ಡಾ.ಸಿ ಎನ್ ಮಂಜುನಾಥ್ 
ರಾಜಕೀಯ

ಪ್ರಜ್ವಲ್ ರೇವಣ್ಣ ಸೋಲಿನ ಭೀತಿ: ಹಾಸನ ಜೆಡಿಎಸ್ ಲೋಕಸಭಾ ಅಭ್ಯರ್ಥಿಯಾಗಿ ಡಾ. ಸಿ.ಎನ್.ಮಂಜುನಾಥ್ ಸ್ಪರ್ಧೆ? 

ಎರಡು ದಶಕಗಳಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಿ.ಎನ್.ಮಂಜುನಾಥ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು: ಎರಡು ದಶಕಗಳಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಿ.ಎನ್.ಮಂಜುನಾಥ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಡಾ ಚೋಳೇನಹಳ್ಳಿ ನಂಜಪ್ಪ ಮಂಜುನಾಥ್ (66) ಅವರು ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನವರಿ 31ಕ್ಕೆ ಅವರ ಅಧಿಕಾರವಧಿ ಅಂತ್ಯವಾಗಲಿದೆ. ಮಂಜುನಾಥ್ ಅವರ ನಿರ್ದೇಶಕ ಸ್ಥಾನದ ಅವಧಿಯನ್ನು  ಹಿಂದಿನ ಬಿಜೆಪಿ ಸರ್ಕಾರ 1 ವರ್ಷಗಳ ಕಾಲ ಮುಂದುವರಿಸಿತ್ತು.  ಮತ್ತೆ ಅವರನ್ನು ಮುಂದಿನ 6 ತಿಂಗಳುಗಳ ಕಾಲ ಸೇವಾವಧಿಯನ್ನು ಕಾಂಗ್ರೆಸ್ ಸರ್ಕಾರ  ವಿಸ್ತರಿಸಿತ್ತು.

ಶಸ್ತ್ರಚಿಕಿತ್ಸಾ ವಿಧಾನ, ಬಲೂನ್ ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಯಲ್ಲಿ ಅವರ ಸೇವೆಗಾಗಿ ವೈದ್ಯಕೀಯ ವಲಯದಲ್ಲಿ ಅವರಿಗೆ ಅಪಾರ ಗೌರವವಿದೆ. ತಮ್ಮ ಗಣನೀಯ ಸೇವೆಗಾಗಿ 2007 ರಲ್ಲಿ ಪದ್ಮಶ್ರೀ ಪಡೆದರು. ರಾಜಕೀಯವಾಗಿ ಹೇಳುವುದಾದರೆ, ಅವರು ಶ್ರವಣಬೆಳಗೊಳ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹೋದರ. ಮಂಜುನಾಥ್ ಅವರ ಪತ್ನಿ ಅನಸೂಯಾ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಹಿರಿಯ ಪುತ್ರಿ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈ ಬಾರಿ ಗೆಲುವು ಕಷ್ಟವಾಗಬಹುದು ಎಂದು ಮೂಲಗಳು ತಿಳಿಸಿವೆಯಾದ್ದರಿಂದ ಮಂಜುನಾಥ್ ಅವರ ಹೆಸರು ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರ ಕುಟುಂಬದಿಂಗ ಈಗಾಗಲೇ ಇಬ್ಬರು ಶಾಸಕ, ಒಬ್ಬ ಎಂಎಲ್‌ಸಿ ಮತ್ತು ಒಬ್ಬ ಲೋಕಸಭಾ ಸದಸ್ಯರನ್ನು ಹೊಂದಿದ್ದು, ಭವಾನಿ ಜಿಪಿ ಸದಸ್ಯೆಯಾಗಿದ್ದು ಕೆಆರ್ ನಗರ ವಿಧಾನಸಭೆ ಸ್ಥಾನದ ಆಕಾಂಕ್ಷಿಯಾಗಿದ್ದರು.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಹಿರಿಯ ಸಹೋದರ ಎಚ್‌ಡಿ ರೇವಣ್ಣ ಸಹೋದರರ ನಡುವಿನ ಸಂಬಂಧ ಹದಗೆಟ್ಟಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಂಬಂಧ ಡಾ. ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ಅವರು ರಾಜಕೀಯ ವೃತ್ತಿಜೀವನದ ಬಗ್ಗೆ ಆಸಕ್ತಿಯಿಲ್ಲ ಎಂದು ಹೇಳಿದರು, ಆದರೂ ಗೌಡರ ಕುಟುಂಬದ ನಿರ್ಧಾರವು ಮೇಲುಗೈ ಸಾಧಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT