ತೇಜಸ್ವಿ ಸೂರ್ಯ ಮತ್ತು ಸೌಮ್ಯಾ ರೆಡ್ಡಿ:  
ರಾಜಕೀಯ

ತೇಜಸ್ವಿ ಸೂರ್ಯ vs ಸೌಮ್ಯಾ ರೆಡ್ಡಿ: ಬೆಂಗಳೂರು ದಕ್ಷಿಣ ಕ್ಷೇತ್ರ ಯಾರ ಪಾಲಿಗೆ?

ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಪ್ರತಿಷ್ಠಿತ ಕ್ಷೇತ್ರ ಎಂದೇ ಕರೆಯಲಾಗುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಕಣಕ್ಕಿಳಿದಿದ್ದಾರೆ.

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಪ್ರತಿಷ್ಠಿತ ಕ್ಷೇತ್ರ ಎಂದೇ ಕರೆಯಲಾಗುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಕಣಕ್ಕಿಳಿದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು 1991ರಿಂದ ಸತತ ಎಂಟು ಗೆಲುವುಗಳೊಂದಿಗೆ ಬಿಜೆಪಿ ಭದ್ರಕೋಟೆಯಾಗಿದ್ದು, 1989ರಲ್ಲಿ ಮಾಜಿ ಸಿಎಂ ಆರ್ ಗುಂಡೂರಾವ್ ವಿಜಯಶಾಲಿಯಾದಾಗ ಇಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಚುನಾವಣೆಯಲ್ಲಿ ಗೆದ್ದಿತ್ತು.ಆ ಬಳಿಕ ಇಲ್ಲಿಯವರೆಗೂ ಇಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ.

ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ದಿಗ್ವಜಯವನ್ನೇ ಸಾಧಿಸುತ್ತಾ ಬಂದಿದ್ದು, ಈ ಬಾರಿಯೂ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರು ದಕ್ಷಿಣದಿಂದ ಹಾಲಿ ಸಂಸದರಾದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಚುನಾವಣಾ ತಯಾರಿಯೂ ಜೋರಾಗಿಯೇ ನಡೆಯುತ್ತಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸ್ಟಾರ್ಟಪ್ ಹಬ್ ಕೋರಮಂಗಲ ಮತ್ತು ಐಟಿ ಹಬ್ ಬೊಮ್ಮನಹಳ್ಳಿ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ. ಈ ಪೈಕಿ ಬಸವನಗುಡಿ, ಜಯನಗರ, ಬೊಮ್ಮನಹಳ್ಳಿ, ಪದ್ಮನಾಭನಗರ ಮತ್ತು ಚಿಕ್ಕಪೇಟೆಯಲ್ಲಿ ಬಿಜೆಪಿ ಶಾಸಕರಿದ್ದರೆ, ವಿಜಯನಗರ, ಗೋವಿಂದರಾಜನಗರ ಮತ್ತು ಬಿಟಿಎಂ ಲೇಔಟ್‌ನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಸೌಮ್ಯ ಅವರ ತಂದೆ ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್ ಪ್ರತಿನಿಧಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ರವಿ ಸುಬ್ರಹ್ಮಣ್ಯ ಬಸವನಗುಡಿ ಶಾಸಕರಾಗಿರುವುದು ವಿಶೇಷ.

ಪ್ರಬಲ ಮತ್ತು ಪ್ರಭಾವಿ ರಾಜಕಾರಣಿಯಾಗಿರುವ ರಾಮಲಿಂಗಾ ರೆಡ್ಡಿ ಅವರು, ಜಯನಗರ ಮತ್ತು ಬಿಟಿಎಂ ಲೇಔಟ್ ಮತ್ತು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಬಲವಾದ ಹಿಡಿತವನ್ನು ಹೊಂದಿದ್ದು, ಮಗಳ ಗೆಲುವನ್ನು ಖಚಿತಪಡಿಸಿಕೊಳ್ಳುವುದು ರಾಮಲಿಂಗಾ ರೆಡ್ಡಿಯವರಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಬಿಟಿಎಂ ಲೇಔಟ್, ವಿಜಯನಗರ ಮತ್ತು ಗೋವಿಂದರಾಜನಗರದಿಂದ ಸೌಮ್ಯಾ ಗರಿಷ್ಠ ಬೆಂಬಲ ಪಡೆಯುವ ನಿರೀಕ್ಷೆಗಳಿದ್ದು, ಬಸವನಗುಡಿ, ಬೊಮ್ಮನಹಳ್ಳಿ, ಪದ್ಮನಾಭನಗರ ಮತ್ತು ಜಯನಗರದಲ್ಲಿ ತೇಜಸ್ವಿ ಸೂರ್ಯ ಅವರು ಬೆಂಬಲ ಪಡೆಯಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಪ್ರಬಲ ಬೆಂಬಲಿಗರಿದ್ದು, ಜೆಡಿಎಸ್ ಅಸ್ತಿತ್ವ ಹೊಂದಿಲ್ಲ.

ಸೌಮ್ಯಾ ರೆಡ್ಡಿ (41) ಹಾಗೂ ತೇಜಸ್ವಿ ಸೂರ್ಯ (33) ಇಬ್ಬರೂ ಯುವ ಅಭ್ಯರ್ಥಿಗಳಾಗಿದ್ದಾರೆ. ಇಬ್ಬರೂ ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸೌಮ್ಯಾ ರೆಡ್ಡಿಯವರಪು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ತೇಜಸ್ವಿ ಸೂರ್ಯ ಕಾನೂನಿನಲ್ಲಿ ಪದವಿ ಪಡೆದಿದ್ದರೆ, ಸೌಮ್ಯಾ ಪರಿಸರ ತಂತ್ರಜ್ಞಾನದಲ್ಲಿ ಎಂಎಸ್ ಮಾಡಿದ್ದಾರೆ.

ಬೆಂಗಳೂರಿನ ಭಾಗವಾಗಿರುವ ಕ್ಷೇತ್ರವು ಪರಿಶಿಷ್ಟ ಜಾತಿ, ಒಕ್ಕಲಿಗರು, ಬ್ರಾಹ್ಮಣರು, ಮುಸ್ಲಿಮರು ಮತ್ತು ಇತರ ಸಮುದಾಯಗಳ ಮತದಾರರನ್ನು ಹೊಂದಿದೆ. ಬ್ರಾಹ್ಮಣರಾದ ತೇಜಸ್ವಿ ಮತ್ತು ಸೌಮ್ಯಾ, ರೆಡ್ಡಿ (ಒಬಿಸಿ) ತಮ್ಮ ತಮ್ಮ ಸಮುದಾಯಗಳ ಬೆಂಬಲದ ಮೇಲೆ ಭರವಸೆ ಹೊಂದಿದ್ದಾರೆ.

ಕ್ಷೇತ್ರದಲ್ಲಿ 1951 ರಿಂದ ಒಟ್ಟು 13 ಚುನಾವಣೆಗಳು ನಡೆದಿವೆ. ಈ ಪೈಕಿ ಬಿಜೆಪಿ ಏಳು, ಜನತಾ ಪಕ್ಷ ಮೂರು ಮತ್ತು ಕಾಂಗ್ರೆಸ್ ಎರಡು ಬಾರಿ ಗೆಲುವು ಸಾಧಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹಲವಾರು ತಂತ್ರಗಳನ್ನು ರೂಪಿಸಿತ್ತು. ಆದರೆ, ಅದಾವುದೂ ಕೆಲಸ ಮಾಡಿರಲಿಲ್ಲ.

2019 ರಲ್ಲಿ ಹಿರಿಯ ನಾಯಕ ಬಿಕೆ ಹರಿಪ್ರಸಾದ್, 2009 ರಲ್ಲಿ ಹಿರಿಯ ನಾಯಕ ಕೃಷ್ಣ ಬೈರೇಗೌಡ ಮತ್ತು 2014 ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ರಾಜಕಾರಣಿಯಲ್ಲದ ನಂದನ್ ನಿಲೇಕಣಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ, ಅವರೆಲ್ಲರಿಗೂ ಬಿಜೆಪಿ ಮಣಿಸಲು ಸಾಧ್ಯವಾಗಲಿಲ್ಲ. ಆದರೆ, ಅನುಭವಿ ನಾಯಕ ರಾಮಲಿಂಗಾರೆಡ್ಡಿ ಪರಭಾವದಿಂದ ಈ ಬಾರಿಯ ಫಲಿತಾಂಶ ವಿಭಿನ್ನವಾಗಿ ಬರಬಹುದು ಎಂಬುದು ಕಾಂಗ್ರೆಸ್ ನಿರೀಕ್ಷೆಯಾಗಿದೆ. ಸೊಮ್ಯಾ ರೆಡ್ಡಿ ಕೂಡ 2019ರ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಸೋಲು ಕಂಡಿದ್ದರು. ಹೀಗಾಗಿ ಈ ಬಾರಿ ಈ ಕ್ಷೇತ್ರದ ಫಲಿತಾಂಶದ ಮೇಲೆ ಕಾಂಗ್ರೆಸ್ ನಿರೀಕ್ಷೆಗಳು ಹೆಚ್ಚಾಗಿದೆ.

ಪ್ರಮುಖ ಅಭ್ಯರ್ಥಿಗಳೇ ಕಣಕ್ಕಿಳಿದರು0 ಪ್ರತೀ ಬಾರಿ ಈ ಕ್ಷೇತ್ರದಲ್ಲಿ ಮತದಾನದ ಶೇಕಡವಾರು ಮಾತ್ರ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಕಂಡು ಬರುತ್ತದೆ. 2019 ರಲ್ಲಿ ಶೇ.53.47%, 2014 ರಲ್ಲಿ ಶೇ.55.75, 2009 ರಲ್ಲಿ ಶೇ.44.7, 2004 ರಲ್ಲಿ ಶೇ.49.4 ಮತದಾನವಾಗಿದೆ ಕ್ಷೇತ್ರದಲ್ಲಿ 23,17,472 ಮತದಾರರಿದ್ದಾರೆ. ಈ ಪೈಕಿ 11.95 ಲಕ್ಷ ಪುರುಷರು, 11.21 ಲಕ್ಷ ಮಹಿಳೆಯರು ಮತ್ತು 399 ಇತರರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT