ಸತೀಶ್ ಜಾರಕಿಹೊಳಿ 
ರಾಜಕೀಯ

ನಮ್ಮ ಪಕ್ಷ ಸಿದ್ಧಾಂತಗಳು ಅವರಿಗೆ ಹೊಂದುವುದಿಲ್ಲ; ಒಂದು ವರ್ಷದಲ್ಲಿ ಯತ್ನಾಳ್ ಮರಳಿ ಗೂಡಿಗೆ: ಸತೀಶ್ ಜಾರಕಿಹೊಳಿ ಭವಿಷ್ಯ

ಯತ್ನಾಳ್ ಅವರನ್ನು ಒಂದು ವರ್ಷದಲ್ಲಿ ಬಿಜೆಪಿಯವರೇ ಕರೆಯುತ್ತಾರೆ. ಇವರಿಗೆ ಅವರು ಅನಿವಾರ್ಯ. ಅವರು ಇವರಿಗೆ ಅನಿವಾರ್ಯ.

ಬೆಳಗಾವಿ: ನಮ್ಮ ಸಿದ್ದಾಂತ, ಬಿಜೆಪಿ ಸಿದ್ದಾಂತಗಳು ಬೇರೆ ಬೇರೆಯಾಗಿದೆ. ಅವರ ಸಿದ್ಧಾಂತ, ಹೋರಾಟ ಬಿಜೆಪಿಗೆ ಸೂಟ್ ಆಗುತ್ತದೆ. ನಮ್ಮ ಸಿದ್ಧಾಂತಗಳು ಅವರಿಗೆ ಸೂಟ್ ಆಗಲ್ಲ, ಹಾಗಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರನ್ನು ಒಂದು ವರ್ಷದಲ್ಲಿ ಬಿಜೆಪಿಯವರೇ ಕರೆಯುತ್ತಾರೆ. ಇವರಿಗೆ ಅವರು ಅನಿವಾರ್ಯ. ಅವರು ಇವರಿಗೆ ಅನಿವಾರ್ಯ. ಹಾಗಾಗಿ, ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್​ ಆಗುತ್ತಾರೆ ಎಂದು ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುತ್ತೇವೆ ಎನ್ನುವ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ಬಿಟ್ಟಿದ್ದು. ಯತ್ನಾಳ್ ಹೊಸ ಪಕ್ಷ ಕಟ್ಟುವುದು ಶುದ್ದ ಸುಳ್ಳು. ಒಂದೇ ವರ್ಷದಲ್ಲಿ ಮರಳಿ ಗೂಡಿಗೆ ಬರುತ್ತಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಬೆಲೆ ಏರಿಕೆಗಳು ಆಗಿವೆ. ಅನಾವಶ್ಯಕವಾಗಿ ಪ್ರತಿಭಟನೆ ಅಗತ್ಯವಿಲ್ಲ. ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಅಗತ್ಯವಿದೆ.

ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು.‌ ಬೆಲೆ ಏರಿಕೆ ವಿಷಯಗಳ ಬಗ್ಗೆ ಆಯಾ ಇಲಾಖೆಗಳು ಸ್ಪಷ್ಪನೆ ನೀಡಬೇಕಿದೆ. ಬೆಲೆ ಏರಿಕೆ ಬಗ್ಗೆ ಚರ್ಚಿಸಿ ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಬದಲು ಪ್ರತಿಭಟನೆ ನಡೆಸುವುದು ಅನಾವಶ್ಯಕ. ಯಾವುದೇ ಸಮಸ್ಯೆಯಾದರೂ ಮಾರ್ಗ ಕಂಡುಕೊಳ್ಳಬೇಕು, ಅದನ್ನು ಬಿಟ್ಟು ಪ್ರತಿಭಟನೆಗೆ ಇಳಿಯುವುದು ಸರಿಯಲ್ಲ ಎಂದು ಬಿಜೆಪಿಯವರ ಅಹೋರಾತ್ರಿ ಧರಣಿಗೆ ತಿರುಗೇಟು ಕೊಟ್ಟರು.

ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕೆಂಬ ಬಹುದಿನಗಳ ಗುರಿ ಇದೆ. ಹೀಗಾಗಿ, ಉತ್ತಮ ಕಾರ್ಖಾನೆ ನಿರ್ಮಾಣವಾದರೆ ಯುವಕರಿಗೂ ಅನುಕೂಲ. ಹೀಗಾಗಿ, ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ಬೆಳಗಾವಿಯ ಅಭಿವೃದ್ಧಿ ಬಗ್ಗೆ ಅಷ್ಟೇ ಚರ್ಚಿಸಲಾಗಿದೆ. ಹೈಕಮಾಂಡ್​​ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT