ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ 
ರಾಜಕೀಯ

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ 220ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ

Sumana Upadhyaya

ಬೆಂಗಳೂರು: 2024ರ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಪರ ಅಥವಾ ವಿರುದ್ಧದ ಚುನಾವಮೆ ಎಂದು ಬಣ್ಣಿಸಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, "ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ದೇಶದಲ್ಲಿ ಒಟ್ಟಾರೆಯಾಗಿ 220 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ" ಎಂದು ಹೇಳಿದ್ದಾರೆ.

ಮತದಾರರು ಯಾರಿಗಾದರೂ ಎರಡಕ್ಕಿಂತ ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ ಎಂದ ರೇವಂತ್ ರೆಡ್ಡಿ, ಈ ದೇಶದ ಜನರು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರಿಗೆ ಎರಡು ಬಾರಿ ಅವಕಾಶಗಳನ್ನು ನೀಡಿದರು, ಅದೇ ರೀತಿ ಪ್ರಧಾನಿ ಮೋದಿ ಕೂಡ ಎರಡು ಬಾರಿ ಪಡೆದಿದ್ದಾರೆ, ಮೂರನೇ ಬಾರಿ ಅವರು ಪ್ರಧಾನಿಯಾಗುವುದಿಲ್ಲ ಎಂದರು.

ಬಿಜೆಪಿ ಸರ್ಕಾರವು ದಕ್ಷಿಣ ಭಾರತದ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಟೀಕಿಸಿದ ರೇವಂತ್ ರೆಡ್ಡಿ, ಗುಜರಾತ್ ರಾಜ್ಯದಲ್ಲಿ ಅತ್ಯುತ್ತಮ ಹೂಡಿಕೆಗಳನ್ನು ಮಾಡಲಾಗುತ್ತದೆ. ಇತರ ರಾಜ್ಯಗಳು ತಿಂದು ಹೋದ ಮೇಲೆ ಉಳಿದ ಎಂಜಲಿನಂತೆ ಉಳಿದಿದ್ದನ್ನು ಪಡೆಯಬೇಕಾದ ದುಸ್ಥಿತಿ. ದಕ್ಷಿಣದ ರಾಜ್ಯಗಳಲ್ಲಿ ಕಂಪೆನಿಗಳು ನೇರವಾಗಿ ಹೂಡಿಕೆ ಮಾಡಿದಾಗ ಕಂಪನಿಗಳಿಗೆ ಪ್ರಧಾನಿ ಕಚೇರಿಯಿಂದ ಕರೆಗಳು ಹೋಗುತ್ತವೆ. ಒತ್ತಾಯಪೂರ್ವಕವಾಗಿ ಗುಜರಾತ್ ನಲ್ಲಿ ಹೂಡಿಕೆ ಮಾಡುವಂತೆ ಹೇಳಲಾಗುತ್ತದೆ ಮತ್ತು ಮನವರಿಕೆ ಮಾಡಲಾಗುತ್ತದೆ ಎಂದರು.

"ಜನರ ಹೊಟ್ಟೆ ತುಂಬಿದಾಗ, ದೇವಸ್ಥಾನ, ದೇವರು-ದಿಂಡಿರು, ಪೂಜೆ ಎಂದು ಹೋಗುತ್ತಾರೆ. ಮತ್ತು ಇತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಜನರು ಹಸಿದಿರುವಾಗ, ಅವರು ಆಹಾರ, ಉದ್ಯೋಗ ಮತ್ತು ಬದುಕುಳಿಯುವಿಕೆಯ ಬಗ್ಗೆ ಮಾತನಾಡುತ್ತಾರೆ. ಪ್ರಪಂಚದಾದ್ಯಂತ ಇದು ಟ್ರೆಂಡ್ ಆಗಿದೆ ಎಂದು ರೇವಂತ್ ರೆಡ್ಡಿ ಹೇಳಿದರು.

