ಪಿ ಸಿ ಗದ್ದೀಗೌಡರ್ ಮತ್ತು ಸಂಯುಕ್ತಾ ಪಾಟೀಲ್ 
ರಾಜಕೀಯ

ಬಾಗಲಕೋಟೆ: 5ನೇ ಬಾರಿ ಗೆಲುವಿನ ಗದ್ದುಗೆ ಏರಲು 'ಗದ್ದಿಗೌಡರ್' ಸಜ್ಜು; ಕೇಸರಿ ಕಲಿಗಳ ನಾಗಾಲೋಟಕ್ಕೆ 'ಸಂಯುಕ್ತಾ' ಲಗಾಮು?

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಾಗಲಕೋಟ ಕ್ಷೇತ್ರವನ್ನು 2004 ರಲ್ಲಿ ಸಂಸದ ಪಿ ಸಿ ಗದ್ದಿಗೌಡರ್ ವಶಪಡಿಸಿಕೊಂಡು ಬಿಜೆಪಿಯ ಕಣವಾಗಿ ಪರಿವರ್ತಿಸಿದರು. ನಂತರದ ಮೂರು ಲೋಕಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದರು

ಬಾಗಲಕೋಟೆ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಾಗಲಕೋಟ ಕ್ಷೇತ್ರವನ್ನು 2004 ರಲ್ಲಿ ಸಂಸದ ಪಿ ಸಿ ಗದ್ದಿಗೌಡರ್ ವಶಪಡಿಸಿಕೊಂಡು ಬಿಜೆಪಿಯ ಕಣವಾಗಿ ಪರಿವರ್ತಿಸಿದರು. ನಂತರದ ಮೂರು ಲೋಕಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದರು. ಇದೀಗ ಐದನೇ ಬಾರಿಗೂ ಗೆಲು ಸಾಧಿಸಿ ಕ್ಷೇತ್ರದಲ್ಲಿ ದಾಖಲೆ ಬರೆಯುವ ತವಕದಲ್ಲಿದ್ದಾರೆ.

ಕಬ್ಬಿನ ಉತ್ಪಾದನೆಯಲ್ಲಿ ಸಮೃದ್ಧವಾಗಿರುವ ಮತ್ತು ಬಾದಾಮಿ ತಾಲ್ಲೂಕಿನಲ್ಲಿ ಪ್ರಾಚೀನ ಸ್ಮಾರಕಗಳಿಗೆ ಜನಪ್ರಿಯವಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಈ ಬಾರಿ 72 ವರ್ಷದ ಬಿಜೆಪಿ ಹಿರಿಯ ನೇತಾರನವಿರುದ್ಧ 30 ವರ್ಷ ವಯಸ್ಸಿವ ಸಂಯುಕ್ತಾ ಪಾಟೀಲ್ ಕಣಕ್ಕಿಳಿದಿದ್ದಾರೆ. ಜಿಲ್ಲೆಯಲ್ಲಿ ಕಳೆದ 17 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 11 ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿದ್ದರೆ, ಜನತಾದಳ ಮತ್ತು ಲೋಕಶಕ್ತಿ ಪಕ್ಷಗಳು ತಲಾ ಒಂದೊಂದು ಬಾರಿ ಆರಿಸಿ ಬಂದಿವೆ.

2004 ರಿಂದ ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಬಿಜೆಪಿ ಬ್ರೇಕ್ ಹಾಕಿದ್ದಲ್ಲದೆ, ಗದ್ದಿಗೌಡರ್ ಪಕ್ಷಕ್ಕೆ ಪ್ರಬಲ ನೆಲೆ ಕಲ್ಪಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ, ಈ ನಾಲ್ಕು ಚುನಾವಣೆಗಳಲ್ಲಿಯೂ ಗದ್ದಿಗೌಡರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ನ ವಿಭಿನ್ನ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ.

2004 ರಲ್ಲಿ, ಕಾಂಗ್ರೆಸ್ ಗದ್ದಿಗೌಡರ್ ವಿರುದ್ಧ ಮಾಜಿ MLC S R ಪಾಟೀಲ್ ಅವರನ್ನು ಕಣಕ್ಕಿಳಿಸಿತು, 2009 ರಲ್ಲಿ ಪ್ರಸ್ತುತ ಬಿಳಗಿ ಶಾಸಕ ಜೆ ಟಿ ಪಾಟೀಲ್, 2014ರಲ್ಲಿ ಮಾಜಿ ಸಚಿವ ಅಜಯಕುಮಾರ್ ಸರನಾಯಕ್ ಪಕ್ಷದ ಅಭ್ಯರ್ಥಿಯಾಗಿದ್ದು, 2019ರಲ್ಲಿ ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಗದ್ದಿಗೌಡರ್ ವಿರುದ್ಧ ಕಣಕ್ಕಿಳಿದ ಮೊದಲ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸ್ತುತ ಚುನಾವಣೆಯಲ್ಲೂ ಗದ್ದಿಗೌಡರ್ ಮಹಿಳಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿರುದ್ಧ ಸ್ಪರ್ಧಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕಿರಿಯ ಅಭ್ಯರ್ಥಿಗಳಲ್ಲಿ ಒಬ್ಬರಾದ ಸಂಯುಕ್ತಾ ಜವಳಿ ಸಚಿವ ಶಿವಾನಂದ್ ಪಾಟೀಲ್ ಅವರ ಪುತ್ರಿ. ವಿಜಯಪುರ ಜಿಲ್ಲೆಯವರಾದ ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಾಗಲಕೋಟೆ ಮತದಾರರು ಆಕೆಯನ್ನು "ಹೊರಗಿನವರು" ಎಂದು ಪರಿಗಣಿಸುವುದರೊಂದಿಗೆ ಈ ಅಂಶವು ಆಕೆಯ ವಿರುದ್ಧ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ಆದಾಗ್ಯೂ, ಎಲ್ಲಾ ಕಾಂಗ್ರೆಸ್ ಶಾಸಕರ ವ್ಯಾಪಕ ಪ್ರಚಾರ ಮತ್ತು ಸಂಘಟಿತ ಪ್ರಯತ್ನಗಳು ಗಮನಾರ್ಹ ಪ್ರಮಾಣದಲ್ಲಿ ಫಲಿತಾಂಶ ಹೊರಹಾಕುವಲ್ಲಿ ಅವರಿಗೆ ಸಹಾಯ ಮಾಡಿಲಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಗದ್ದಿಗೌಡರ್ ಇಲ್ಲಿಯವರಾಗಿದ್ದಾರೆ, ಅವರ ಹಿರಿತನ ಹಾಗೂ ವಿವಿಧ ಸಮುದಾಯಗಳ ಮುಖಂಡರ ಒಡನಾಟದಿಂದಾಗಿ ಬಾಗಲಕೋಟೆಯ ಮತದಾರರಲ್ಲಿ ಇಂದಿಗೂ ಜನಪ್ರಿಯತೆ ಕಾಣುತ್ತಿದ್ದಾರೆ. ಆದರೆ, ಬಿಜೆಪಿ ಶಾಸಕರ ಬೆಂಬಲದ ಕೊರತೆಯು ಅವರಿಗೆ ನಿರೀಕ್ಷಿತ ಫಲಿತಾಂಶವನ್ನು ನೀಡದಿರಬಹುದು.

ಗದ್ದಿಗೌಡರನ್ನು ನಿಸ್ಸಂದೇಹವಾಗಿ “ಸಭ್ಯ” ರಾಜಕಾರಣಿ ಎಂದು ಪರಿಗಣಿಸಲಾಗಿದೆ, ಆದರೆ ಜಿಲ್ಲೆಗೆ ಸಾಮರ್ಥ್ಯವಿದ್ದರೂ ಯಾವುದೇ ಪ್ರಮುಖ ಕೈಗಾರಿಕೆಗಳನ್ನು ತರಲಿಲ್ಲ. ಜೊತೆಗೆ ಪ್ರವಾಸೋದ್ಯಮ ಕ್ಷೇತ್ರವನ್ನು ಗಮನಾರ್ಹ ರೀತಿಯಲ್ಲಿ ಉತ್ತೇಜಿಸದ್ದಕ್ಕಾಗಿ ಅವರ ವಿರುದ್ಧ ಹಲವರು ತಿರುಗಿ ಬಿದ್ದಿದ್ದಾರೆ.

ಜಾತಿ ಅಂಶಗಳು ಗದ್ದಿಗೌಡರ ಭವಿಷ್ಯಕ್ಕೆ ಸ್ವಲ್ಪ ಹಾನಿಯನ್ನುಂಟುಮಾಡಬಹುದು. ಇಲ್ಲಿಯವರೆಗೆ ಬಿಜೆಪಿಗೆ ಪಂಚಮಸಾಲಿ ಸಮುದಾಯ ಭಾರೀ ಬೆಂಬಲ ನೀಡುತ್ತಿತ್ತು, ಆದರೆ ಈ ಬಾರಿ ಸಂಯುಕ್ತಾ ಕೂಡ ಅದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಮುದಾಯ ಅವರ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ ಪಂಚಮಸಾಲಿಗಳಾದ ವೀಣಾ ಕಾಶಪ್ಪನವರ್ ಸಮುದಾಯದಿಂದ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಪಡೆದರೂ ಚುನಾವಣೆಯಲ್ಲಿ ಗೆಲ್ಲವಾಗಲಿಲ್ಲ. ಮುಸ್ಲಿಮರು ಮತ್ತು ಕುರುಬರು ಉತ್ತಮ ಸಂಖ್ಯೆಯಲ್ಲಿರುವುದರಿಂದ ಅವರ ಒಗ್ಗಟ್ಟು ಗಾಣಿಗ ಸಮುದಾಯದಿಂದ ಬಂದಿರುವ ಗದ್ದಿಗೌಡರ ಭವಿಷ್ಯಕ್ಕೂ ಪರಿಣಾಮ ಬೀರಬಹುದು.

ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಾಗಲಕೋಟೆಯ ಎಂಟು ಲೋಕಸಭಾ ಕ್ಷೇತ್ರಗಳ ಐವರು ಕಾಂಗ್ರೆಸ್ ಶಾಸಕರಿರುವವುದು ಸಂಯುಕ್ತಾ ಪಾಟೀಲ್ ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರವೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಗದ್ದಿಗೌಡರ್ ಗೆದ್ದರೆ ಆಶ್ಚರ್ಯವಿಲ್ಲ, ಆದರೆ ಮಹಿಳಾ ಅಭ್ಯರ್ಥಿಯಿಂದ ಸೋತರೆ ಖಂಡಿತವಾಗಿಯೂ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT