ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

ಮೂರ್ನಾಲ್ಕು ಹಂತಗಳಲ್ಲಿ ಲೋಕಸಭೆ ಚುನಾವಣೆ ಮುಗಿಯಬೇಕಿತ್ತು: 7 ಹಂತದ ಮತದಾನಕ್ಕೆ ಖರ್ಗೆ ಆಕ್ಷೇಪ

“ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲೆಡೆ ಪ್ರವಾಸ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ” 2024ರ ಲೋಕಸಭೆ ಚುನಾವಣೆಗೆ ಏಳು ಹಂತದ ಚುನಾವಣೆ ಘೋಷಿಸಲಾಗಿದೆ.

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲೆಡೆ ಪ್ರವಾಸ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ” 2024ರ ಲೋಕಸಭೆ ಚುನಾವಣೆಗೆ ಏಳು ಹಂತದ ಚುನಾವಣೆ ಘೋಷಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.

ಇಂದು ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಮೂರ್ನಾಲ್ಕು ಹಂತಗಳಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಾಗಲಿದೆ ಎಂಬ ಆತಂಕ ನಮಗಿಲ್ಲ. ಆದರೆ ಮೋದಿಜಿ ಎಲ್ಲೆಡೆ ಪ್ರವಾಸ ಮಾಡಲು ಏಳು ಹಂತಗಳನ್ನು ಹಾಕುತ್ತಿದ್ದಾರೆ ಎಂದರು.

ಈ ದೇಶದಲ್ಲಿ ನಾನು ಸುಮಾರು 12 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಗರಿಷ್ಠ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿದೆ. ನಾನು ಒಂದು ಮತ್ತು ಎರಡು ಹಂತಗಳ ಚುನಾವಣೆಯನ್ನೂ ನೋಡಿದ್ದೇನೆ. ಆದರೆ ನಾಲ್ಕು ಹಂತಕ್ಕಿಂತ ಹೆಚ್ಚಾಗಿರಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಏಳು ಹಂತಗಳಲ್ಲಿ ಚುನಾವಣೆ ನಡೆಸುವುದರಿಂದ ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಸುಮಾರು 70-80 ದಿನಗಳ ಕಾಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದರೆ ದೇಶ ಹೇಗೆ ಪ್ರಗತಿ ಸಾಧಿಸುತ್ತದೆ ಎಂದು ನೀವೇ ಊಹಿಸಿ? ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ... ಸಾಮಗ್ರಿ ಪೂರೈಕೆಯಾಗುವುದಿಲ್ಲ. ಬಜೆಟ್ ಖರ್ಚು ಮಾಡಲಾಗುವುದಿಲ್ಲ. ಹಾಗಾಗಿ ನನ್ನ ಪ್ರಕಾರ ಇದು ಒಳ್ಳೆಯದಲ್ಲ. ಮೂರ್ನಾಲ್ಕು ಹಂತಗಳಲ್ಲಿ ಪೂರ್ಣಗೊಳಿಸಬಹುದಿತ್ತು ಎಂದರು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇಂದು 2024 ರ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

T20 World Cup 2026 ಸೆಮಿಫೈನಲ್: ಸ್ಯಾಮ್ಸನ್ ಮಿಂಚಿನ ಅರ್ಧಶತಕ; ಇಂಗ್ಲೆಂಡ್ ಗೆ ಬೃಹತ್ 254 ರನ್ ಟಾರ್ಗೆಟ್ ನೀಡಿದ ಭಾರತ!

T20 World Cup 2026: 2ನೇ ಸೆಮಿಫೈನಲ್; ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್!

ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ದಿಢೀರ್ ರಾಜೀನಾಮೆ; ರವಿಗೆ ಹೆಚ್ಚುವರಿ ಜವಾಬ್ದಾರಿ

ಮೋದಿ ಟೀಕೆ, ಪದೇ ಪದೇ ಗ್ಯಾರಂಟಿಗಳ ಉಲ್ಲೇಖ ಸಿದ್ದರಾಮಯ್ಯ ಬಜೆಟ್‌ನ ಮುಖ್ಯಾಂಶಗಳು: ಆರ್ ಅಶೋಕ್ ಭವಿಷ್ಯ

SCROLL FOR NEXT