ರಮೇಶ್ ಜಾರಕಿಹೊಳಿ 
ರಾಜಕೀಯ

ಬಿಜೆಪಿ ರಾಜ್ಯಾಧ್ಯಕ್ಷರನ್ನು ನಾನು ಒಪ್ಪಿಲ್ಲ, ಒಪ್ಪೋದು ಇಲ್ಲ; ಮಹಾನಾಯಕ ಅಲ್ಲ, 'ಸಿಡಿ ಶಿವು'- ರಮೇಶ್ ಜಾರಕಿಹೊಳಿ ಟಾಂಗ್

ಪದೇ ಪದೇ ಮಹಾನಾಯಕ ಎಂದು ಸಂಭೋದಿಸಿದರೆ ಮಹಾನಾಯಕರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಭಾವಿಸಿ ನಾನು ಮತ್ತು ಎಚ್.ಡಿ. ಕುಮಾರಸ್ವಾಮಿಯವರು ಮಹಾನಾಯಕನಿಗೆ ಮರುನಾಮಕರಣ ಮಾಡಿದ್ದೇವೆ. ಇನ್ಮುಂದೆ ಅವನು ಮಹಾನಾಯಕ ಅಲ್ಲ, ಬದಲಾಗಿ ಸಿ.ಡಿ.ಶಿವು

ಗೋಕಾಕ್: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ, ಒಪ್ಪೋದು ಇಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ. ನಮಗೇನಿದ್ದರೂ ಹೈಕಮಾಂಡ್ ಅಷ್ಟೇ ಮುಖ್ಯ. ಹೈಕಮಾಂಡ್ ಅಪ್ಪಣೆ ಮೇರೆಗೆ ನಾನು ಕಾರ್ಯ ನಿರ್ವಹಿಸುತ್ತೇನೆಯೇ ವಿನಃ ರಾಜ್ಯ ನಾಯಕರ ಅಪ್ಪಣೆ ಮೇರೆಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅವರು ಅಸಮಾಧಾನ ಹೊರಹಾಕಿದರು.

ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡುತ್ತಿರುವುದನ್ನು ಸ್ವಾಗತ ಮಾಡುತ್ತೇನೆ, ಅದಕ್ಕಿಂತ ಮುಂಚಿತವಾಗಿ ದೆಹಲಿ ಹೈಕಮಾಂಡ್‌ಗೆ ಮಾಡುತ್ತೇನೆ.ಮುಡಾಗಿಂತಲೂ ವಾಲ್ಮಿಕಿ ಹಗರಣ ದೊಡ್ಡದಿದೆ ಅದನ್ನು ಖಂಡಿಸಿ ಬಳ್ಳಾರಿ ಪಾದಯಾತ್ರೆಗೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಮುಡಾಕ್ಕಿಂತಲೂ ವಾಲ್ಮಿಕಿ ನಿಗಮದಲ್ಲಿ ನಡೆದಿರುವುದು ದೊಡ್ಡ ಹಗರಣ ಹಾಗಾಗಿ ನಾನು ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಇನ್ನು ಕೆಲವು ಶಾಸಕರು ಸೇರಿ ಕೂಡಲ ಸಂಗಮದಿಂದ ಪಾದಯಾತ್ರೆ ನಡೆಸಬೇಕೆಂದುಕೊಂಡಿದ್ದೇವೆ. ಈಗಾಗಲೆ ಹೈಕಮಾಂಡ್ ಬಳಿ ಒಮ್ಮೆ ಕೇಳಿದ್ದೇನೆ, ಅವರು ಸ್ವಲ್ಪ ತಡೆಯಿರಿ ಎಂದಿದ್ದಾರೆ. ಇಡೀ ಪಕ್ಷ ಒಟ್ಟಾಗಿ ಪಾದಯಾತ್ರೆ ಮಾಡಿದ್ರೆ ಉತ್ತಮ ಇಲ್ಲವಾದರೆ ನಾನು ಯತ್ನಾಳ್ ಹಾಗು ಕೆಲವು ಶಾಸಕರು ಸೇರಿ ಪಾದಯಾತ್ರೆ ಮಾಡಬೇಕೆಂದುಕೊಂಡಿದ್ದೇವೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಸಿಡಿ ಶಿವು ಬಿಡಬೇಕು. ಮಹಾನಾಯಕನ ಹೆಸರು ಬದಲಾಗಿದೆ ಈಗ ಅವರು ಸಿಡಿ ಶಿವು. ಮಹಾನಾಯಕ ಅಂದ್ರೆ ಅಂಬೇಡ್ಕರ್ ಅವರಿಗೆ ಅವಮಾನ ಆಗುತ್ತದೆ ಅಂತಾ ನಾನು ಕುಮಾರಸ್ವಾಮಿ ಸೇರಿ ಸಿಡಿ ಶಿವು ಅಂತಾ ಮರು ನಾಮಕರಣ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ ಕಾರಣ. ಆದರೆ, ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ತಮ್ಮ ಪಾತ್ರವೂ ಇದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್