ಸಚಿವ ಶರಣಬಸಪ್ಪ ದರ್ಶನಾಪುರ  
ರಾಜಕೀಯ

ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ 'ಆ ಕುರ್ಚಿ'ಯನ್ನು ಬಿಡಬೇಕಾಗುತ್ತದೆ: ಸಚಿವ ಶರಣಬಸಪ್ಪ ದರ್ಶನಾಪುರ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೇ ಹೋದರೆ ಆ ಕುರ್ಚಿಯನ್ನು ಅಲ್ಲಿಗೇ ಬಿಡಬೇಕಾಗುತ್ತದೆ. ನಾವೇ ಲೀಡ್ ಕೊಡದಿದ್ರೆ ಮುಖ ತೋರಿಸುವುದು ಹೇಗೆ ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.

ಯಾದಗಿರಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೇ ಹೋದರೆ ಆ ಕುರ್ಚಿಯನ್ನು ಅಲ್ಲಿಗೇ ಬಿಡಬೇಕಾಗುತ್ತದೆ. ನಾವೇ ಲೀಡ್ ಕೊಡದಿದ್ರೆ ಮುಖ ತೋರಿಸುವುದು ಹೇಗೆ ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 20 ಸಾವಿರ ಲೀಡ್ ಆಗಿತ್ತು. ನಿಜ ಹೇಳಬೇಕೆಂದರೆ ನನಗೆ ಮಂತ್ರಿ ಹುದ್ದೆಯನ್ನೇ ಕೊಡಬಾರದಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಿಗದಿದ್ದರೆ ಜನತೆ ಮುಂದೆ ತಪ್ಪು ಸಂದೇಶ ಹೋಗುತ್ತದೆ. ನಿಮ್ಮ ವಿಧಾನಸಭೆ ಚುನಾವಣೆಯನ್ನು ಶ್ರಮ ಹಾಕಿ ಗೆಲ್ಲುತ್ತೀರಿ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲೀಡ್ ತಂದುಕೊಡುವುದಿಲ್ಲ ಎಂಬ ಭಾವನೆ ನಾಯಕರುಗಳಿಗೆ ಬರುತ್ತದೆ ಎಂದರು.

ಅವರನ್ನು ಗೆಲ್ಲಿಸಿ ನನ್ನ ಕೈ ಬಲಪಡಿಸಿ: ಈ ಬಾರಿ ಲೀಡ್ ಕೊಡದಿದ್ರೆ ಬಹಳ ಸಂಕಷ್ಟ ಆಗಲಿದೆ. ಅದಕ್ಕಾಗಿ ರಾಜಾ ವೇಣುಗೋಪಾಲ ನಾಯಕ, ಜಿ ಕುಮಾರ ನಾಯಕರನ್ನು ಗೆಲ್ಲಿಸಬೇಕು. ಅವರನ್ನು ಗೆಲ್ಲಿಸಿ ನನ್ನ ಕೈ ಬಲಪಡಿಸಿ ಎಂದು ಬೆಂಬಲಿಗರಲ್ಲಿ, ಕಾರ್ಯಕರ್ತರಲ್ಲಿ ಹಾಗೂ ಕ್ಷೇತ್ರದ ಮತದಾರರಲ್ಲಿ ಸಚಿವ ದರ್ಶನಾಪುರ ಮನವಿ ಮಾಡಿಕೊಂಡರು.

ಇತ್ತೀಚೆಗೆ ಮೈಸೂರಿನ ವರುಣಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಈಗ ಲೋಕಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಿ. ನಾನು ಇರಬೇಕಾ, ಬೇಡವಾ ಎಂದು ಕೇಳಿದ್ದು ಸುದ್ದಿಯಾಗಿತ್ತು.

ಅದಕ್ಕೂ ಕೆಲವು ದಿನಗಳ ಮೊದಲು, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿದ್ದು ಸುದ್ದಿಯಾಗಿತ್ತು.

ಈಗ ಸಚಿವ ದರ್ಶನಾಪುರ ಕೂಡ ಅದೇ ಧಾಟಿಯಲ್ಲಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಮುಖ ಬದಲಾವಣೆಯಾಗಲಿದೆ, ಸಚಿವ ಸಂಪುಟಕ್ಕೆ ಸರ್ಜರಿಯಾಗಲಿದೆ ಎಂಬ ವದಂತಿಗಳಿಗೆ ನಾಯಕರುಗಳ ಇಂತಹ ಮಾತುಗಳು ಪುಷ್ಠಿ ನೀಡುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT