ರಾಜು ಪೂಜಾರಿ  
ರಾಜಕೀಯ

ವಿಧಾನ ಪರಿಷತ್ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ವಿಧಾನ ಪರಿಷತ್ ಉಪಚುನಾವಣೆಗೆ ರಾಜು ಪೂಜಾರಿ ಬೈಂದೂರು ಅವರು ಕಾಂಗ್ರೆಸ್ ಅಭ್ಯರ್ಥಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಬೆಂಗಳೂರು: ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ಕಾಂಗ್ರೆಸ್ ಬುಧವಾರ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ವಿಧಾನ ಪರಿಷತ್ ಉಪಚುನಾವಣೆಗೆ ರಾಜು ಪೂಜಾರಿ ಬೈಂದೂರು ಅವರು ಕಾಂಗ್ರೆಸ್ ಅಭ್ಯರ್ಥಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಈಗಾಗಲೇ ಬಿಜೆಪಿ ಸಹ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಕಿಶೋರ್ ಕುಮಾರ್ ಪುತ್ತೂರ್​ ಅವರಿಗೆ ಟಿಕೆಟ್ ನೀಡಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ನ ಒಂದು ಸ್ಥಾನಕ್ಕೆ ಇದೇ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದೆ.

ಅಕ್ಟೋಬರ್ 21 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

'ಮಲ್ಲಘಟ್ಟ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನನಗೆ ಮನಶಾಂತಿ ಸಿಗುತ್ತದೆ:ಡಿ ಕೆ ಶಿವಕುಮಾರ್ ರೋಡ್‌ಶೋ; ಬೆಂಬಲಿಗರ ಸಂಭ್ರಮ-Video

ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ ‘ಜಲಯೋಧ’ನ ಪ್ರೇರಣಾದಾಯಕ ಯಶೋಗಾಥೆ..!

ಪ್ಲಾಸ್ಟಿಕ್ ಬಾಟಲಿ ನಿಷೇಧ ಆದೇಶ ಉಲ್ಲಂಘನೆ: ಸರ್ಕಾರಿ ಕಚೇರಿಗಳಿಗೆ KSPCB ಕಠಿಣ ಎಚ್ಚರಿಕೆ, ನೋಟಿಸ್ ಜಾರಿ..!

NEET-UG 2026: ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ 'ಸೋರಿಕೆ' ಆರೋಪ ತಳ್ಳಿಹಾಕಿದ NTA; ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

SCROLL FOR NEXT