ಎಸ್ ಎಲ್ ಭೋಜೇಗೌಡ 
ರಾಜಕೀಯ

Jds ಅಭ್ಯರ್ಥಿ ಭೋಜೇಗೌಡ ಆಸ್ತಿ ಘೋಷಣೆ: ಪ್ಯಾಲೇಸ್ ರಸ್ತೆಯಲ್ಲಿ ಮನೆ, ಬೆಂಜ್ ಸೇರಿದಂತೆ 5 ಐಷಾರಾಮಿ ಕಾರು!

ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್‌ಎಲ್‌ ಭೋಜೇಗೌಡ ತಮ್ಮ ಬಳಿ 32 ಕೋಟಿ ರೂ.ಗೂ ಹೆಚ್ಚು ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಬೆಂಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್‌ಎಲ್‌ ಭೋಜೇಗೌಡ ತಮ್ಮ ಬಳಿ 32 ಕೋಟಿ ರೂ.ಗೂ ಹೆಚ್ಚು ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ಅವರ ಕುಟುಂಬವು 9 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚರ ಆಸ್ತಿ ಮತ್ತು ರೂ.22 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದೆ.

ಅವರ ಪತ್ನಿ, ಒಬ್ಬ ಮಗ ಮತ್ತು ಮಗಳು ಸೇರಿದಂತೆ ಕುಟುಂಬದ ಕೈಯಲ್ಲಿ ಒಟ್ಟು 30 ಲಕ್ಷ ರೂಪಾಯಿ ನಗದು ಮತ್ತು ಬ್ಯಾಂಕ್ ಠೇವಣಿ, ಚಿನ್ನ ಮತ್ತು ಮ್ಯೂಚುವಲ್ ಫಂಡ್‌ಗಳು, ಷೇರುಗಳು, ಬಾಂಡ್‌ಗಳು, ವಾಹನಗಳು ಮತ್ತು 9 ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆ ಇದೆ. ಬಿಎಸ್ಸಿ ಮತ್ತು ಎಲ್ ಎಲ್ ಬಿ ಪದವೀಧರರಾಗಿರುವ 67 ವರ್ಷದ ಭೋಜೇಗೌಡ ಅವರು ಪತ್ನಿ ಅಚಲ ಅವರಿಗೆ 35.17 ಲಕ್ಷ ಹಾಗೂ ಪುತ್ರ ನಿತೀಶ್ ಗೌಡ ಅವರಿಗೆ 1.68 ಕೋಟಿ ಸಾಲ ನೀಡಿದ್ದಾರೆ.

ಬೋಜೇಗೌಡ ಅವರ ಬಳಿ ಬೆಂಜ್, BMW ಮತ್ತು ಇನ್ನೋವಾ ಹೈಕ್ರಾಸ್ ಸೇರಿದಂತೆ ಐದು ವಾಹನಗಳಿವೆ, ಅವರ ಪತ್ನಿ ಎರಡು - ವೋಕ್ಸ್‌ವ್ಯಾಗನ್ ಪೋಲೋ ಮತ್ತು ಹ್ಯುಂಡೈ i10 ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ ಅವರ ಮಗನ ಬಳಿ ಯಾವುದೇ ವಾಹನವಿಲ್ಲ.

ಭೋಜೇಗೌಡ ಅವರು 88.59 ಲಕ್ಷ ರೂಪಾಯಿ ಮೌಲ್ಯದ 950 ಗ್ರಾಂ ಚಿನ್ನ ಮತ್ತು 11.2 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಹೊಂದಿದ್ದಾರೆ, ಅವರ ಪತ್ನಿ 81.20 ಲಕ್ಷ ರೂಪಾಯಿ ಮೌಲ್ಯದ 1,400 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ನಿತೀಶ್ ಅವರು 30 ವಿವಿಧ ಕಂಪನಿಗಳಲ್ಲಿ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಭೋಜೇಗೌಡ ಮತ್ತು ಅವರ ಮಗ ಸೇರಿ ಸುಮಾರು 16 ಎಕರೆ ಅಡಿಕೆ ಮತ್ತು ತೆಂಗಿನ ತೋಟಗಳನ್ನು ಹೊಂದಿದ್ದಾರೆ, ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 4 ಕೋಟಿ ರೂ. ಇದೆ.

ಕುಟುಂಬವು ಕೃಷಿಯೇತರ ಭೂಮಿಯನ್ನು ಹೊಂದಿದೆ (ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ 8.50 ಕೋಟಿ). ಇದರಲ್ಲಿ ಬೀಕನಹಳ್ಳಿ ರಸ್ತೆಯಲ್ಲಿ 28, ರಾಮೇಶ್ವರ ನಗರದಲ್ಲಿ ನಾಲ್ಕು ಮತ್ತು ಚಿಕ್ಕಮಗಳೂರಿನ ಕಣದಾಲ್ ರಸ್ತೆಯಲ್ಲಿ ಒಂದು ನಿವೇಶನ, ಸಕ್ಕರೆಯಾಪಟ್ಟಣ ಗ್ರಾಮದಲ್ಲಿ 5.21 ಎಕರೆ ಜಾಗವಿದೆ. ಅವರು ಬೆಂಗಳೂರಿನ ಅರಮನೆ ರಸ್ತೆಯಲ್ಲಿ 2012 ರಲ್ಲಿ ಗಿಫ್ಟ್ ಡೀಡ್ ಮೂಲಕ ಪಡೆದ ಫ್ಲ್ಯಾಟ್ ಹೊಂದಿದ್ದಾರೆ (ಪ್ರಸ್ತುತ ಮಾರುಕಟ್ಟೆ ಮೌಲ್ಯ 3.10 ಕೋಟಿ ರೂ.) ಮತ್ತು ಚಿಕ್ಕಮಗಳೂರಿನಲ್ಲಿ 1.7 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ.

ಕುಟುಂಬಕ್ಕೆ 3.5 ಕೋಟಿ ರೂ. ಸಾಲವಿದೆ. ಕಳೆದ ಹಣಕಾಸು ವರ್ಷದಲ್ಲಿ ಅವರ ವಾರ್ಷಿಕ ಆದಾಯ 99.09 ಲಕ್ಷ ರೂ.ಗಳಾಗಿತ್ತು, ಅವರ ಪತ್ನಿ ಮತ್ತು ಮಗ ಕ್ರಮವಾಗಿ 10.34 ಲಕ್ಷ ಮತ್ತು 1.24 ಕೋಟಿ ರೂ. ವಾರ್ಷಿಕ ಆದಾಯ ಪಡೆಯುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT