ಬೆಂಗಳೂರು: ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಜೂನ್ 13 ರಂದು ಮತದಾನ ನಡೆಯಲಿದೆ. ವಿಧಾನಸಭೆಯಿಂದ ವಿಧಾನಪರಿಷತ್ ಗೆ ಚುನಾಯಿತರಾಗಿರುವ 11 ಸದಸ್ಯರ ಅವಧಿ ಜೂನ್ 17ಕ್ಕೆ ಕೊನೆಗೊಳ್ಳಲಿದೆ.
ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನ. ಜೂನ್ 4 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 13 ರಂದು ಮತದಾನ ದಿನದಂದೇ ಅಂದು ಸಂಜೆ ಐದು ಗಂಟೆಗೆ ಮತ ಎಣಿಕೆ ನಡೆಯಲಿದೆ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ತೇಜಸ್ವಿನಿಗೌಡ, ಪಿಎಂ ಮುನಿರಾಜುಗೌಡ, ಕೆಪಿ ನಂಜುಂಡಿ, ಬಿ. ಎಂ. ಫಾರೂಕ್, ಅರವಿಂದ ಕುಮಾರ್ ಅರಳಿ,ಎನ್.ಎಸ್. ಬೋಸರಾಜು, ಗೋವಿಂದರಾಜು, ರಘುನಾಥ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ, ಕೆ. ಹರೀಶ್ ಕುಮಾರ್ ಅವರ ಅವಧಿ ಜೂನ್ 17ಕ್ಕೆ ಅಂತ್ಯವಾಗಲಿದೆ.