ಸಾಂದರ್ಭಿಕ ಚಿತ್ರ 
ರಾಜಕೀಯ

ಡಿಕೆಶಿ- ದೇವೇಗೌಡ ಕುಟುಂಬಗಳ 'ಟೈಟಾನಿಕ್' ಘರ್ಷಣೆ: ಹೈವೋಲ್ಟೇಜ್ ಕಣವಾದ ಬೆಂಗಳೂರು ಗ್ರಾಮಾಂತರ; ಮೈತ್ರಿ ಅಭ್ಯರ್ಥಿಗೆ 'ಕ್ಲೀನ್ ಇಮೇಜ್' ವರದಾನ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕುಟುಂಬಗಳ ನಡುವೆ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕುಟುಂಬಗಳ ನಡುವೆ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ.

ಉಪಮುಖ್ಯಮಂತ್ರಿ ಶಿವಕುಮಾರ್‌ ಅವರ ಸಹೋದರ ಸುರೇಶ್‌ ಅವರು ಜೆಡಿಎಸ್‌ ವರಿಷ್ಠ ದೇವೇಗೌಡರ ಅಳಿಯ ಹಾಗೂ ಬಿಜೆಪಿ ಟಿಕೆಟ್‌ ನಿಂದ ಕಣಕ್ಕಿಳಿದಿರುವ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧಿಸಿದ್ದಾರೆ. 2019 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಸ್ಥಾನವನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಶಿವಕುಮಾರ್ ತಮ್ಮ ತವರು ನೆಲದ ಮೇಲೆ ಹಿಡಿತವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಓಲೈಸಲು ಎರಡೂ ಪಕ್ಷದವರೂ ಪ್ರಯತ್ನಿಸುತ್ತಿದ್ದಾರೆ. ಮೋದಿ ಅಲೆ ಮತ್ತು ಡಾ ಮಂಜುನಾಥ್ ಅವರ ಕ್ಲೀನ್ ಇಮೇಜ್ ಮೇಲೆ ಬಿಜೆಪಿ ಅವಲಂಬಿತವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೇಲೆ ಭರವಸೆ ಇರಿಸಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ನಗರ ಮತ್ತು ಗ್ರಾಮೀಣ ಮತದಾರರ ಮಿಶ್ರಣವಾಗಿದೆ, ಒಟ್ಟು 27.53 ಲಕ್ಷ, ಬೆಂಗಳೂರು ಉತ್ತರದ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಮತದಾರರುವ ಕ್ಷೇತ್ರವಾಗಿದೆ. 2009 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಯಾದ ನಂತರ ಮೊದಲ ಚುನಾವಣೆಯಲ್ಲಿ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ 1.4 ಲಕ್ಷ ಮತಗಳ ಮುನ್ನಡೆಯೊಂದಿಗೆ ಗೆದ್ದಿದ್ದರು.

ಕುಮಾರಸ್ವಾಮಿ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲುವು ಸಾಧಿಸಿದರು. ಬಿಜೆಪಿಯು ಬೆಂಗಳೂರು ದಕ್ಷಿಣ, ಉತ್ತರ ಮತ್ತು ಸೆಂಟ್ರಲ್ ನಲ್ಲಿ ಎಲ್ಲಾ ಮೂರು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಿದೆ, ಆದರೆ 2008 ರ ನಂತರ ಬಿಜೆಪಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆದ್ದಿಲ್ಲ. ಆದಾಗ್ಯೂ, ಬಿಜೆಪಿ ಅಭ್ಯರ್ಥಿಗಳು ಯಾವಾಗಲೂ ಉತ್ತಮ ಸಂಖ್ಯೆಯ ಮತಗಳನ್ನು ಗಳಿಸಿದ್ದಾರೆ. 2019 ರಲ್ಲಿ ಬಿಜೆಪಿಯ ಮಾಜಿ ಎಂಎಲ್ಸಿ ಅಶ್ವತ್ಥನಾರಾಯಣ ಗೌಡ 6.7 ಲಕ್ಷ ಮತಗಳನ್ನು ಪಡೆದರೆ, ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುರೇಶ್ 8.7 ಲಕ್ಷ ಮತಗಳನ್ನು ಗಳಿಸಿದರು.

ಈಗ ಜೆಡಿಎಸ್ ಮೈತ್ರಿಯೊಂದಿಗೆ ಬಿಜೆಪಿ ಇಲ್ಲಿ ಕಾಲಿಡಲು ಪ್ರಯತ್ನಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರು ಗ್ರಾಮಾಂತರದಿಂದ ರಾಜ್ಯದಲ್ಲಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದರು ಮತ್ತು ಅನ್ಯಾಯದ ಆರೋಪದ ಮೇಲೆ ದಕ್ಷಿಣ ಭಾರತಕ್ಕೆ "ಪ್ರತ್ಯೇಕ ರಾಜ್ಯದ ಬೇಡಿಕೆ" ಸಂಬಂಧ ಡಿ.ಕೆ ಸುರೇಶ್ ನೀಡಿದ್ದ ಹೇಳಿಕೆವಿರುದ್ಧ ವಾಗ್ದಾಳಿ ನಡೆಸಿದ್ದರು.

ಡಾ ಮಂಜುನಾಥ್ ಅವರು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಿರ್ದೇಶಕರಾಗಿದ್ದರು. ಕಾಂಗ್ರೆಸ್ ಅವರನ್ನು "ವೈಟ್ ಕಾಲರ್ ಅಭ್ಯರ್ಥಿ" ಎಂದು ಬಣ್ಣಿಸುತ್ತದೆ ಆದರೆ ಸುರೇಶ್ ಅವರನ್ನು ತಳಮಟ್ಟದ ನಾಯಕ ಎಂದು ಬಿಂಬಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT