ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಸುರಪುರ ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಗೆ ಅನುಕಂಪದ ಅಸ್ತ್ರ; 'ಕೈ' ವಿರುದ್ಧ ಬಿಜೆಪಿ ಪ್ರತ್ಯಾಸ್ತ್ರ!

ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪನಾಯಕ ನಿಧನದಿಂದ ತೆರವಾಗಿರುವ ಸುರಪುರ ಕ್ಷೇತ್ರ ವಿಧಾನಸಭೆ ಉಪ ಚುನಾವಣೆಯ ಕಣ ರಂಗೇರಿದೆ. ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7 ರಂದು ಉಪಚುನಾವಣೆ ನಡೆಯಲಿದೆ.

ರಾಜಾ ವೇಣುಗೋಪಾಲ್ ನಾಯಕ್ ಮತ್ತು ರಾಜುಗೌಡ
Shilpa D
Updated On : 1 May 2024, 12:54 pm

ಸುರಪುರ: ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪನಾಯಕ ನಿಧನದಿಂದ ತೆರವಾಗಿರುವ ಸುರಪುರ ಕ್ಷೇತ್ರ ವಿಧಾನಸಭೆ ಉಪ ಚುನಾವಣೆಯ ಕಣ ರಂಗೇರಿದೆ. ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7 ರಂದು ಉಪಚುನಾವಣೆ ನಡೆಯಲಿದೆ. ಫೆಬ್ರವರಿ 25 ರಂದು ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ನಿಧನರಾಗಿದ್ದರು.

ದಿವಂಗತ ಶಾಸಕ ವೆಂಕಟಪ್ಪ ನಾಯಕರ ಹಿರಿಯ ಪುತ್ರ ರಾಜಾ ವೇಣುಗೋಪಾಲ್ ನಾಯಕ್ ಮತ್ತು ಮೂರು ಬಾರಿ ಶಾಸಕ ಮತ್ತು ಮಾಜಿ ಸಚಿವರಾಗಿರುವ ಬಿಜೆಪಿಯ ರಾಜಾ ನರಸಿಂಹ ನಾಯಕ್ ವಿರುದ್ಧ ಸ್ಪರ್ಧಿಸಿದ್ದಾರೆ.

ದಿವಂಗತ ರಾಜಾ ವೆಂಕಟಪ್ಪ ನಾಯಕ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಬಲ ಅನುಯಾಯಿಯಾಗಿದ್ದರು. ಸುರಪುರದಿಂದ ನಾಲ್ಕು ಬಾರಿ - 1994 (ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ), 1999, 2013 ಮತ್ತು 2023 ರಲ್ಲಿ ವಿಧಾನಸಭೆ ಪ್ರವೇಶಿಸಿದ್ದರು.

Advertisement

Advertisement

Also Read

ಸುರಪುರ ಉಪ ಚುನಾವಣೆ: ರಾಜೂಗೌಡಗೆ ಬಿಜೆಪಿ ಟಿಕೆಟ್

ರಾಜಾ ವೆಂಕಟಪ್ಪ ನಾಯಕ್ ಅವರು ಈ ಪ್ರದೇಶದ ಜನಪ್ರಿಯ ವ್ಯಕ್ತಿಯಾಗಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿಗೆ ಅನುಕಂಪದ ಅಲೆ ಸಹಾಯ ಮಾಡಬಹುದು ಎಂದು ಭಾವಿಸಿದ್ದರಿಂದ, ಸುರಪುರ ಉಪಚುನಾವಣೆಯಲ್ಲಿ ಅವರ ಹಿರಿಯ ಮಗ ರಾಜಾ ವೇಣುಗೋಪಾಲ್ ನಾಯಕ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತು.

ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ರಾಜಾ ವೇಣುಗೋಪಾಲ್ ನಾಯಕ್ ಅವರು ಸಾರ್ವಜನಿಕರಿಂದ ಮತ ಯಾಚಿಸುತ್ತಿದ್ದು, ತಮ್ಮ ತಂದೆ ಮಾಡಿದ ಉತ್ತಮ ಕಾರ್ಯಗಳನ್ನು ಸ್ಮರಿಸುತ್ತಾ, ತಂದೆಯ ಹಾದಿಯಲ್ಲಿ ನಡೆದು ಅವರಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿರುವ ಐದು ಭರವಸೆಗಳು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೆರವಾಗಬಹುದು ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ರಾಜುಗೌಡ ಎಂದೇ ಖ್ಯಾತರಾಗಿರುವ ಬಿಜೆಪಿ ಅಭ್ಯರ್ಥಿ ರಾಜಾ ನರಸಿಂಹ ನಾಯಕ್ ಚುನಾವಣಾ ರಾಜಕೀಯದಲ್ಲಿ ಅನುಭವಿ. ಅವರು 2004 ರಲ್ಲಿ ಕನ್ನಡ ನಾಡು ಪಕ್ಷದಿಂದ ಮತ್ತು ನಂತರ 2008 ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. 2011 ರಿಂದ 2013 ರವರೆಗೆ ಸಚಿವರಾಗಿದ್ದರು ಮತ್ತು ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದಾರೆ.

Also Read

''ಥಿಯೇಟರ್ ಬಂದ್ ಹೈ ತೋ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ': ಆನಂದ್ ಸಿಂಗ್ ಕಾಲೆಳೆದ ರಾಜುಗೌಡ

ರಾಜಾ ನರಸಿಂಹ ನಾಯಕ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಆಧಾರದ ಮೇಲೆ ಮತದಾರರ ಬಳಿ ಹೋಗುತ್ತೇವೆ ಎಂಬುದು ಬಿಜೆಪಿ ಮುಖಂಡರ ವಾದ. ನರಸಿಂಹನಾಯಕ್ ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತೇವೆ.

ಜಲ ಜೀವನ್ ಮಿಷನ್ ಅಡಿಯಲ್ಲಿ ಗುಂಡಲಗೇರಾ ಮತ್ತು ದೇವತ್ಕಲ್ ಏತ ನೀರಾವರಿ ಯೋಜನೆಗಳು ಮತ್ತು ಸುರಪುರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು, ಮತ್ತು ಇತರ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಸೋಲಿಸಲು ಬಿಜೆಪಿಗೆ ಸಹಾಯ ಮಾಡಲಿವೆ ಎಂದು ರಾಜೂಗೌಡ ಅವರ ಬೆಂಬಲಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement