ತುಮಕೂರು ಮಾಜಿ ಸಂಸದ ಮುದ್ದಹನುಮೇಗೌಡ
ತುಮಕೂರು ಮಾಜಿ ಸಂಸದ ಮುದ್ದಹನುಮೇಗೌಡ online desk
ರಾಜಕೀಯ

ತುಮಕೂರು ಮಾಜಿ ಸಂಸದ ಮುದ್ದಹನುಮೇಗೌಡ ಮರಳಿ ಕಾಂಗ್ರೆಸ್ ಗೆ

Srinivas Rao BV

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿಯಿಂದ ಮರಳಿ ಕಾಂಗ್ರೆಸ್ ಗೆ ಫೆ.22 ರಂದು ಸೇರ್ಪಡೆಯಾದರು. ಲೋಕಸಭಾ ಚುನಾವಣೆ (Lok sabha elections-2024) ಗೂ ಮುನ್ನ ಮುದ್ದಹನುಮೇಗೌಡ ಪಕ್ಷಾಂತರ ಮಾಡಿದ್ದಾರೆ.

2022 ರಲ್ಲಿ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವ ಜಿ ಪರಮೇಶ್ವರ್, ಸಚಿವ ಕೆಎನ್ ರಾಜಣ್ಣ ಸಮ್ಮುಖದಲ್ಲಿ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ನನ್ನ ತಪ್ಪನ್ನು ಅರ್ಥ ಮಾಡಿಕೊಂಡು ನನಗೆ ರಾಜಕೀಯ ಅಸ್ತಿತ್ವ ನೀಡಿದ ಪಕ್ಷಕ್ಕೆ ಮರಳಿ ಸೇರ್ಪಡೆಯಾಗುತ್ತಿದ್ದೇನೆ
ಮಾಜಿ ಸಂಸದ ಮುದ್ದಹನುಮೇಗೌಡ

ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮುದ್ದಹನುಮೇಗೌಡ, ಪಕ್ಷಾಂತರ ಎಂಬುದು ಇಂದು ರಾಜಕೀಯ ಪಕ್ಷಗಳು ಹಾಗೂ ಜನತೆ ನಡುವೆ ಒಪ್ಪಿತವಾದಂತಹ ಪ್ರವೃತ್ತಿಯಾಗಿದ್ದರೂ ಚುನಾವಣೆ ಎದುರಿಸುವುದಕ್ಕೆ ಮಾತ್ರವೇ ಬಿಜೆಪಿಗೆ ಪಕ್ಷಾಂತರಗೊಂಡಿದ್ದು ತಮಗೆ ನೋವುಂಟಾಗಿತ್ತು. ಇದರಿಂದ ತಮ್ಮ ಅನುಯಾಯಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ನಾಯಕರಿಗೆ ನೋವುಂಟಾಗಿತ್ತು ಎಂದು ಹೇಳಿದ್ದಾರೆ.

SCROLL FOR NEXT