ಮುನಿರತ್ನ ಮತ್ತು ಕುಸುಮಾ 
ರಾಜಕೀಯ

ಹೆಣ್ಣಿಗೆ MLA ಆಗಬೇಕೆಂಬ ಹುಚ್ಚು ಹಿಡಿದರೆ ಬಿಡಿಸಲಾಗದು: ಕುಸುಮಾಗೆ ಮುನಿರತ್ನ ಟಾಂಗ್!

ಆಕೆ ಶಾಸಕಿ ಆಗಬೇಕು ಎಂದು ಒಂದೇ ಹಠ ಹಿಡಿದಿದ್ದಾರೆ. ಅದಕ್ಕಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದ್ದಾರೆ.

ಬೆಂಗಳೂರು: ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಅದನ್ನು ಬಿಡಿಸಬಹುದು, ಆದರೆ ಎಂಎಲ್​ಎ ಆಗುವ ಹುಚ್ಚು ಹಿಡಿದರೆ ಬಿಡಿಸಲಾಗುವುದಿಲ್ಲ ಎಂದು ಶಾಸಕ ಮುನಿರತ್ನ ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಟಾಂಗ್ ನೀಡಿದ್ದಾರೆ.

ರಾಜರಾಜೇಶ್ವರಿ ನಗರದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣಿಗೆ ಯಾವ ಹುಚ್ಚು ಹಿಡಿದ್ರೂ ತಪ್ಪಿಸಬಹುದು. ಆದ್ರೆ, ಎಂ.ಎಲ್‌.ಎ ಆಗುವ ಹುಚ್ಚು ಹಿಡಿದರೆ ಅದನ್ನು ತಪ್ಪಿಸೋಕೆ ಆಗಲ್ಲ ಎಂದಿದ್ದಾರೆ. ಆಕೆ ಶಾಸಕಿ ‌ಆಗಬೇಕು ಎಂದು ಒಂದೇ ಹಠ ಹಿಡಿದಿದ್ದಾರೆ. ಅದಕ್ಕಾಗಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದ್ದಾರೆ.

ಶಾಸಕಿ ಆಗಬೇಕು ಅಂದ್ರೆ ಮುನಿರತ್ನಗೆ ಹುಚ್ಚು ಹಿಡಿಯಬೇಕು. ಅದಕ್ಕೆ ಮುನಿರತ್ನನಿಗೆ ಹುಚ್ಚು ಹಿಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಯಾರ ಹಣೇಲಿ ಏನು ಬರೆದಿದೆಯೋ ಗೊತ್ತಿಲ್ಲ, ಭೂಮಿಗೆ ಬಂದವರೆಲ್ಲ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದರು. ಅವರಿಂದಲೇ ನಾನು ಹೋಗಬೇಕು ಅಂತಿದ್ರೆ, ಯಾರೂ ತಪ್ಪಿಸೋದಕ್ಕೆ ಆಗಲ್ಲ.

ಯಾವಾಗ ಏನು ಬೇಕಿದ್ರೂ ಆಗಬಹುದು, ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ಈ ಮಧ್ಯೆ ಪೊಲೀಸರು ನನ್ನ ರಕ್ಷಣೆಗೆ ನಿಂತಿದ್ದಾರೆ, ಅವರಿಗೆ ನನ್ನ ಧನ್ಯವಾದ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಜನಸಂಖ್ಯಾ ಬದಲಾವಣೆ ಪರಿಶೀಲಿಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

SCROLL FOR NEXT