ಸಚಿವ ಎಂ.ಬಿ.ಪಾಟೀಲ್ 
ರಾಜಕೀಯ

ಜಮೀರ್ ಪದಚ್ಯುತಿಗೆ ಆಗ್ರಹಿಸುವುದಕ್ಕೂ ಮುನ್ನ ನೀವು ರಾಜೀನಾಮೆ ನೀಡಿ: BJP ಶಾಸಕರಿಗೆ ಎಂ.ಬಿ ಪಾಟೀಲ್

ಸರ್ಕಾರ ರೈತರಿಂದ ಒಂದು ಇಂಚು ಭೂಮಿಯನ್ನು ಸಹ ಕಸಿದುಕೊಳ್ಳುತ್ತಿಲ್ಲ ಮತ್ತು ಭೂ ದಾಖಲೆಗಳನ್ನು ಸರಳೀಕರಿಸಲು ಯೋಜಿಸುತ್ತಿದೆ. 1974ರಲ್ಲಿ ಕಣ್ತಪ್ಪಿನಿಂದ ವಿಜಯಪುರ ನಗರದ ಮಹಾಲಬಾಗಾಯತನ ಸರ್ವೇ ನಂಬರ್ ಗಳ ಮುಂದೆ ಹೊನವಾಡ ಎಂದು ಸೇರಿದ್ದರಿಂದಾಗಿ ಈ ಲೋಪವಾಗಿದೆ.

ವಿಜಯಪುರ: ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಅವರು ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬಿಜೆಪಿಯವರು ರೈತರಿಗೆ ನೋಟಿಸ್ ನೀಡಿದ್ದಲ್ಲದೆ, ಭೂದಾಖಲೆಯಲ್ಲಿ ವಕ್ಫ್ ಹೆಸರನ್ನೂ ಸೇರಿಸಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ರೈತರ ಹೆಸರನ್ನು ಪಟ್ಟಿ ಮಾಡಿದ ಸಚಿವರು, ಬಿಜೆಪಿಯವರು ಭೂ ದಾಖಲೆಗಳಲ್ಲಿ ವಕ್ಫ್ ಹೆಸರನ್ನು ನಮೂದಿಸಿ ಭೂಮಿಯನ್ನು ಕಬಳಿಸಿಕೊಂಡಿರುವ ರೈತರ ಪಟ್ಟಿ ಇದಾಗಿದೆ. ಹಿಂದಿನ ಬಿಜೆಪಿ ಸರ್ಕಾರವು ವಕ್ಫ್ ಭೂಮಿ ಎಂದು ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದರು.

ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಹಿಂದೂಗಳ ಹೋರಾಟಗಾರರು ಎಂದು ಕರೆಸಿಕೊಳ್ಳುವವರು ಕೆಲವರು ಒತ್ತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಮಾಡಲು ಬಿಜೆಪಿ ವಕ್ಫ್ ವಿಷಯವನ್ನು ಎತ್ತುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ರೈತರಿಂದ ಒಂದು ಇಂಚು ಭೂಮಿಯನ್ನು ಸಹ ಕಸಿದುಕೊಳ್ಳುತ್ತಿಲ್ಲ ಮತ್ತು ಭೂ ದಾಖಲೆಗಳನ್ನು ಸರಳೀಕರಿಸಲು ಯೋಜಿಸುತ್ತಿದೆ. 1974ರಲ್ಲಿ ಕಣ್ತಪ್ಪಿನಿಂದ ವಿಜಯಪುರ ನಗರದ ಮಹಾಲಬಾಗಾಯತನ ಸರ್ವೇ ನಂಬರ್ ಗಳ ಮುಂದೆ ಹೊನವಾಡ ಎಂದು ಸೇರಿದ್ದರಿಂದಾಗಿ ಈ ಲೋಪವಾಗಿದೆ. ಆ ಬಳಿಕ 1977ರಲ್ಲಿ ಹೊನವಾಡ ಎಂಬುದನ್ನು ತೆಗೆದು ಹಾಕಲಾಗಿದೆ. ರೈತರ ಭೂಮಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಸರ್ಕಾರ ಯಾವುದೇ ರೈತರ ಒಂದು ಒಕರೆ ಜಮೀನನ್ನೂ ಕೂಡ ವಕ್ಫ್ ಗೆ ನೀಡಿಲ್ಲ. ಹೊನವಾಡದಲ್ಲಿ ವಕ್ಫ್ ಆಸ್ತಿ 1200 ಎಕರೆ ಇಲ್ಲ. ಅಲ್ಲಿರುವುದೇ ಕೇವಲ 10 ಎಕರೆ 29 ಗುಂಟೆ ಮಾತ್ರ ಎಂದು ಸ್ಪಷ್ಟಪಡಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT