆ. ಬುಧವಾರ ಸೋಮಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಸೋಮಣ್ಣ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಭ್ಯರ್ಥಿಯಾಗಿರುವುದರಿಂದ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಕೂಡ ಆಗಮಿಸಿದ್ದರು. ಮುದ್ದಹನುಮೇಗೌಡರು ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದರು.

ಈ ಹೇಳಿಕೆಯಿಂದ ರೊಚ್ಚಿಗೆದ್ದ ಒಕ್ಕಲಿಗರ ಒಂದು ವರ್ಗ ಮುದ್ದ ಹನುಮೇಗೌಡರು ಗುರುವಾರ ಪತ್ರ ಸಲ್ಲಿಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿತ್ತು. ರ್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಿಕೇತರಾಜ್ ಮೌರ್ಯ ಮತ್ತು ಶಂಕರಾನಂದ ಅವರು ಸೋಮಣ್ಣ ಅದ್ದೂರಿಯಾಗಿ ಖರ್ಚು ಮಾಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ನಮ್ಮ ಐದು ಗ್ಯಾರಂಟಿಗಳು ಸೋಮಣ್ಣನವರ ಹಣಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ ಮುದ್ದಹನುಮೇಗೌಡ ಗೆಲ್ಲುತ್ತಾರೆ ಎಂದು ಶಂಕರಾನಂದ ವಿಶ್ವಾಸ ವ್ಯಕ್ತ ಪಡಿಸಿದರು.

ತುಮಕೂರಿನ ಲೋಕಸಭೆ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರು ಯಾವತ್ತೂ ಧ್ವನಿ ಎತ್ತಲಿಲ್ಲ ಮತ್ತು ಈಗ ಸ್ಪರ್ಧೆಗೆ ಮುಖವಿಲ್ಲದೇ ಸೋಮಣ್ಣ ಅವರನ್ನು ಕರೆತಂದಿದ್ದಾರೆ. ಹೊರಗಿನವರಾದ ಸೋಮಣ್ಣ ಅವರಿಗೆ ಲೋಕಸಭಾ ಸ್ಥಾನವನ್ನು ಬಿಟ್ಟುಕೊಡಲಿದ್ದೇವೆಯೇ? ಎಂದು ಪ್ರಶ್ನಿಸಿದ ಪರಮೇಶ್ವರ್ ಮಣ್ಣಿನ ಮಗ ಮುದ್ದಹನುಮೇಗೌಡರನ್ನು ಆಯ್ಕೆ ಮಾಡಿ ಕರೆ ನೀಡಿದರು.

ಮೈತ್ರಿಯಲ್ಲಿರುವುದರಿಂದ ಜೆಡಿಎಸ್ ಮತಗಳು ಸೋಮಣ್ಣ ಪರವಾಗಿ ಪರಿವರ್ತನೆಯಾಗುವುದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ದೇವೇಗೌಡರು ಬಸವರಾಜು ವಿರುದ್ಧ ಸೋತಿದ್ದರು. ಆಗ ದೇವೇಗೌಡರಿಗಾಗಿ ಸೀಟು ಬಿಟ್ಟುಕೊಡಬೇಕಿದ್ದ ಮುದ್ದಹನುಮೇಗೌಡರು, ಹಾಲಿ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿರುವ ಕೆ.ಎನ್.ರಾಜಣ್ಣ ಜತೆ ಸೇರಿ ದೇವೇಗೌಡರ ಸೋಲಿಸಲು ಕೆಲಸ ಮಾಡಿದ್ದರು ಎಂಬ ಆರೋಪಗಳಿವೆ. ಬಿಜೆಪಿ ಈಗ ಅದನ್ನೇ ಚುನಾವಣಾ ವಿಷಯವನ್ನಾಗಿ ಮಾಡುತ್ತಿದೆ. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಪ್ರಚಾರ ನಡೆಸಿದ್ದರು ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ.

ಮುದ್ದಹನುಮೇಗೌಡರನ್ನು ಮನಃಪೂರ್ವಕವಾಗಿ ಎಲ್ಲಾ ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆ. ಒಕ್ಕಲಿಗರು ದೇವೇಗೌಡರ ಮನೆತನದ ಮಾತಿಗೆ ಮಣಿಯುತ್ತಾರೋ ಅಥವಾ ಮುದ್ದನುಮೇಗೌಡರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಿದೆ. ರಾಜಣ್ಣ ಅವರು ಉಸ್ತುವಾರಿಯಾಗಿರುವ ಹಾಸನದಲ್ಲಿ ಲೋಕಸಭೆ ಚುನಾವಣೆಗೆ ಬ್ಯುಸಿಯಾಗಿರುವ ಕಾರಣ ಮುದ್ದಹನುಮೇಗೌಡರು ಸೋಲುತ್ತಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.

2014 ರಿಂದ 2019 ರ ವರೆಗೆ ಸಂಸದರಾಗಿದ್ದ ಮುದ್ದಹನುಮೇಗೌಡ ಅವರು, “ನಾನು ಲೋಕಸಭೆಯಲ್ಲಿ ಕೊಬ್ಬರಿ ಬೆಲೆ ಕುಸಿತದ ವಿಷಯವನ್ನು ಪ್ರಸ್ತಾಪಿಸಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಜೊತೆಗೆ ಹಿಂದಿನ ಎಚ್‌ಎಂಟಿ ವಾಚ್ ಕಾರ್ಖಾನೆಯ ಭೂಮಿಯನ್ನು ದೋಚುವವರಿಂದ ರಕ್ಷಿಸಿದ್ದೇನೆ. ಇಸ್ರೋ ಶೀಘ್ರದಲ್ಲೇ ಅದರ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದಿದ್ದಾರೆ.

2019ರಲ್ಲಿ ಹಾಸನದಿಂದ ಹೇಮಾವತಿ ನದಿ ನೀರು ಬಿಡುವುದನ್ನು ತಪ್ಪಿಸುವ ಮೂಲಕ ದೇವೇಗೌಡರು ತುಮಕೂರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಳೆದ ಚುನಾವಣೆಯಲ್ಲಿ ಬಿಜೆಪಿ ಪ್ರಸ್ತಾಪಿಸಿತ್ತು. ಈ ಬಾರಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎಕ್ಸ್‌ಪ್ರೆಸ್ ಕಾಲುವೆ ಅನುಷ್ಠಾನಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.

SCROLL FOR NEXT