ನೇರ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರ್‌ಎಸ್‌ಎಸ್‌ ಸೂತ್ರವೇ ನೇರ ಚುನಾವಣೆ. ಅವರು ಅದನ್ನು ಶೇಕಡಾ 20 ರಷ್ಟು ಅಲ್ಪಸಂಖ್ಯಾತ ಸಮುದಾಯವಾಗಿ ಮತ್ತು ಶೇಕಡಾ 80 ರಷ್ಟು ಬಹುಸಂಖ್ಯಾತ ಸಮುದಾಯವಾಗಿ ಪರಿವರ್ತಿಸಲು ಬಯಸುತ್ತಾರೆ, ಅಲ್ಪಸಂಖ್ಯಾತರ ವಿರುದ್ಧ ಕೆಲಸ ಮಾಡುತ್ತಾರೆ ಮತ್ತು ಬಹುಸಂಖ್ಯಾತ ಗುಂಪಿನಿಂದ ಬೆಂಬಲವನ್ನು ಪಡೆಯುತ್ತಾರೆ. ಅವರು ಉತ್ತರ ವಿರುದ್ಧ ದಕ್ಷಿಣ ಮತ್ತು ಆರ್ಯನ್ ವಿರುದ್ಧ ದ್ರಾವಿಡ ಆಟವಾಡುತ್ತಾರೆ ಎಂದರು.

ಕಾಂಗ್ರೆಸ್ ಯಾವಾಗಲೂ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಂಡಿದೆ. ದಕ್ಷಿಣ ಮತ್ತು ಉತ್ತರಕ್ಕೆ ಸಮಾನವಾದ ಅಭಿವೃದ್ಧಿಗೆ ಸೂತ್ರವನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದರು. ಕಾಂಗ್ರೆಸ್‌ನಲ್ಲಿ ಇದೊಂದು ಅಲಿಖಿತ ಸಂಹಿತೆ. ಪ್ರಧಾನಿ ಉತ್ತರದವರಾಗಿದ್ದರೆ, ದಕ್ಷಿಣದವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಅನೇಕ ಪ್ರಮುಖ ಖಾತೆಗಳನ್ನು ನೀಡಲಾಯಿತು. ಆದರೆ ಬಿಜೆಪಿ ಸರ್ಕಾರದಲ್ಲಿ ಹಾಗಲ್ಲ, ಬಿಜೆಪಿಯವರು ದಕ್ಷಿಣದ ನಾಯಕರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲಿಲ್ಲ, ಅವರು ವೆಂಕಯ್ಯನಾಯ್ಡು ಮತ್ತು ಸದಾನಂದಗೌಡರಂತಹ ಮಂತ್ರಿಗಳನ್ನು ಸಹ ಹೊರಹಾಕಿದರು. ಬಿಜೆಪಿ ದಕ್ಷಿಣ ಭಾರತವನ್ನು ಅಸಡ್ಡೆ ಮಾಡುತ್ತಿದೆ ಎಂದರು.

ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ 55 ಲಕ್ಷ ಕೋಟಿ ರೂಪಾಯಿಗಳಿದ್ದ ಸಾಲದ ಅಂಶವು 10 ವರ್ಷಗಳಲ್ಲಿ 113 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಈಗ 168 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹಿಂದಿನ ಆಡಳಿತಗಳು ರಾಷ್ಟ್ರಕ್ಕೆ ಸಂಪತ್ತನ್ನು ಸೃಷ್ಟಿಸಿದರೆ, ಮೋದಿ ಆಡಳಿತವು ಅಂತಹ ಸಂಪತ್ತನ್ನು ಖಾಸಗೀಕರಣಗೊಳಿಸಿದೆ. ಈ ಪ್ರಧಾನಿ ನಿರ್ಮಿಸಿದ ಏಕೈಕ ಸ್ಮರಣೀಯ ಸ್ಮಾರಕವೆಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಎಂದು ರೆಡ್ಡಿ ಟೀಕಿಸಿದರು.

"ಬಿಜೆಪಿ ಮತ್ತು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ನಡುವಿನ ಜುಗಲ್ಬಂದಿ" ಬಗ್ಗೆ ಕೂಡ ಮಾತನಾಡಿದ ರೇವಂತ್ ರೆಡ್ಡಿ, ಇದು ಎರಡೂ ಪಕ್ಷಗಳಿಗೆ ಪರಸ್ಪರ ಪ್ರಯೋಜನಕಾರಿಯಾಗಿದೆ ಮತ್ತು ಅವರು ಹೇಗೆ ಕಾರ್ಯತಂತ್ರವಾಗಿ ಇತರರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ವಿವರಿಸಿದರು.

SCROLL FOR NEXT