ಡಿಕೆ ಸುರೇಶ್ 
ರಾಜಕೀಯ

ಅಕ್ವರ್ಡ್ ಪದಕ್ಕೆ ನಿಮಗಿಂತ ಸರಿಯಾದ ಅನ್ವರ್ಥ ಇದೆಯೇ? ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ?

ದೇವೇಗೌಡರ ಪಾರ್ಟಿ ಕಥೆ ಇರಲಿ, ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ. ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಕರ್ಮಕಾಂಡದ ಬಗ್ಗೆ ಹೇಳುತ್ತಾ ಹೋದರೆ ಅದೇ ಮಹಾ ಕಾದಂಬರಿ ಆಗುತ್ತದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಡಿ.ಕೆ ಸುರೇಶ್ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಮಂಜುನಾಥ್ ವಿರುದ್ಧ ಮಾತನಾಡಿದ್ದ ಸಂಸದ ಸುರೇಶ್ ವಿರುದ್ಧ ಜೆಡಿಎಸ್ ತಪರಾಕಿ ಹಾಕಿದೆ.

ಈ ಕುರಿತು ಜೆಡಿಎಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮಂಜುನಾಥ್ ಎಂದರೇನು? ಡಿಕೆ ಸುರೇಶ್ ಎಂದರೇನು ಎಂದು ಜೆಡಿಎಸ್ ತಿಳಿಸಿದೆ.

•ಡಾ.ಸಿ.ಎನ್.ಮಂಜುನಾಥ್ v/s ಡಿ.ಕೆ.ಸುರೇಶ್

•ನಿಸ್ವಾರ್ಥ vs ಸ್ವಾರ್ಥ!

•ಸೇವೆ v/s ಸುಲಿಗೆ!!

•ಒಳಿತು v/s ಕೆಡುಕು!!! ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ.

ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ. ಡಿ.ಕೆ.ಸುರೇಶ್ ಅವರೇ ನೀವೇನು? ಡಾ.ಸಿ.ಎನ್.ಮಂಜುನಾಥ್ ಅವರೇನು? ಎನ್ನುವುದು ರಾಜ್ಯಕ್ಕಷ್ಟೇ ಅಲ್ಲ, ಇಡೀ ಭಾರತ ದೇಶಕ್ಕೇ ಗೊತ್ತಿದೆ. ಅನಗತ್ಯವಾಗಿ ನಾಲಿಗೆ ಜಾರಿ ಗುಣ ಹಾಳು ಮಾಡಿಕೊಳ್ಳಬೇಡಿ.

ಆರೋಗ್ಯ ಕ್ಷೇತ್ರದಲ್ಲಿ ಎಣೆ ಇಲ್ಲದಷ್ಟು ಸೇವೆ ಮಾಡಿ ಲಕ್ಷಾಂತರ ಬಡಜನರ ಹೃದಯದಲ್ಲಿ ನೆಲೆಸಿರುವ ಡಾ. ಸಿ.ಎನ್.ಮಂಜುನಾಥ್ ಅವರ ಬಗ್ಗೆ ಅನಾರೋಗ್ಯಕರ ಅಪಪ್ರಚಾರದಲ್ಲಿ ನೀವು ನಿರತರಾಗಿದ್ದೀರಿ. ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆಲ್ಲಿದೆ? ಇಡೀ ಕಾಂಗ್ರೆಸ್ ನಿಮ್ಮ ಕಬಂಧಬಾಹುಗಳಲ್ಲಿ ಬಂಧಿಯಾಗಿದೆ. ಅಣ್ಣ ಡಿಸಿಎಂ, ತಮ್ಮ ಎಂಪಿ, ಸಹೋದರಿಯ ಗಂಡ ವಿಧಾನ ಪರಿಷತ್ ಸದಸ್ಯ, ಇನ್ನೊಬ್ಬರು ಕುಣಿಗಲ್ ಶಾಸಕ.

ಇದೇನು ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ? ನೀವು ಏನೆಂದು ಕರೀತೀರಿ ಡಿ.ಕೆ.ಸುರೇಶ್ ಅವರೇ? ಅಳಿಯ ಜಾಣ ಆಗೋದು ತಪ್ಪಲ್ಲ. ನಿಮ್ಮಂತೆ ಇನ್ನೊಬ್ಬರ ಜೀವನಕ್ಕೆ ಎರವಾಗೋದು ತಪ್ಪಲ್ಲವೇ ಎಂದು ಪ್ರಶ್ನಿಸಿದೆ.

ದೇವೇಗೌಡರ ಪಾರ್ಟಿ ಕಥೆ ಇರಲಿ, ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ. ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಕರ್ಮಕಾಂಡದ ಬಗ್ಗೆ ಹೇಳುತ್ತಾ ಹೋದರೆ ಅದೇ ಮಹಾ ಕಾದಂಬರಿ ಆಗುತ್ತದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದವರ ತಟ್ಟೆಯಲ್ಲಿ ನೊಣ ಹುಡುಕುವ ದಡ್ಡತನವೇಕೆ? ಅಕ್ವರ್ಡ್ ಪದಕ್ಕೆ ನಿಮಗಿಂತ ಸರಿಯಾದ ಅನ್ವರ್ಥ ಇದೆಯೇ? ಏನಂತೀರಿ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!