ಸಿಪಿ ಯೋಗೇಶ್ವರ್ ಮತ್ತು ಸಿ.ಎಸ್ ಪುಟ್ಟರಾಜು 
ರಾಜಕೀಯ

ಕಾಂಗ್ರೆಸ್ ಹುತ್ತದೊಳಗೆ ಎಂತೆಂಥಾ ಘಟ ಸರ್ಪಗಳಿವೆ ಗೊತ್ತೆ; JDS ನಿಂದ ಒಬ್ಬರನ್ನು ಎಳೆಯಲಿ ನೋಡೋಣ: ಯೋಗೇಶ್ವರ್ ಗೆ ಪುಟ್ಟರಾಜು ಸವಾಲು

ನಿಜವಾದ ರಣಹೇಡಿ ಎಂದರೆ ಯೋಗೇಶ್ವರ್. ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಾರದೆ ಓಡಿಹೋಗಿ ವಿರೋಧಿಗಳ ಜೊತೆ ಸೇರಿಕೊಂಡು ಕೊನೇ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದಿರಿ. ಮೊದಲು ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ.

ಮಂಡ್ಯ: ಶಾಸಕ ಸಿ.ಪಿ.ಯೋಗೇಶ್ವರ್‌ಗೆ ತಾಕತ್ತಿದ್ದರೆ ಜೆಡಿಎಸ್‌ನಿಂದ ಒಬ್ಬನೇ ಒಬ್ಬ ಮುಖಂಡ ಅಥವಾ ಶಾಸಕರನ್ನು ತಮ್ಮ ಕಡೆಗೆ ಸೆಳೆಯಲಿ ನೋಡೋಣ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸವಾಲು ಹಾಕಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವು, ಜೆಡಿಎಸ್‌ನ ಶಾಸಕರು, ಮುಖಂಡರನ್ನು ಎಳೆಯುವುದು ಅಷ್ಟು ಸುಲಭದ ಮಾತಲ್ಲ. ಹಣದಿಂದ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ವಾಭಿಮಾನವಿದೆ. ನಿಮ್ಮ ಹಣದ ಗಾಳಕ್ಕೆ ಎಲ್ಲರೂ ಬೀಳುತ್ತಾರೆ ಎಂದು ಭ್ರಮಿಸಿದ್ದರೆ ಅದು ನಿಮ್ಮ ಮೂರ್ಖತನ. ಈಗಷ್ಟೇ ಗೆದ್ದಿದ್ದೀರಿ. ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಿ. ಅದನ್ನು ಬಿಟ್ಟು ಆಪರೇಷನ್ ಹಸ್ತದ ಮೂಲಕ ಜೆಡಿಎಸ್‌ ಮುಗಿಸಿ ಬಿಡುವೆನೆಂಬ ಮಾತುಗಳು ನಿಮ್ಮ ದುರಹಂಕಾರದ ಪರಮಾವಧಿಯನ್ನು ಸಾಕ್ಷೀಕರಿಸುತ್ತದೆ ಎಂದು ಕುಟುಕಿದರು.

ನಿಜವಾದ ರಣಹೇಡಿ ಎಂದರೆ ಯೋಗೇಶ್ವರ್. ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಾರದೆ ಓಡಿಹೋಗಿ ವಿರೋಧಿಗಳ ಜೊತೆ ಸೇರಿಕೊಂಡು ಕೊನೇ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದಿರಿ. ಮೊದಲು ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ. ಡಿ.ಕೆ. ಶಿವಕುಮಾರ್ ನಿಮ್ಮ ಬಗ್ಗೆ ಮಾತನಾಡಿರುವ ರೆಕಾರ್ಡ್‌ಗಳು ನಮ್ಮ ಬಳಿ ಇದೆ. ಗೆಲುವಿನ ಮದದಲ್ಲಿ ಉದ್ಧಟತನ ಪ್ರದರ್ಶಿಸಿದರೆ ಮಂಡ್ಯದಿಂದ ರೈತರನ್ನು ಕರೆತಂದು ಚನ್ನಪಟ್ಟಣದ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಾವನ್ನು ತುಳಿದು ಅದು ಸೇರಿರುವ ಹುತ್ತಕ್ಕೇ ಯೋಗೇಶ್ವರ್ ಸೇರಿದ್ದಾರೆ, ಹೀಗಾಗಿ ಎಚ್ಚರದಿಂದ ಇರಬೇಕು. ಕಾಂಗ್ರೆಸ್ ಹುತ್ತ ಎಂತಹದ್ದು, ಅದರೊಳೊಗೆ ಎಂತೆಂಥಾ ಘಟ ಸರ್ಪಗಳಿವೆ ಎನ್ನುವುದು ನಿಮಗೆ ಗೊತ್ತಿಲ್ಲ. ನೀವಿರುವ ಕ್ಷೇತ್ರದಲ್ಲೇ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಇದ್ದಾರೆ. ಇಬ್ಬರನ್ನೂ ಎದುರಿಸಿ ರಾಜಕೀಯ ಬದುಕನ್ನು ಕಟ್ಟಿಕೊಂಡು ತೋರಿಸುವಂತೆ ಸವಾಲು ಹಾಕಿದರು.

ದೇವೇಗೌಡರು ಸ್ವಾರ್ಥಕ್ಕಾಗಿ ಎಂದಿಗೂ ರಾಜಕಾರಣ ಮಾಡಿದವರಲ್ಲ. ನೀರಾವರಿ ಯೋಜನೆಗಳ ಜಾರಿಗೆ, ರೈತರು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ದೇವೇಗೌಡರು ರೈತಪರ ಕಾಳಜಿ ಇರುವ ರೈತನಾಯಕ. ಪ್ರಧಾನ ಮಂತ್ರಿ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದವರು. ಅಂತಹವರನ್ನು ಮನೆಯಲ್ಲಿರಿ ಎನ್ನುವುದು ನಿಮ್ಮ ಸಣ್ಣತನದ ರಾಜಕಾರಣವನ್ನು ತೋರಿಸುತ್ತದೆ ಎಂದು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT